ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಿಕ್‌, ಅನಿಲ್‌ಗೆ ಜಾಮಿನು ನಿರಾಕರಣೆ: ಮಹಾ ಸರ್ಕಾರಕ್ಕೆ ಹಿನ್ನಡೆ

|
Google Oneindia Kannada News

ಮುಂಬೈ, ಜೂ. 9: ಜೂ. 10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿರುವ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಎಂಬ ಇಬ್ಬರು ಬಂಧಿತ ನಾಯಕರಿಗೆ ನ್ಯಾಯಾಲಯ ಇಂದು ಜಾಮೀನು ತಿರಸ್ಕರಿಸಿದ್ದು, ಮಹಾರಾಷ್ಟ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಫೆಬ್ರವರಿಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದರು. ರಾಜ್ಯದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕೂಡ ಇದೇ ಆರೋಪದಲ್ಲಿ ಜೈಲು ಸೇರಿದ್ದಾರೆ. ಹಾಗಾಗಿ ಚುನಾವಣೆ ನಡೆಯಲಿರುವ ಒಂದು ದಿನ ಮುಂದೆ ಮಹಾರಾಷ್ಟ್ರ ಸರ್ಕಾರಕ್ಕೆ ಹಿನ್ನೆಡೆ ಆಗಿದೆ. ಶುಕ್ರವಾರ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಬಂಧಿತ ಈ ಇಬ್ಬರು ನಾಯಕರು ಒಂದು ದಿನದ ಜಾಮೀನು ಕೋರಿದ್ದರು, ಆದರೆ ಅವರಿಗೆ ಮತದಾನದ ಹಕ್ಕು ಇಲ್ಲ ಎಂಬ ಜಾರಿ ನಿರ್ದೇಶನಾಲಯದ ವಾದವನ್ನು ನ್ಯಾಯಾಲಯ ಒಪ್ಪಿದೆ.

ರಾಜ್ಯಸಭೆ ಚುನಾವಣೆ: ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಗೇಮ್ ಪ್ಲಾನ್..!ರಾಜ್ಯಸಭೆ ಚುನಾವಣೆ: ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಗೇಮ್ ಪ್ಲಾನ್..!

 ಶಿವಸೇನೆ ನೇತೃತ್ವದ ಮೈತ್ರಿಕೂಟ

ಶಿವಸೇನೆ ನೇತೃತ್ವದ ಮೈತ್ರಿಕೂಟ

ಇಬ್ಬರೂ ಎನ್‌ಸಿಪಿ ಸದಸ್ಯರಾಗಿದ್ದು, ಇದು ಎನ್‌ಸಿಪಿ ಜೊತೆಗೆ ಶಿವಸೇನೆ ನೇತೃತ್ವದ ಮೈತ್ರಿಕೂಟದ ಆಡಳಿತದ ಭಾಗವಾಗಿದೆ. ಅದೇ ಸಮಯದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕೋವಿಡ್‌ ಇದ್ದಾಗಿಯೂ ನಾಳೆ ಮತ ಚಲಾಯಿಸಬಹುದು. ಮಹಾರಾಷ್ಟ್ರದ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಏಳು ಅಭ್ಯರ್ಥಿಗಳೊಂದಿಗೆ ಎರಡು ದಶಕಗಳ ನಂತರ ಮೊದಲ ಬಾರಿಗೆ ರಾಜ್ಯದಲ್ಲಿ ಸ್ಪರ್ಧೆ ನಡೆಯಲಿದೆ.

ರಾಜ್ಯಸಭೆ ಚುನಾವಣೆ ಜಾತ್ಯತೀತತೆಯ ಸಾವು ಬದುಕಿನ ಪ್ರಶ್ನೆ: ಸಿದ್ದುರಾಜ್ಯಸಭೆ ಚುನಾವಣೆ ಜಾತ್ಯತೀತತೆಯ ಸಾವು ಬದುಕಿನ ಪ್ರಶ್ನೆ: ಸಿದ್ದು

 ಪ್ರತಿಪಕ್ಷ ಬಿಜೆಪಿಯಿಂದ ಮೂವರು ಕಣಕ್ಕೆ

ಪ್ರತಿಪಕ್ಷ ಬಿಜೆಪಿಯಿಂದ ಮೂವರು ಕಣಕ್ಕೆ

ಸಂಜಯ್ ರಾವತ್ ಮತ್ತು ಸಂಜಯ್ ಪವಾರ್ ಇಬ್ಬರು ಅಭ್ಯರ್ಥಿಗಳನ್ನು ಶಿವಸೇನೆ ಕಣಕ್ಕಿಳಿಸಿದೆ. ಪ್ರತಿಪಕ್ಷ ಬಿಜೆಪಿ ಕೇಂದ್ರ ಸಚಿವ ಪಿಯೂಷ್ ಗೋಯಲ್, ಅನಿಲ್ ಬೋಂಡೆ ಮತ್ತು ಧನಂಜಯ್ ಮಹಾದಿಕ್ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಡಳಿತ ಮೈತ್ರಿಕೂಟದ ಮಿತ್ರಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್ ತಲಾ ಒಬ್ಬ ಪ್ರಫುಲ್ ಪಟೇಲ್ ಮತ್ತು ಇಮ್ರಾನ್ ಪ್ರತಾಪ್‌ಗರ್ಹಿಯನ್ನು ಕಣಕ್ಕಿಳಿಸಿವೆ. ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಆರು ರಾಜ್ಯಸಭಾ ಸ್ಥಾನಗಳ ಪೈಕಿ ಮೂರನ್ನು ಗೆಲ್ಲುವ ಸಂಖ್ಯಾಬಲ ಹೊಂದಿದ್ದು, 288 ಶಾಸಕರು ಮತ ಚಲಾಯಿಸಲಿದ್ದಾರೆ.

 ಸ್ವತಂತ್ರರಲ್ಲಿ 29 ಶಾಸಕರು

ಸ್ವತಂತ್ರರಲ್ಲಿ 29 ಶಾಸಕರು

ವಿಧಾನಸಭೆಯಲ್ಲಿ 106 ಸದಸ್ಯರನ್ನು ಹೊಂದಿದ್ದ ಬಿಜೆಪಿಯು ಸ್ವಂತ ಬಲದಿಂದ ಇಬ್ಬರನ್ನು ಗೆಲ್ಲಬಹುದು. ಆದರೆ ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದು, ಆರನೇ ಸ್ಥಾನಕ್ಕೆ ಬಿಜೆಪಿಯ ಧನಂಜಯ್ ಮಹಾದಿಕ್ ಮತ್ತು ಶಿವಸೇನೆಯ ಸಂಜಯ್ ಪವಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸಣ್ಣ ಪಕ್ಷಗಳು ಮತ್ತು ಸ್ವತಂತ್ರರಲ್ಲಿ 29 ಶಾಸಕರಿದ್ದಾರೆ. ಇವರು ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಬಿಜೆಪಿ 22 ಹೆಚ್ಚುವರಿ ಮತಗಳನ್ನು ಹೊಂದಿದ್ದು, ಏಳು ಸ್ವತಂತ್ರ ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಇನ್ನು 13 ಮಂದಿಯ ಬೆಂಬಲ ಗಳಿಸುವ ಮೂಲಕ ಅಂತರ ತಗ್ಗಿಸಲು ಪ್ರಯತ್ನ ನಡೆಸುತ್ತಿದೆ.

 ಮೈತ್ರಿಕೂಟಕ್ಕೆ 26 ಹೆಚ್ಚುವರಿ ಮತ

ಮೈತ್ರಿಕೂಟಕ್ಕೆ 26 ಹೆಚ್ಚುವರಿ ಮತ

ಯಾವುದೇ ದ್ರೋಹ ಮತ್ತು ಅಡ್ಡ ಮತದಾನವನ್ನು ತಡೆಯಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ತಮ್ಮ ಶಾಸಕರನ್ನು ರೆಸಾರ್ಟ್‌ಗಳಿಗೆ ಸ್ಥಳಾಂತರಿಸಿದ್ದವು. ಮೈತ್ರಿಕೂಟವು 26 ಹೆಚ್ಚುವರಿ ಮತಗಳನ್ನು ಹೊಂದಿದ್ದು, ಆರನೇ ಸ್ಥಾನವನ್ನು ಗೆಲ್ಲಲು 16 ಮತಗಳ ಅಗತ್ಯವಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬೆಂಬಲಕ್ಕಾಗಿ ಸ್ವತಂತ್ರ ಶಾಸಕರನ್ನು ಸಂಪರ್ಕಿಸುವುದರೊಂದಿಗೆ ಬಿಜೆಪಿ ತನ್ನ ಸದಸ್ಯರನ್ನು ಕೂಡ ಪ್ರತ್ಯೇಕಿಸಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಸೇತುವೆಯೊಂದು ಉದ್ಘಾಟನಾ ದಿನದಂದು ಕುಸಿದು ಬಿದ್ದಿದೆ | Oneindia Kannada

English summary
The court today rejected bail for the two arrested leaders - Nawab Malik and Anil Deshmukh - who are crucial in the Rajya Sabha elections. This is a major setback to the Maharashtra ruling coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X