ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಧಾನ, ಅನರ್ಹತೆ ಯಾವುದಕ್ಕೂ ಬಗ್ಗದ ಜಗ್ಗದ ರೆಬೆಲ್ ಶಾಸಕರು

|
Google Oneindia Kannada News

Recommended Video

Karnataka Crisis:ಸಂಧಾನ, ಅನರ್ಹತೆ ಯಾವುದಕ್ಕೂ ಬಗ್ಗದ ಜಗ್ಗದ ರೆಬೆಲ್ ಶಾಸಕರು | Congress JDS alliance

ಮುಂಬೈ, ಜುಲೈ 22: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇಂದು ಕೂಡಾ ಚರ್ಚೆಯ ಕಾವೇರುವ ಸಾಧ್ಯತೆಯಿದೆ, ಎಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡುವ ನಿರೀಕ್ಷೆಯಲ್ಲಿ ಶಕ್ತಿಸೌಧಕ್ಕೆ ಬಿಜೆಪಿ ಶಾಸಕರು ಪ್ರವೇಶಿಸಿದ್ದಾರೆ.

ಆದರೆ, ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಮಾತ್ರ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಮೂಲಕ ಮೈತ್ರಿ ಸರ್ಕಾರಕ್ಕೆ ಭಾರಿ ಹೊಡೆತ ಕೊಟ್ಟಿದ್ದಾರೆ.

'ಅತೃಪ್ತ ಶಾಸಕರಿಗೆ ಸ್ಪೀಕರ್ ನೋಟಿಸ್ ಜಾರಿಗೊಳಿಸಿ, ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದ್ದಾರೆ, ಇದಲ್ಲದೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮೇರೆಗೆ, ಕೆಲ ಶಾಸಕರಿಗೆ ಅನರ್ಹತೆ ಮಾಡಬಾರದೇಕೆ? ಎಂದು ಪ್ರಶ್ನಿಸಿ ನೋಟಿಸ್ ಕಳಿಸಲಾಗಿದೆ.

LIVE ಇಂದೇ ವಿಶ್ವಾಸಮತ ಯಾಚನೆ: ಸ್ಪೀಕರ್ ಸ್ಪಷ್ಟನೆLIVE ಇಂದೇ ವಿಶ್ವಾಸಮತ ಯಾಚನೆ: ಸ್ಪೀಕರ್ ಸ್ಪಷ್ಟನೆ

ಸಿಎಂ ಎಚ್ಡಿಕೆ ಆಹ್ವಾನ ತಿರಸ್ಕಾರ: ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಸೇರಿದೆ. ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಜೊತೆಗೆ ಸಿದ್ದರಾಮಯ್ಯ ಹೆಸರು ಕೇಳಿ ಬಂದಿದೆ. ಅತೃಪ್ತರಲ್ಲಿ ಅನೇಕರು ಸಿದ್ದರಾಮಯ್ಯನವರ ಶಿಷ್ಯಂದಿರಾಗಿದ್ದು, ಸಿದ್ದರಾಮಯ್ಯ ಮತ್ತೆ ಸಿಎಂ ಪಟ್ಟಕ್ಕೇರಿದರೆ, ಅಸಮಾಧಾನ, ಭಿನ್ನಮತ ಶಮನವಾಗುತ್ತದೆ ಎಂಬ ತಂತ್ರ ಹೆಣೆಯಲಾಗಿದೆ.

ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ

ಆದರೆ, 'ಸಿಎಂ ಬದಲಾದರೂ ನಾವು ಮುಂಬೈ ಬಿಟ್ಟು ಬರಲ್ಲ' ಎಂದು ಅತೃಪ್ತ ಶಾಸಕರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಸಿಕ್ಕಿಲ್ಲ.

ಸಾಂದರ್ಭಿಕ ಶಿಶು ಸತ್ತು 16 ದಿನಗಳಾಗಿವೆ: ಬಿಜೆಪಿ ಲೇವಡಿಸಾಂದರ್ಭಿಕ ಶಿಶು ಸತ್ತು 16 ದಿನಗಳಾಗಿವೆ: ಬಿಜೆಪಿ ಲೇವಡಿ

ಸ್ಪೀಕರ್ ರಮೇಶ್ ಕುಮಾರ್ ನೋಟಿಸ್, ಅನರ್ಹತೆಗೂ ಬೆದರದ ರೆಬೆಲ್ ಶಾಸಕರಿಗೆ ನಿಜಕ್ಕೂ ಬೇಕಾಗಿರುವುದು ಏನು? ಎಂಬುದೇ ಕೈ ತೆನೆ ನಾಯಕರಿಗೆ ಯಕ್ಷ ಪ್ರಶ್ನೆಯಾಗಿದೆ.

ಕಾನೂನು ಸಮರ ಮುಂದುವರೆಸಿದ್ದಾರೆ

ಕಾನೂನು ಸಮರ ಮುಂದುವರೆಸಿದ್ದಾರೆ

ಶಾಸಕರ ಸರಣಿ ರಾಜೀನಾಮೆ, ಸಚಿವರ ರಾಜೀನಾಮೆ, ರೆಸಾರ್ಟ್ ರಾಜಕೀಯ, ಸಂಧಾನ ಸಭೆ, ರೆಬೆಲ್ ಶಾಸಕರ ಮುಂಬೈ ಪ್ರೀತಿ, ಸುಪ್ರೀಂಕೋರ್ಟಿನ ಮಧ್ಯಂತರ ತೀರ್ಪಿನ ಬಳಿಕ, ರಾಜ್ಯ ರಾಜಕೀಯ ಪ್ರಹಸನ ಕ್ಲೈಮ್ಯಾಕ್ಸ್ ಎಂಬಂತೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತ ಯಾಚನೆ ಮಾಡುವ ಘಟ್ಟಕ್ಕೆ ಬಂದಿದೆ. ಆದರೆ, ಕ್ಲೈಮ್ಯಾಕ್ಸ್ ಮಾತ್ರ ಆಗುತ್ತಿಲ್ಲ, ಮತ್ತೊಮ್ಮೆ ಸಂಧಾನ, ಹೊಸ ಮಾರ್ಗೋಪಾಯಗಳನ್ನು ಕೈ ತೆನೆ ನಾಯಕರು ಮುಂದಿಡುತ್ತಿದ್ದಾರೆ. ಆದರೆ, ಯಾವುದೇ ಅತೃಪ್ತ ಶಾಸಕರು ಯಾವುದೇ ಸಂಧಾನ, ಅನರ್ಹತೆ ಭೀತಿಗೆ ಜಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ, ಜೊತೆಗೆ ಕಾನೂನು ಸಮರ ಮುಂದುವರೆಸಿದ್ದಾರೆ.

ವಿಪ್ ಜಾರಿಯಾದರು ರೆಬೆಲ್ ಶಾಸಕರಿಂದ ಡೋಂಟ್ ಕೇರ್

ವಿಪ್ ಜಾರಿಯಾದರು ರೆಬೆಲ್ ಶಾಸಕರಿಂದ ಡೋಂಟ್ ಕೇರ್

ಕರ್ನಾಟಕದಲ್ಲಿ 13 ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರವು ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ. ರಾಜೀನಾಮೆ ಸ್ವೀಕರಿಸಿರುವ ಕರ್ನಾಟಕ ವಿಧಾನಸಭೆ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಅವರು ರಾಜೀನಾಮೆ ಅಂಗೀಕರಿಸಿಲ್ಲ. ಕಾಂಗ್ರೆಸ್ -ಜೆಡಿಎಸ್ ಶಾಸಕರಿಗೆ ಈಗಾಗಲೇ ವಿಪ್ ಜಾರಿ ಮಾಡಲಾಗಿದ್ದು, ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ಯಾಚನೆಯಲ್ಲಿ ಪಾಲ್ಗೊಂಡು ಸರ್ಕಾರದ ಪರ ಮತ ಹಾಕುವಂತೆ ಸೂಚಿಸಲಾಗಿದೆ.

ವಿಶ್ವಾಸಮತ ಪ್ರಕ್ರಿಯೆ ತ್ವರಿತವಾಗಿ ಮಾಡಬೇಕಿದೆ

ವಿಶ್ವಾಸಮತ ಪ್ರಕ್ರಿಯೆ ತ್ವರಿತವಾಗಿ ಮಾಡಬೇಕಿದೆ

ಅಲ್ಪಮತಕ್ಕೆ ಕುಸಿದಿರುವ ಸರ್ಕಾರ ಮುಂದುವರೆಯಬಾರದು, ಶಾಸಕರಿಗೆ ಸರ್ಕಾರದಲ್ಲಿ ವಿಶ್ವಾಸವಿಲ್ಲ ಹೀಗಾಗಿ 15ಕ್ಕೂ ಅಧಿಕ ಮಂದಿ ದೂರ ಉಳಿದಿದ್ದಾರೆ. ಸಿಎಂ ಅವರು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ ಮಾಡಲು ಯತ್ನಿಸುತ್ತಿದ್ದಾರೆ. ವಿಶ್ವಾಸಮತ ಸಾಬೀತುಪಡಿಸಲು ರಾಜ್ಯಪಾಲರು 2 ಬಾರಿ ಸಂದೇಶ ರವಾನಿಸಿದರೂ, ಸರ್ಕಾರ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ಸಾಂವಿಧಾನಿಕ ಹುದ್ದೆಗೆ ಯಾವುದೇ ರೀತಿ ಗೌರವನೀಡದೆ ವಿಳಂಬ ಮಾಡುತ್ತಿರುವುದರಿಂದ ವಿಶ್ವಾಸಮತ ಪ್ರಕ್ರಿಯೆ ತ್ವರಿತವಾಗಿ ಮಾಡಬೇಕಿದೆ ಎಂದು ಮನವಿ ಮಾಡಿದ್ದಾರೆ.

ಯಾವ ಆಧಾರದ ಮೇಲೆ ಸಿಎಂ ವಿರುದ್ಧ ಅರ್ಜಿ

ಯಾವ ಆಧಾರದ ಮೇಲೆ ಸಿಎಂ ವಿರುದ್ಧ ಅರ್ಜಿ

ಸಂವಿಧಾನದ 142 ಆರ್ಟಿಕಲ್ ಪ್ರಕಾರ ಸುಪ್ರೀಂ ತನ್ನ ವಿಶೇಷಾಧಿಕಾರ ಬಳಸಿ ಈ ನಿರ್ದೇಶನದ ಜಾರಿ ಮಾಡಬೇಕು, ಆರ್ಟಿಕಲ್ 14, 21ರ ಪ್ರಕಾರ ರಾಜೀನಾಮೆ ನೀಡುವ ಅಧಿಕಾರ, ಹಕ್ಕು ಶಾಸಕರಿಗಿದೆ ಇದನ್ನು ಪ್ರಶ್ನಿಸುವಂತಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವ ಹಾಗೂ ಕಾನೂನನ್ನು ಉಳಿಸುವ ದೃಷ್ಟಿಯಿಂದ ನ್ಯಾಯಾಲಯವು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನಕ್ಕೆ ನೀಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಜೊತೆಗೆ ಮಾಜಿ ಸಿಎಂ ಎಸ್ .ಆರ್ ಬೊಮ್ಮಾಯಿ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.

English summary
Rebel MLAs decide not to attend Floor Test on July 22. CM HD Kumaraswamy and Siddaramaiah failed to pacify the Karnataka rebel MLAs who reluctant to come back to Bengaluru. MLAs Supreme Court and in their petition they accused the speaker of abandoning his constitutional duty and deliberately acceptance of their resignations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X