ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬೊಂಬಾಟ್ ಐಡಿಯಾ!

|
Google Oneindia Kannada News

ಮುಂಬೈ, ಜುಲೈ.07: ಕೊರೊನಾವೈರಸ್ ಸೋಂಕು ಹರಡುವಿಕೆ ವೈದ್ಯರಲ್ಲೂ ಭಯವನ್ನು ಹುಟ್ಟಿಸಿದೆ. ದೇಶಾದ್ಯಂತ ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯರೇ ಭಯ ಪಡುವಂತಾ ದುಸ್ಥಿತಿ ಎದುರಾಗಿದೆ.

Recommended Video

ಕಪ್ಪು ಪಟ್ಟಿ ಕಟ್ಟಿಕೊಂಡು ಬೀದಿಗೆ ಬಂದ ಡಾಕ್ಟರ್ ಮತ್ತು ನರ್ಸ್ ಗಳು | Oneindia Kannada

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುುದಕ್ಕಾಗಿ ಹೊಸ ಐಡಿಯಾವನ್ನು ಮಾಡಿದ್ದಾರೆ. ಮುಂಬೈನ ಪೊದ್ದಾರ್ ಆಸ್ಪತ್ರೆಯಲ್ಲಿ ಕೊವಿಡ್-19 ಸೋಂಕಿತರಿಗೆ ಔಷಧಿ, ಊಟ ಮತ್ತು ನೀರು ನೀಡುವುದಕ್ಕೆ ನರ್ಸ್ ಗಳ ಬದಲು ರಿಮೋಟ್ ಕಂಟ್ರೋಲ್ ರೋಬೋಟ್ 'ಗೊಲ್ಲಾರ್' ಅನ್ನು ಬಳಸಿಕೊಳ್ಳಲಾಗುತ್ತಿದೆ.

Remote-Controlled Robot Is Being Used At Mumbais Poddar Hospital

 ಏರ್‌ಪೋರ್ಟ್‌ನಲ್ಲಿ ಇನ್ನು ರೊಬೊಟ್‌ಗಳದ್ದೇ ದರ್ಬಾರು, ಏನೇನು ಕೆಲಸ ಮಾಡುತ್ತೆ ಗೊತ್ತಾ? ಏರ್‌ಪೋರ್ಟ್‌ನಲ್ಲಿ ಇನ್ನು ರೊಬೊಟ್‌ಗಳದ್ದೇ ದರ್ಬಾರು, ಏನೇನು ಕೆಲಸ ಮಾಡುತ್ತೆ ಗೊತ್ತಾ?

ಕೊರೊನಾವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಿರುವವರನ್ನು ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದೆ. ಇಂಥ ಶಂಕಿತರ ಜೊತೆಗೆ ನೇರ ಸಂಪರ್ಕದಿಂದ ಕೊರೊನಾ ವಾರಿಯರ್ಸ್ ಅಂತರ ಕಾಯ್ದುಕೊಳ್ಳಲು ರೋಬೋಟ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಕ್ವಾರೆಂಟೈನ್ ವಾರ್ಡ್ ನಲ್ಲಿ ರೋಬೋಟ್ ನಡೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ 5134 ಮಂದಿಗೆ ಕೊವಿಡ್-19:

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಮಹಾಸ್ಫೋಟ ಸಂಭವಿಸಿದೆ. ಒಂದೇ ದಿನ ರಾಜ್ಯದಲ್ಲಿ 5134 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, 224 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು 2,17,121ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1,18,558 ಮಂದಿ ಗುಣಮುಖರಾಗಿದ್ದಾರೆ. ಬಾಕಿ ಉಳಿದ 89,294 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 9250ಕ್ಕೆ ಏರಿಕೆಯಾಗಿದೆ.

English summary
A Remote-Controlled Robot Is Being Used At Mumbai's Poddar Hospital To Serve Medicines, Food And Water To People Admitted In Quarantine Ward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X