ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಡೆಕ್ಸ್‌ನಲ್ಲಿ ರಾಖಿ ಕಳುಹಿಸಿ ಸ್ಮಾರ್ಟ್‌ಫೋನ್‌ ಗೆಲ್ಲಿ

By Ashwath
|
Google Oneindia Kannada News

ಮುಂಬೈ ಆ.7: ಫೆಡೆಕ್ಸ್ ಕಾರ್ಪ್ ಅಂಗಸಂಸ್ಥೆಯಾಗಿರುವ ಫೆಡೆಕ್ಸ್ ಎಕ್ಸ್‌ಪ್ರೆಸ್‌‌ ರಾಖಿ ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಸ್ಮಾರ್ಟ್‌ಫೋನ್‌ ಗೆಲ್ಲುವ ಸ್ಪರ್ಧೆ‌ಯನ್ನು ಆಯೋಜಿಸಿದೆ.

ದೇಶದ 19 ಸಾವಿರ ಸ್ಥಳ ಮತ್ತು ವಿಶ್ವದ 220 ದೇಶಗಳಿಗೆ ಸಹೋದರಿಯಯರು ತನ್ನ ಮೂಲಕ ರಾಖಿಯನ್ನು ಕಳುಹಿಸಬಹುದು ಎಂದು ಫೆಡೆಕ್ಸ್ ಎಕ್ಸ್‌ಪ್ರೆಸ್‌ ತಿಳಿಸಿದೆ.[ಸ್ನೇಹದ ಅನುಬಂಧಕ್ಕೆ ಈ ಫ್ರೆಂಡ್ ಶಿಪ್ ರಾಖಿ]

ದೇಶದಲ್ಲಿ 200 ರೂ, ವಿದೇಶಕ್ಕೆ 1500 ರೂ ಬೆಲೆಯಲ್ಲಿ ರಾಖಿ ಕಳುಹಿಸುವರು ಈ ಸ್ಪರ್ಧೆ‌ಯಲ್ಲಿ ಭಾಗವಹಿಸಬಹದಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಕೆಲವು ನಿಯಮಗಳಿದ್ದು ಈ ನಿಮಮವನ್ನು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ:www.fedex.com/in/rakhioffer

FedEx Rakhi offer 2014
ಫೆಡೆಕ್ಸ್ ಎಕ್ಸ್‌ಪ್ರೆಸ್‌‌ : ಜಗತ್ತಿನ ಅತಿ ದೊಡ್ಡ ಎಕ್ಸ್‌ಪ್ರೆಸ್‌ ಸಾಗಾಟ ಕಂಪೆನಿ ಫೆಡೆಕ್ಸ್ ಎಕ್ಸ್‌ಪ್ರೆಸ್‌‌. 220ಕ್ಕೂ ಹೆಚ್ಚು ರಾಷ್ಟ್ರಗಳಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆಯನ್ನು ಕಲ್ಪಿಸುತ್ತಿದೆ. ಕಾಲಮಿತಿಯಲ್ಲಿ ಆಂದರೆ ಒಂದರಡು ದಿನಗಳಲ್ಲಿ ಸೇವೆ ನೀಡಲು ಫೆಡೆಕ್ಸ್ ಎಕ್ಸ್‌‌ಪ್ರೆಸ್‌ ವಾಯು ಹಾಗೂ ನೆಲ ಮಾರ್ಗದ ಸೇವೆಯನ್ನು ನೀಡುತ್ತದೆ. ಅಲ್ಲದೇ ಖಚಿತ ಸಮಯಕ್ಕೆ ಸರಕು ಮುಟ್ಟಿಸುವ ಗ್ಯಾರಂಟಿಯನ್ನು ನೀಡುತ್ತದೆ.[ದೇಶದ ಬೆಸ್ಟ್‌ ಕಂಪೆನಿ ಪಟ್ಟಿ: ಫೆಡೆಕ್ಸ್ ಎಕ್ಸ್‌ಪ್ರೆಸ್‌ಗೆ ಸ್ಥಾನ]

ಫೆಡೆಕ್ಸ್ ಕಾರ್ಪ್ : ವಿಶಾಲ ತಳಹದಿಯ ಸಾಗಾಟ, ಇ ಕಾಮರ್ಸ್ ಹಾಗೂ ಬಿಸಿನೆಸ್ ಸೇವೆಗಳಲ್ಲಿ ಫೆಡೆಕ್ಸ್ ಕಾಪ್ಸ್ ಮುಂಚೂಣಿಯಲ್ಲಿದ್ದು, 46 ಶತಕೋಟಿ ಡಾಲರ್ ವಾರ್ಷಿಕ ಆದಾಯ ಹೊಂದಿದೆ. ಫೆಡೆಕ್ಸ್ ಕಾರ್ಪ್ ತನ್ನ ವಿವಿಧ ಕಾರ್ಯಾಚರಣಾ ಕಂಪೆನಿಗಳ ಮೂಲಕ ಸಾಮೂಹಿಕವಾಗಿ ವಿಶ್ವಾಸಾರ್ಹ ಹಾಗೂ ಸಮಗ್ರ ಸೇವೆ ನೀಡುತ್ತಿದ್ದು, ಜಗತ್ತಿನ ನಂಬಿಗಸ್ಥ ಉದ್ಯೋಗದಾತರು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಮೂರು ಲಕ್ಷಕ್ಕೂ ಹೆಚ್ಚಿರುವ ಸಿಬ್ಬಂದಿ ಗ್ರಾಹಕರು ಮತ್ತು ಸಮುದಾಯದ ಬೇಡಿಕೆಗೆ ತಕ್ಕಂತೆ ಸುರಕ್ಷೆ, ಅತ್ಯುನ್ನತ ನೈತಿಕತೆ ಹಾಗೂ ವೃತ್ತಿಪರ ಗುಣಮಟ್ಟವನ್ನು ಕಾಯ್ದುಕೊಂಡು ಬರುತ್ತಿದ್ದಾರೆ.

English summary
FedEx Express, a subsidiary of FedEx Corp. (NYSE: FDX) and the world’s largest express transportation company, announces the launch of its FedEx Rakhi offer 2014. The offer gives sisters an exciting opportunity to win a smartphone simply by shipping a Rakhi with FedEx and participating in the contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X