ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ

|
Google Oneindia Kannada News

ಮುಂಬೈ, ಏಪ್ರಿಲ್ 14: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ನಡೆಸುತ್ತಿರುವ ಆಸ್ಪತ್ರೆಯೂ ಪ್ರಸ್ತುತ COVID-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಮುನ್ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ವೈದ್ಯಕೀಯ ಯೋಧರಿಗೆ ಹೆಚ್ಚುವರಿ ಸಂಬಳ ಮತ್ತು ಇತರ ಸೌಲಭ್ಯಗಳೊಂದಿಗೆ ಬಹುಮಾನ ನೀಡಲು ಸಂಸ್ಥೆಯೂ ನಿರ್ಧರಿಸಿದೆ.

COVID-19 ಚಿಕಿತ್ಸೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಂಬೈನ ಸರ್ H N ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಸಿಬ್ಬಂದಿ ಹೆಚ್ಚುವರಿ ಒಂದು ತಿಂಗಳ ಸಿಟಿಸಿಯನ್ನು ಪಡೆಯುತ್ತಾರೆ ಮತ್ತು ಸೆವೆನ್ ಹಿಲ್ಸ್ ಆಸ್ಪತ್ರೆ, ತುರ್ತು ಕೋಣೆ (ಇಆರ್) ಮತ್ತು ಎರಡು ಪ್ರತ್ಯೇಕ ಕೋಣೆಗಳಲ್ಲಿ ನಿಯೋಜಿಸಲಾದ ಮುಂಚೂಣಿ ಸಿಬ್ಬಂದಿ ಹೆಚ್ಚುವರಿ ವೇತನದ ಜೊತೆಗೆ ಹೆಚ್ಚುವರಿ ಪಾವತಿಯನ್ನು ಪಡೆಯುತ್ತಾರೆ.

ತಮಿಳುನಾಡಿನಲ್ಲಿ ವೈದ್ಯರ ನಿವೃತ್ತಿ ಅವಧಿ ಎರಡು ತಿಂಗಳು ವಿಸ್ತರಣೆತಮಿಳುನಾಡಿನಲ್ಲಿ ವೈದ್ಯರ ನಿವೃತ್ತಿ ಅವಧಿ ಎರಡು ತಿಂಗಳು ವಿಸ್ತರಣೆ

ಈ ಕುರಿತು ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ (RFH) ಸಿಬ್ಬಂದಿಗೆ ಪತ್ರ ಬರೆದಿರುವ ಮುಖ್ಯ ಕಾರ್ಯನಿರ್ವಾಹಕ ತರಂಗ್ ಜಿಯಾನ್ಚಂದಾನಿ ಅವರು, "COVID ವಿರುದ್ಧದ ಈ ಯುದ್ಧದ ವಿರುದ್ಧ ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡುತ್ತಿರುವ ಇಡೀ RFH ತಂಡಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಾವು ನಿಜವಾದ ಯೋಧರು ಮತ್ತು ನಿಜವಾದ ವೀರರು. ಎಲ್ಲರ ಸಾಟಿಯಿಲ್ಲದ ಬದ್ಧತೆ, ಧೃಡ ನಿಶ್ಚಯ ಮತ್ತು ಬೆಂಬಲದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಈ ಕಠಿಣ ಕಾಲದಲ್ಲಿ ನೀವು ವಿಶೇಷವಾಗಿ ಸೆವೆನ್ ಹಿಲ್ಸ್ ಮತ್ತು ಇಆರ್ ಐಸೊಲೇಷನ್ ಘಟಕಗಳಲ್ಲಿನ ಸೇವೆ ಸಲ್ಲಿಸುತ್ತಿರುವವರು ನಿಜವಾದ ಯೋಧರು ಎಂದಿದ್ದಾರೆ.

"RFH ಸಿಬ್ಬಂದಿ ಪ್ರದರ್ಶಿಸುತ್ತಿರುವ ನಿರಂತರ ಪ್ರಯತ್ನಗಳು ಮತ್ತು ಉತ್ಸಾಹಕ್ಕಾಗಿ" ಮೆಚ್ಚುಗೆಯ ಸಂಕೇತವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಹೆಚ್ಚುವರಿ ಒಂದು ತಿಂಗಳ ಸಿಟಿಸಿ

ಹೆಚ್ಚುವರಿ ಒಂದು ತಿಂಗಳ ಸಿಟಿಸಿ

" ಈ ಕಠಿಣ ಸಮಯದಲ್ಲಿ ನಮ್ಮ ಎಲ್ಲಾ ಉದ್ಯೋಗಿಗಳು ಸಕ್ರಿಯವಾಗಿ ನಮಗೆ ಸಹಾಯ ಮಾಡುತ್ತಿರುವ ಹಿನ್ನಲೆಯಲ್ಲಿ ಕೃತಜ್ಞತೆ ಮತ್ತು ಮೆಚ್ಚುಗೆಯ ಸೂಚಕವಾಗಿ, ಹೆಚ್ಚುವರಿ ಒಂದು ತಿಂಗಳ ಸಿಟಿಸಿಯನ್ನು ನೀಡಲಿದ್ದೇವೆ. ಸೆವೆನ್ ಹಿಲ್ಸ್, ಇಆರ್ ಮತ್ತು ಎರಡು ಪ್ರತ್ಯೇಕ ಕೋಣೆಗಳಲ್ಲಿ ನಿಯೋಜಿಸಲಾಗಿರುವ ನಮ್ಮ ಕೆಚ್ಚೆದೆಯ ಮುಂಚೂಣಿ ಸಿಬ್ಬಂದಿಗೆ, ನಾವು ಅವರ ಧೈರ್ಯಕ್ಕೆ ಮತ್ತು ಬದ್ಧತೆಗಾಗಿ ಒಂದು ತಿಂಗಳ ಸಿಟಿಸಿಯ ಮೇಲೆ ಮತ್ತು ಅದಕ್ಕಿಂತ ಹೆಚ್ಚಿನ ಹೆಚ್ಚುವರಿ ಪಾವತಿಯನ್ನು ಅವರಿಗೆ ನೀಡಲಾಗುವುದು" ಎಂದು ಅವರು ಬರೆದಿದ್ದಾರೆ.

ಬಿಕ್ಕಟ್ಟಿನ ಈ ಸಮಯದಲ್ಲಿ ಮನೆಯ ದಿನಸಿ ವಸ್ತುಗಳನ್ನು ಖರೀದಿಸಲು ಅನಾನುಕೂಲತೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಹಾಸ್ಟೆಲ್‌ನಲ್ಲಿಲ್ಲದ ಸಿಬ್ಬಂದಿಗೆ ದಿನಸಿ ಸಾಮಾನುಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನ

ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನ

"ಸೆವೆನ್ ಹಿಲ್ಸ್ ಮತ್ತು RFHನಲ್ಲಿ COVID ಧೃಡಪಡಿಸಿದ ಮತ್ತು ಶಂಕಿತ ಪ್ರಕರಣಗಳ ರೋಗಿಗಳಿರುವ ಅಪಾಯದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಿಬ್ಬಂದಿಗೆ ಮತ್ತು ಎಲ್ಲಾ ಇತರ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ ಸಮರ್ಪಕ ಮತ್ತು ಲಭ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳನ್ನು ನಾವು ನೀಡುತ್ತಿದ್ದೇವೆ " ಎಂದು ಅವರು ತಿಳಿಸಿದ್ದಾರೆ.

ಸಂದರ್ಶಕರಿಗೆ ಶುಲ್ಕವಿಲ್ಲ

ಸಂದರ್ಶಕರಿಗೆ ಶುಲ್ಕವಿಲ್ಲ

ಅಲ್ಲದೆ, ಎಲ್ಲಾ ಸಂದರ್ಶಕರಿಗೆ (ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಕ), ಮಾರ್ಚ್ 15 ರಿಂದ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಆರ್‌ಎಫ್‌ಹೆಚ್‌ಗೆ ಆಗಮಿಸುವಾಗ ಎಲ್ಲಾ ಉದ್ಯೋಗಿಗಳಿಗೆ ನೀರು, ಬಿಸ್ಕತ್ತು ಮತ್ತು ಮುಖವಾಡಗಳ ಲಭ್ಯತೆಯೊಂದಿಗೆ ಉಚಿತ ಬಸ್ ಸೇವೆಯನ್ನು ಒದಗಿಸುತ್ತೇವೆ "ಎಂದು ಅವರು ಬರೆದಿದ್ದಾರೆ. ಈ ಅವಧಿಯಲ್ಲಿ ಆರ್‌ಎಫ್‌ಹೆಚ್‌ನಲ್ಲಿರುವ ಸಂಪೂರ್ಣ ಸಿಬ್ಬಂದಿಗೆ ಉಚಿತ ಊಟವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೊವಿಡ್19ರೋಗಿಗಳ ವೈದ್ಯಕೀಯ ವೆಚ್ಚ

ಕೊವಿಡ್19ರೋಗಿಗಳ ವೈದ್ಯಕೀಯ ವೆಚ್ಚ

"ಇದಲ್ಲದೆ ಮತ್ತು ಮುಖ್ಯವಾಗಿ, ನಿಮ್ಮಲ್ಲಿ ಯಾರಾದರೂ ಅಥವಾ ನಿಮ್ಮ ಕುಟುಂಬದ ಸದಸ್ಯರು COVID 19 ಸೋಂಕಿಗೆ ಒಳಗಾಗಿದ್ದರೆ ಅಥವಾ ಯಾವುದೇ ವೈದ್ಯಕೀಯ ನೆರವು ಅಗತ್ಯವಿದ್ದರೆ, ಬಿಕ್ಕಟ್ಟಿನ ಈ ಸಮಯದಲ್ಲಿ ನಾವು RILನ ಬೆಂಬಲದೊಂದಿಗೆ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನಿಮ್ಮ ಚಿಕಿತ್ಸೆಯನ್ನು ನಿರ್ವಹಿಸಲು ಬದ್ಧರಾಗಿದ್ದೇವೆ ಮತ್ತು ವೈದ್ಯಕೀಯ ವೆಚ್ಚಗಳು ಸೇರಿದಂತೆ ನಿಮ್ಮೆಲ್ಲರನ್ನೂ ನೋಡಿಕೊಳ್ಳುತ್ತೇವೆ "ಎಂದು ಹೇಳಿದರು.

English summary
A hospital run by billionaire Mukesh Ambani-led Reliance group's philanthropic arm has decided to reward its medical warriors currently leading the fight against the COVID-19 pandemic, with extra salary and other benefits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X