ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಣಿಜ್ಯ ನಗರಿ ಮುಂಬೈನಲ್ಲಿ ಕೊರೊನಾ ಮರಣ ಮೃದಂಗ: ಠಾಕ್ರೆ ಸರಕಾರ ಎಡವಿದ್ದು ಇಲ್ಲೇ!

|
Google Oneindia Kannada News

ದೇಶದ ಇದುವರೆಗಿನ ಸುಮಾರು 78 ಸಾವಿರ ಕೊರೊನಾ ಸೋಂಕಿತರ ಪೈಕಿ ಶೇ.33ರಷ್ಟು ಪ್ರಕರಣ ದಾಖಲಾಗಿರುವುದು ಮಹಾರಾಷ್ಟ್ರದಲ್ಲಿ. ಇದುವರೆಗೆ, ಮುಂಬೈ ಮತ್ತು ರಾಜ್ಯದ ಇತರ ನಗರಗಳಲ್ಲಿ 975 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Recommended Video

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಗೆಳೆಯನೊಂದಿಗೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ಮಾದಕ ನಟಿ..! | Poonam Pandey

ಸೋಂಕಿತರ ಪ್ರಮಾಣ ಮತ್ತು ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಮಂಬೈನಲ್ಲಿ ಏರುತ್ತಲೇ ಇದೆ. ಏಷ್ಯಾದ ಅತಿದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿರುವುದು ಆತಂತಕಾರಿ ವಿಚಾರವಾಗಿದೆ.

ಮಹಾರಾಷ್ಟ್ರದಲ್ಲೇ ಅತ್ಯಧಿಕ ಸೋಂಕು ಪೀಡಿತರು: ಅಸಲಿ ಕಾರಣ ಏನು?ಮಹಾರಾಷ್ಟ್ರದಲ್ಲೇ ಅತ್ಯಧಿಕ ಸೋಂಕು ಪೀಡಿತರು: ಅಸಲಿ ಕಾರಣ ಏನು?

ಕಳೆದ ಜನವರಿಯಲ್ಲಿ ವುಹಾನ್ ನಿಂದ ಬಂದ ಮೂವರು ಕೇರಳದ ವಿದ್ಯಾರ್ಥಿಗಳಿಂದ ಕೊರೊನಾ ಭಾರತಕ್ಕೆ ಪ್ರವೇಶಿಸಿತು. ಅಲ್ಲಿಂದ ಇಲ್ಲಿಯವರೆಗೆ, ಕೊರೊನಾ ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. ಮಾರ್ಚ್ ಒಂಬತ್ತರಂದು ಪುಣೆಯಲ್ಲಿ ಮೊದಲ ಕೇಸ್ ವರದಿಯಾಯಿತು.

ಕೊರೊನಾ ಹಾಟ್ ಸ್ಪಾಟ್ ನಲ್ಲಿ ರೈಲ್ವೆ ಸಂಚಾರಕ್ಕೆ ಬೇಕಂತೆ ಅನುಮತಿ!ಕೊರೊನಾ ಹಾಟ್ ಸ್ಪಾಟ್ ನಲ್ಲಿ ರೈಲ್ವೆ ಸಂಚಾರಕ್ಕೆ ಬೇಕಂತೆ ಅನುಮತಿ!

ಮೊದಲ ಕೇಸ್ ವರದಿಯಾದ ಒಂದೇ ತಿಂಗಳಲ್ಲಿ (ಏಪ್ರಿಲ್ 9) ಮಹಾರಾಷ್ಟ್ರದಲ್ಲಿನ ಸೋಂಕಿತರ ಸಂಖ್ಯೆ ಒಂದು ಸಾವಿರಕ್ಕೇರಿತು. ಕಳೆದ ಆರು ದಿನಗಳಲ್ಲಿ ಪ್ರತೀದಿನ ಒಂದು ಸಾವಿರ ಹೊಸ ಕೇಸ್ ಬರುತ್ತಿರುವುದು, ದೇಶದ ವ್ಯಾಣಿಜ್ಯ ನಗರವನ್ನು ಬೆಚ್ಚಿಬೀಳುವಂತೆ ಮಾಡಿದೆ. ಸರಕಾರ ಎಡವಿದ್ದು ಎಲ್ಲಿ?

ದೇಶದ ಅತಿದೊಡ್ಡ ಹಾಟ್ ಸ್ಪಾಟ್ ಆಗಿರುವ ಮುಂಬೈ

ದೇಶದ ಅತಿದೊಡ್ಡ ಹಾಟ್ ಸ್ಪಾಟ್ ಆಗಿರುವ ಮುಂಬೈ

ದೇಶದ ಅತಿದೊಡ್ಡ ಹಾಟ್ ಸ್ಪಾಟ್ ಆಗಿರುವ ಮುಂಬೈ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ, ಟೆಸ್ಟಿಂಗ್ ಗಳು ಹೆಚ್ಚಾಗಿ ನಡೆಯುತ್ತಿರುವುದು. ಕಂಟೇನ್ಮೆಂಟ್ ವಲಯದಲ್ಲಿ ಶಂಕಿತರನ್ನು ಟೆಸ್ಟಿಂಗ್ ಗೆ ಒಳಪಡಿಸುತ್ತಿರುವುದರಿಂದ ಈ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುವುದು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.

ವಿಶ್ವ ಆರೋಗ್ಯ ಸಂಸ್ಥೆ (WHO)

ವಿಶ್ವ ಆರೋಗ್ಯ ಸಂಸ್ಥೆ (WHO)

ಮಾರ್ಚ್ ಹನ್ನೊಂದರಂದು ವಿಶ್ವ ಆರೋಗ್ಯ ಸಂಸ್ಥೆ (WHO) ವಿಶ್ವದ ಎಲ್ಲಾ ದೇಶಗಳಿಗೆ ಎಚ್ಚರಿಕೆಯನ್ನು ನೀಡಿತ್ತು. ಆಗ, ಮಹಾರಾಷ್ಟ್ರದಲ್ಲಿ ಮೊದಲ ಕೇಸ್ ದಾಖಲಾಗಿ ಕೇವಲ ಎರಡು ದಿನವಾಗಿತ್ತು. WHO ನೀಡಿದ್ದ ಎಚ್ಚರಿಕೆಯನ್ನು ಕೇಂದ್ರ ಸರಕಾರವಾಗಲಿ, ಮಹಾ ಸರಕಾರವಾಗಲಿ ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ.

ಮುಂಬೈ ವಿಮಾನ ನಿಲ್ದಾಣ

ಮುಂಬೈ ವಿಮಾನ ನಿಲ್ದಾಣ

ಮಾನವ-ಮಾನವರಿಂದಲೇ ಈ ಸೋಂಕು ಹರಡುತ್ತದೆ ಎನ್ನುವುದು ಗೊತ್ತಿದ್ದರೂ, ಸೂಕ್ತ ಕ್ರಮ ತೆಗೆದುಕೊಳ್ಳದೇ ಇದ್ದಿದ್ದರಿಂದಲೇ, ಈಗ ಬರೀ ಮಹಾರಾಷ್ಟ್ರವೇಕೆ ಇಡೀ ದೇಶವೇ ಕಷ್ಟ ಅನುಭವಿಸುತ್ತಿದೆ. ಮುಂಬೈ ವಿಮಾನ ನಿಲ್ದಾಣಕ್ಕೆ ದಿನವೊಂದಕ್ಕೆ 42 ಸಾವಿರ ಪ್ರಯಾಣಿಕರು (ಅಂತರಾಷ್ಟ್ರೀಯ) ಬಂದಿಳಿಯುತ್ತಾರೆ. ಮಾರ್ಚ್ ಏಳರಂದು ಮೊದಲ ಪ್ರಕರಣ ವರದಿಯಾಗಿದ್ದರೂ, ಮಾರ್ಚ್ ಮೂರನೇ ವಾರದ ವರೆಗೆ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆ ಆರಂಭವಾಗಿರಲಿಲ್ಲ.

ವಿಮಾನಯಾನ ಸಂಚಾರವನ್ನು ಕೇಂದ್ರ ಸರಕಾರ ನಿಲ್ಲಿಸಿತು

ವಿಮಾನಯಾನ ಸಂಚಾರವನ್ನು ಕೇಂದ್ರ ಸರಕಾರ ನಿಲ್ಲಿಸಿತು

ಮಾರ್ಚ್ 22ಕ್ಕೆ ವಿಮಾನಯಾನ ಸಂಚಾರವನ್ನು ಕೇಂದ್ರ ಸರಕಾರ ನಿಲ್ಲಿಸಿತು. ಆದರೆ, ಅಷ್ಟೊತ್ತಿಗಾಗಲೇ ಕೊರೊನಾ ಪೀಡಿತ ಅಮೆರಿಕಾ, ಬ್ರಿಟನ್, ಗಲ್ಫ್ ದೇಶದಿಂದ, ಮುಂಬೈ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಸಾವಿರಾರು ಸಂಖ್ಯೆಯಲ್ಲಿ ಬಂದಿಳಿದಿದ್ದಾಗಿತ್ತು.

ಸಿಎಂ ಹುದ್ದೆಯನ್ನು ಉಳಿಸಿಕೊಳ್ಳುವ ವಿಚಾರವೇ ಠಾಕ್ರೆಗೆ ಮುಖ್ಯ

ಸಿಎಂ ಹುದ್ದೆಯನ್ನು ಉಳಿಸಿಕೊಳ್ಳುವ ವಿಚಾರವೇ ಠಾಕ್ರೆಗೆ ಮುಖ್ಯ

ಇದೆಲ್ಲಾ ಆದ ಮೇಲೂ, ಕೊರೊನಾ ವೇಗವನ್ನು ಹಲವು ನಿರ್ಬಂಧ, ದಿಗ್ಬಂಧನಗಳನ್ನು ವಿಧಿಸಿ ಹತೋಟಿಗೆ ತರಬಹುದಾಗಿತ್ತಾದರೂ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರ ರಾಜಕೀಯ ಅನುಭವದ ಕೊರೆತೆಯಿಂದಾಗಿ ಹಿನ್ನಡೆಯಾಗಲು ಆರಂಭವಾಯಿತು ಎನ್ನುವ ಅಭಿಪ್ರಾಯವೂ ಇದೆ. ಕೊರೊನಾಗಿಂತ ಹೆಚ್ಚಾಗಿ ತನ್ನ ಸಿಎಂ ಹುದ್ದೆಯನ್ನು ಉಳಿಸಿಕೊಳ್ಳುವ ವಿಚಾರವೇ ಠಾಕ್ರೆಗೆ ಮುಖ್ಯವಾಯಿತು ಎನ್ನುವ ಮಾತು ಚಾಲ್ತಿಯಲ್ಲಿದೆ.

English summary
Why Coronaviurs Cases Increasing In Mumbai And Maharasthra: Where Government Is Failing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X