ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್.ಬಿ.ಐ ನಿಯಮ ಉಲ್ಲಂಘಿಸಿದ ಐಸಿಐಸಿಐ ಬ್ಯಾಂಕಿಗೆ ಭಾರೀ ದಂಡ

By Sachhidananda Acharya
|
Google Oneindia Kannada News

ನವದೆಹಲಿ, ಮಾರ್ಚ್ 29: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಖಾಸಗಿ ರಂಗದ ದೈತ್ಯ ಬ್ಯಾಂಕ್ ಐಸಿಐಸಿಐಗೆ ಆರ್.ಬಿ.ಐ ದೊಡ್ಡ ಮೊತ್ತದ ದಂಡ ಹಾಕಿದೆ.

ರೂ. 58.9 ಕೋಟಿ ರೂ ದಂಡ ದಂಡ ಕಟ್ಟುವಂತೆ ಮಾರ್ಚ್ 26ರಂದು ಆರ್.ಬಿ.ಐ ನೋಟಿಸ್ ಜಾರಿ ಮಾಡಿದೆ. ಎಚ್.ಟಿ.ಎಂ ಪೋರ್ಟ್ ಫೋಲಿಯೋದಿಂದ ಸೆಕ್ಯುರಿಟಿಗಳನ್ನು ನೇರ ಮಾರಾಟ ಮಾಡುವಲ್ಲಿ ಆರ್.ಬಿ.ಐ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘನೆ ಮಾಡಿದ ಕಾರಣಕ್ಕೆ ಈ ದಂಡ ವಿಧಿಸಲಾಗಿದೆ.

ನೀರವ್ ಮೋದಿ ಪರಿಣಾಮ: 'ಎಲ್ಒಯು', 'ಎಲ್ಒಸಿ' ಸೇವೆ ಸ್ಥಗಿತನೀರವ್ ಮೋದಿ ಪರಿಣಾಮ: 'ಎಲ್ಒಯು', 'ಎಲ್ಒಸಿ' ಸೇವೆ ಸ್ಥಗಿತ

ಬ್ಯಾಂಕ್ ಹಲವು ರೀತಿಯ ಬಾಂಡ್ ಗಳನ್ನು ಹೊಂದಿದೆ. ಅವುಗಳಲ್ಲಿ ಎಚ್.ಟಿ.ಎಂ, ಎಚ್.ಎಫ್.ಟಿಗಳು ಸೇರಿವೆ. ಇದರಲ್ಲಿ ಎಚ್.ಟಿ.ಎಂನ್ನು ಮಾರಾಟಕ್ಕೆ ಬಳಸಿಕೊಳ್ಳುವಂತಿಲ್ಲ, ಇದರಲ್ಲಿ ಕೇವಲ ಶೇಕಡಾ 5ನ್ನು ಮಾತ್ರ ಪೂರ್ವನುಮತಿ ಪಡೆಯದೇ ಮಾರಾಟಕ್ಕೆ ಬಳಸಿಕೊಳ್ಳಬಹುದು. ಒಂದೊಮ್ಮೆ ನಿಗದಿತ ಮಿತಿಗಿಂತ ಹೆಚ್ಚು ಮಾರಾಟ ಮಾಡುವುದಿದ್ದರೆ ಅದಕ್ಕೆ ಆರ್.ಬಿ.ಐ ಅನುಮತಿ ಬೇಕು ಮತ್ತು ಇದನ್ನು ವಾರ್ಷಿಕ ಲೆಕ್ಕದಲ್ಲಿ ತೋರಿಸಬೇಕಾಗುತ್ತದೆ.

RBI imposes Rs 58.9 crore penalty on ICICI Bank

"ಸಾಮಾನ್ಯವಾಗಿ ಬ್ಯಾಂಕುಗಳು ಶೇಕಡಾ 5ಕ್ಕಿಂತ ಹೆಚ್ಚಿನದನ್ನುಮಾರಾಟ ಮಾಡಿ ವಾರ್ಷಿಕ ಲೆಕ್ಕದಲ್ಲಿ ತೋರಿಸುತ್ತವೆ. ಆದರೆ ಐಸಿಐಸಿಐ ಬ್ಯಾಂಕ್ ಕೆಲವು ತಾಂತ್ರಿಕ ಉಲ್ಲಂಘನೆಗಳನ್ನು ಮಾಡಿರಬಹುದು," ಎಂದು ಬ್ಯಾಂಕೊಂದರ ಖಜಾನೆ ಮುಖ್ಯಸ್ಥರು ಹೇಳಿದ್ದಾರೆ.

English summary
Reserve Bank of India (RBI) has imposed a monetary penalty of Rs 58.9 crore on ICICI Bank Limited (the bank) for non-compliance with directions issued by RBI on direct sale of securities from its HTM portfolio and specified disclosure in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X