ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ ಠಾಕ್ರೆ ಪತ್ನಿ ಶರ್ಮಿಳಾಗೆ ಸಾಕುನಾಯಿ ಕಚ್ಚಿದ್ದೇಕೆ?

By Mahesh
|
Google Oneindia Kannada News

ಮುಂಬೈ, ಆಗಸ್ಟ್ 21: ಮಹಾರಾಷ್ಟ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪತ್ನಿ ಶರ್ಮಿಳಾ ಅವರು 'ನಾಯಿ ಕಡಿತ' ದ ಆಘಾತದಿಂದ ಹೊರ ಬಂದಿದ್ದಾರೆ. ಮುಖಕ್ಕೆ ಸರ್ಜರಿಯಾಗಿದೆ. ಸಾಕಿದ ನಾಯಿ 'ಬಾಂಡ್' ಗೆ ರಾಜ್ ಠಾಕ್ರೆ ಅವರು ಶಿಕ್ಷೆಯನ್ನು ನೀಡಿದ್ದಾರಂತೆ. ಈ ನಡುವೆ ಪ್ರೀತಿಯ ನಾಯಿ ತನ್ನ ಒಡತಿಯನ್ನೇ ಕಚ್ಚಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಬಹುಶಃ ರಾಜ್ ಠಾಕ್ರೆ ಅವರು ಈ ನಾಯಿಯನ್ನು ಬಿಹಾರದಿಂದ ತಂದಿರಬೇಕು. ಮರಾಠಿ ಮಾನುಷ್ ಗಳ ಮಾತು ಕೇಳಲಾಗದೆ ಕಚ್ಚಿಬಿಟ್ಟಿದೆ ಎಂಬ ಜೋಕ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಅದರೆ, ನಾಯಿ ಕಡಿತದ ಬಗ್ಗೆ ವೈಜ್ಞಾನಿಕ ಕಾರಣವನ್ನು ಹುಡುಕಿರುವ ಹಿಂದೂಜಾ ಆಸ್ಪತ್ರೆ ವೈದ್ಯರು, ನಾಯಿಗೆ ಕಡಿವಾಣ ಹಾಕಿದರೆ, ರೋಷ ಹೆಚ್ಚಾದರೆ ಈ ರೀತಿ ವರ್ತಿಸುತ್ತವೆ ಎಂದಿದ್ದಾರೆ.

ಮುದ್ದಿನಿಂದ ಸಾಕಿದ ನಾಯಿಗೆ 'ಬಾಂಡ್' ಎಂದು ಇಂಗ್ಲೀಷ್ ಹೆಸರಿಟ್ಟ ರಾಜ್ ಠಾಕ್ರೆ ಅವರು ಈಗ ಪತ್ನಿ ಪಕ್ಕದಲ್ಲಿ ಕುಳಿತು ಆರೈಕೆ ಮಾಡಿದ್ದಾರೆ. ನೆಚ್ಚಿನ ನಾಯಿ ತನ್ನ ಒಡತಿಯ ಮುಖವನ್ನು ವಿರೂಪಗೊಳಿಸಿ ಆಕೆಗೆ ಆಘಾತ ನೀಡಿದೆ. ಇತ್ತ ರಾಜ್ ಠಾಕ್ರೆಗೆ ರಾಜಕೀಯವಾಗಿ ಹಿನ್ನಡೆ ಹಾಗೂ ಮನೆಯಲ್ಲಿ ನಡೆದ ಘಟನೆಯಿಂದ ವಿಚಲಿತರಾಗಿದ್ದಾರೆ.

Revealed! Possible reasons why pet dog 'Bond' attacked MNS chief's wife Sharmila

ಮಹಾರಾಷ್ಟ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪತ್ನಿ ಶರ್ಮಿಳಾ ಅವರು ಸಾಕಿರುವ ನಾಯಿಯೇ ಅವರನ್ನು ಕಚ್ಚಿದ ಘಟನೆ ಮಂಗಳವಾರ ನಡೆದಿತ್ತು. ರಾಜ್ ಠಾಕ್ರೆ ದಂಪತಿಗಳಿಗೆ ನಾಯಿಗಳೆಂದರೆ ಇಷ್ಟ. ಒಂದು ನಾಯಿಗೆ ಮುದ್ದಿನಿಂದ 'ಬಾಂಡ್' ಎಂದು ಹೆಸರಿಟ್ಟಿದ್ದರು. ಗಂಭೀರ ಸ್ವಭಾವದ ಈ ರೀತಿ ಕರೆಯುತ್ತಿದ್ದಾರೆ. ಮತ್ತೊಂದು ನಾಯಿಗೆ 'ಜೇಮ್ಸ್' ಎಂದು ಹೆಸರಿಟ್ಟಿದ್ದಾರೆ.

ಶರ್ಮಿಳಾ ಅವರ ಮುಖಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಮುಖದ ಮೂಳೆಗಳಿಗೆ ಹಾನಿಯಾಗುವಷ್ಟು ಆಳಕ್ಕೆ ನಾಯಿಯ ಹಲ್ಲಿನ ಗುರುತು ಕಂಡು ಬಂದಿತ್ತು. ಮುಖ ಹಾಗೂ ಗಲ್ಲ ಎರಡು ಸೇರಿ 65ಕ್ಕೂ ಹೆಚ್ಚು ಹೊಲಿಗೆ ಹಾಕಲಾಗಿದೆ.

ಏನು ಕಾರಣ: ಸಾಮಾನ್ಯವಾಗಿ ನಾಯಿಗಳು ರೊಚ್ಚಿಗೇಳುವುದು ಅವುಗಳಿಗೆ ವಿರಹ ವೇದನೆ ಉಂಟಾದಾಗ. ಸರಿಯಾದ ಸಮಯಕ್ಕೆ ಸಂಭೋಗಕ್ಕೆ ಆಸ್ಪದ ಸಿಗದಿದ್ದರೆ ಯಾರನ್ನು ಲೆಕ್ಕಿಸದೆ ದಾಳಿ ಮಾಡಿಬಿಡುತ್ತವೆ. ಈ ಹಿಂದೆ ಬೆಂಗಳೂರಿನಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಾದಾಗ ಬೀದಿನಾಯಿಗಳನ್ನು ಹಿಡಿದು ತಂದು ಸಂತಾನ ಹರಣ ಚಿಕಿತ್ಸೆ ಮಾಡಲು ಪಾಲಿಕೆ ಮುಂದಾಗಿತ್ತು. ನಂತರ ಪೆಟಾ, ಕೂಪಾ ಸೇರಿದಂತೆ ಪ್ರಾಣಿ ಪ್ರಿಯ ಸಂಸ್ಥೆಗಳ ವಿರೋಧದಿಂದ ನಾಯಿಗಳು ಬಚಾವ್ ಆಗಿದ್ದವು.

ಅದರೆ, ಸಾಕಿದ ನಾಯಿಗೆ ಆರೈಕೆ ಹೆಚ್ಚಾಗೇ ಸಿಗುತ್ತದೆ. ಆದರೂ ಕೆಲ ಋತುಗಳಲ್ಲಿ ನಾಯಿಗಳಿಗೆ ಸ್ವತಂತ್ರವಾಗಿ ವಿಹರಿಸಲು, ಆಸೆಯಿಂದ ಕಾಣುವ ನಾಯಿಯನ್ನು ರಮಿಸಲು ಬಿಡದಿದ್ದರೆ ರೊಚ್ಚಿಗೇಳುತ್ತವೆ. ಈ ಪ್ರಕರಣದಲ್ಲೂ ಇದೇ ರೀತಿ ಆಗಿರುವ ಶಂಕೆಯಿದೆ ಎಂದು ವೈದ್ಯರು ಹೇಳಿದ್ದಾರೆ.

ಪತ್ನಿಯನ್ನು ಕಚ್ಚಿದ ನಾಯಿ ಬಾಂಡ್ ಜೊತೆಗೆ ಜೇಮ್ಸ್ ನನ್ನು ರಾಜ್ ಠಾಕ್ರೆ ಶಿಕ್ಷಿಸಿದ್ದಾರೆ. ಎರಡು ನಾಯಿಗಳನ್ನು ಮುಂಬೈನ ದಾದರ್ ನಿವಾಸವಾದ ಕೃಷ್ಣ ಕುಂಜ್ ನಿಂದ ನಾಯಿಗಳನ್ನು ಕರ್ಜಾತ್ ನಲ್ಲಿರುವ ತೋಟದ ಮನೆಗೆ ಕಳಿಸಿದ್ದಾರೆ.

English summary
It looks like Maharashtra Navnirman Sena (MNS) chief Raj Thackeray is facing tough time these days. Already marginalized by political parties in recent State election, Raj Thackeray is struggling at home front too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X