ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆ ಜೊತೆ ಮಾತುಕತೆಗೆ ಸಿದ್ಧ: ದೇವೇಂದ್ರ ಫಡ್ನವಿಸ್

|
Google Oneindia Kannada News

ಮುಂಬೈ, ಜೂನ್ 01: ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿಯನ್ನು ಉಳಿಸಿಕೊಳ್ಳಲು ಶಿವಸೇನೆಯೊಂದಿಗೆ ಮಾತುಕತೆಗೆ ಸಿದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

"ನಾವು ಬಿಜೆಪಿ-ಶಿವಸೇನೆ ಮೈತ್ರಿಯ ವಿರೋಧಿಗಳಲ್ಲ. ಅಥವಾ ನಮ್ಮ ಮೈತ್ರಿ ಮುರಿದುಹೋಗುತ್ತದೆ ಎಂದೂ ತಿಳಿದಿಲ್ಲ. ನಾವು ಈ ಮೈತ್ರಿಯನ್ನು ಮತ್ತೆ ಒಂದುಗೂಡಿಸಲು ಸಿದ್ಧರಿದ್ದೇವೆ, ಅದಕ್ಕಾಗಿ ಶಿವಸೇನೆಯೊಂದಿಗೆ ಮಾತುಕತೆ ನಡೆಸಲು ನಾವು ಉತ್ಸುಕರಾಗಿದ್ದೇವೆ" ಎಂದು ಫಡ್ನವಿಸ್ ಹೇಳಿದರು.

Ready for talks with Shiv Sena: Devendra Fadnavis

ಮೇ 31 ರಂದು ಹೊರಬಿದ್ದ ಹಲವು ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿ ಕೇವಲ ಒಂದನ್ನಷ್ಟೇ ಗೆದ್ದಿದ್ದು ಮಿಕ್ಕೆಲ್ಲ ಕಡೆ ಸೋತಿತ್ತು.

ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳಿ: ಶಿವಸೇನೆಗೆ ಕಾಂಗ್ರೆಸ್ ಸವಾಲುಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳಿ: ಶಿವಸೇನೆಗೆ ಕಾಂಗ್ರೆಸ್ ಸವಾಲು

ಇದಕ್ಕೆ ಪ್ರತಿಕ್ರಿಯ ನೀಡಿದ್ದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, "ಉತ್ತರ ಪ್ರದೇಶದಲ್ಲೇ ಚುನಾವಣೆ ಗೆಲ್ಲಲಾಗದಿದ್ದರೂ ಯೋಗಿ ಆದಿತ್ಯನಾಥ್ ಅವರು ಪ್ರಚಾರಕ್ಕೆಂದು ಮಹಾರಾಷ್ಟ್ರಕ್ಕೆ ಬರುತ್ತಾರೆ. ಜನರು ಯೋಗಿ ಆದಿತ್ಯನಾಥ್ ಗೆ ಚೆನ್ನಾಗಿ ಪಾಠ ಕಲಿಸಿದ್ದಾರೆ" ಎಂದಿದ್ದರು.

English summary
Maharashtra Chief Minister Devendra Fadnavis on Thursday underscored the importance of mutual efforts to sustain the straining Bharatiya Janata Party (BJP)-Shiv Sena alliance in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X