ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಟಿಆರ್‌ಪಿ: ರಿಪಬ್ಲಿಕ್‌ ಟಿವಿ ಸಿಎಫ್ಒಗೆ ಮುಂಬೈ ಪೊಲೀಸರಿಂದ ಸಮನ್ಸ್ ಜಾರಿ

|
Google Oneindia Kannada News

ಮುಂಬೈ, ಅಕ್ಟೋಬರ್ 09: ನಕಲಿ ಟಿಆರ್‌ಪಿ ಹಗರಣದ ವಿಚಾರಣೆ ಶನಿವಾರ ಹಾಜರಾಗುವಂತೆ ರಿಪಬ್ಲಿಕ್ ನೆಟ್‌ವರ್ಕ್‌ನ ಮುಖ್ಯ ಹಣಕಾಸು ಅಧಿಕಾರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.

ಮುಂಬೈ ಪೊಲೀಸರ ಪ್ರಾಥಮಿಕ ವಿಚಾರಣೆ ಪ್ರಕಾರ ಟಿವಿ ವೀಕ್ಷಕರಿಗೆ ಹಣದ ಆಮಿಷವೊಡ್ಡಿ ನಿರ್ದಿಷ್ಟ ಚಾನೆಲ್‌ಗಳನ್ನು ನೋಡಲು ಪುಸಲಾಯಿಸಲಾಗಿದೆ. ಇದರಲ್ಲಿ ರಿಪಬ್ಲಿಕ್ ಟಿವಿ ಕೂಡ ಸೇರಿಕೊಂಡಿದೆ ಎಂದು ಆರೋಪಿಸಲಾಗಿದೆ.

ಟಿಆರ್‌ಪಿ ನಕಲಿ ಜಾಲ: ರಿಪಬ್ಲಿಕ್ ಟಿವಿ ಸೇರಿ 3 ಚಾನೆಲ್‌ಗಳ ವಿಚಾರಣೆ ಟಿಆರ್‌ಪಿ ನಕಲಿ ಜಾಲ: ರಿಪಬ್ಲಿಕ್ ಟಿವಿ ಸೇರಿ 3 ಚಾನೆಲ್‌ಗಳ ವಿಚಾರಣೆ

ಹೀಗಾಗಿ ವಿಚಾರಣೆಗೆ ಹಾಜರಾಗಿ ಘಟನೆ ಕುರಿತು ಮಾಹಿತಿ ನೀಡುವಂತೆ ಸಮನ್ಸ್‌ನಲ್ಲಿ ಮುಂಬೈ ಪೊಲೀಸರು ಸೂಚಿಸಿದ್ದಾರೆ.ನಕಲಿ ಟಿಆರ್‌ಪಿ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಹಾಗೂ ಇನ್ನೆರೆಡು ಮರಾಠಿ ವಾಹಿನಿಗಳ ವಿರುದ್ಧ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Ratings Scam: Republic TV CFO Summoned By Mumbai Police

ಮುಂಬೈನಲ್ಲಿ ಸ್ಥಾಪಿಸಿರುವ 2 ಸಾವಿರ ಟಿಆರ್‌ಪಿ ನಿಯಂತ್ರಕ ಯಂತ್ರಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪದ ಮೇಲೆ ಈ ದೂರು ನೀಡಲಾಗಿದೆ.

ಹಂಸ್ ಏಜೆನ್ಸಿಯು ಬಾರ್ಕ್ ನೀಡುವಂತಹ ಟಿಆರ್‌ಪಿ ಮೇಲೆ ಸಂಶಯವನ್ನು ವ್ಯಕ್ತಪಡಿಸಿ ದೂರನ್ನು ದಾಖಲಿಸಿತ್ತು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮರಾಠಿ ಎರಡು ವಾಹಿನಿಗಳ ಮುಖ್ಯಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.

English summary
The Chief Financial Officer of Republic TV has been called in for questioning on Saturday by the Mumbai Police in the investigation into allegations that the television channel paid viewers to game its ratings and illegally earn more ad revenue, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X