ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿಗೆ 10 ವರ್ಷ: ಉಗ್ರರ ಸುಳಿವು ನೀಡಿದರೆ 35 ಕೋಟಿ ರು

|
Google Oneindia Kannada News

ದೇಶವನ್ನೇ ನಡುಗಿಸಿದ 26/11ರ ಮುಂಬೈ ದಾಳಿ ಸಂಭವಿಸಿ ಇಂದಿಗೆ 10 ವರ್ಷಗಳಾಗಿವೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಅವರು, 2008ರ ಮುಂಬೈ ದಾಳಿಗೆ ಸಂಬಂಧಿಸಿದಂತೆ ಸಂಚು ರೂಪಿಸಿದವರ ಬಗ್ಗೆ ಸುಳಿವು ನೀಡಿದವರಿಗೆ 5 ಮಿಲಿಯನ್ ಡಾಲರ್ (35 ಕೋಟಿ ರು) ಬಹಮಾನ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ ಎಂದು ಘೋಷಿಸಿದ್ದಾರೆ.

ಯ ಹೊಣೆಗಾರರ ವಿರುದ್ಧ ಪಾಕಿಸ್ತಾನವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ದಾಳಿಯ ಯೋಜನೆ ರೂಪಿಸಿದವರ ಮಾಹಿತಿ ನೀಡಿದರೆ 35 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಮುಂಬೈನಲ್ಲಿ ಮೂರು(26 ರಿಂದ 29, 2008) ದಿನಗಳ ಕಾಲ ನಡೆಸಿದ ಹಿಂಸಾಚಾರದಲ್ಲಿ 166 ಜನ ಮೃತಪಟ್ಟು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಲಷ್ಕರ್ ಇ ತೋಯ್ಬಾ (ಎಲ್ ಇಟಿ) ಉಗ್ರರ ಈ ದುಷ್ಕೃತ್ಯವನ್ನು ಅಮೆರಿಕ ಖಂಡಿಸಿದೆ.

info@rewardsforjustice.net

10 ವರ್ಷವೇ ಕಳೆದರೂ ಕೂಡ ಮುಂಬೈ ದಾಳಿಗೆ ಯೋಜನೆ ರೂಪಿಸಿ ಭಾಗಿಯಾದವರಿಗೆ ಶಿಕ್ಷೆಯಾಗಿಲ್ಲ. ಹಾಗಾಗಿ ಲಷ್ಕರ್ ಎ ತೋಯ್ಬಾ ಮತ್ತು ಅದರ ಅಂಗಸಂಸ್ಥೆಗಳು ಸೇರಿದಂತೆ ದುಷ್ಕೃತ್ಯಕ್ಕೆ ಕಾರಣವಾದ ಭಯೋತ್ಪಾದಕರನ್ನು ಸದೆಬಡಿಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಿದ್ಧಪಡಿಸಿರುವ ನಿರ್ಬಂಧಗಳನ್ನು ಜಾರಿಗೊಳಿಸಲು ಎಲ್ಲ ದೇಶಗಳಿಗೂ ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಜತೆ ಚರ್ಚಿಸಲಾಗಿದೆ ಎಂದು ಪೊಂಪೆ ತಿಳಿಸಿದರು.

ಅಂದಿನ ದಾಳಿಯಲ್ಲಿ ಅಮೆರಿಕದ ನಾಗರಿಕರು ಸೇರಿದಂತೆ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬ ಮತ್ತು ಸ್ನೇಹಿತ ಜತೆಗೆ ನಿಲ್ಲುತ್ತೇವೆ ಎಂದಿದ್ದಾರೆ.

ಅಮೆರಿಕದ ರಿವಾರ್ಡ್‌ ಫಾರ್‌ ಜಸ್ಟೀಸ್‌, ಮುಂಬೈ ದಾಳಿಯ ಸಂಚು ರೂಪಿಸಿದ್ದವರು ಮತ್ತು ಅಪಾರ ಸಾವು ನೋವಿಗೆ ಕಾರಣರಾದ ಲಷ್ಕರ್ ಸ್ಥಾಪಕರಾದ ಹಫೀಜ್ ಮೊಹಮ್ಮದ್ ಸಯೀದ್ ಹಾಗೂ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ಅವರ ಬಗ್ಗೆ ಸುಳಿವು ನೀಡುವಂತೆ ಕೋರಲಾಗಿದೆ. ನಿಮಗೆ ಯಾವುದೇ ಮಾಹಿತಿ ಸಿಕ್ಕರೂ ಈ ಅಮೆರಿಕ ರಿವಾರ್ಡ್ ಫಾರ್ ಜಸ್ಟೀಸ್ ಗೆ ಇಮೇಲ್ ಮಾಡಬಹುದು.

English summary
The U.S. Department of State's Rewards for Justice (RFJ) Program is offering a reward of up to $5 million for information leading to the arrest or conviction in any country of any individual who committed, conspired to commit, or aided or abetted in the execution of the 2008 Mumbai attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X