ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಗ್ರಾಂ ಚಿನ್ನದೊಂದಿಗೆ ಇಲಿ ಪರಾರಿ; ಪೊಲೀಸರು ಕಂಡುಹಿಡಿದದ್ದೇ ರೋಚಕ

|
Google Oneindia Kannada News

ಮುಂಬೈ ಜೂನ್ 17: ಕಳ್ಳತನ ಅನ್ನೋದನ್ನು ಕೇವಲ ಕಳ್ಳ ಅಥವಾ ಕಳ್ಳಿ ಮಾತ್ರ ಮಾಡ್ತಾರೆ. ಅವರನ್ನು ಪೊಲೀಸರು ಸುಲಭವಾಗಿ ಪತ್ತೆ ಹಚ್ಚಬಹುದು. ಕಳ್ಳತನದ ಮಾರ್ಗಗಳು ಬೇರೆ ಬೇರೆ ಆಗಿದ್ದರೂ ಒಂದಲ್ಲಾ ಒಂದು ಕಡೆ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾನೆ ಅನ್ನೋದು ನಮ್ಮೆಲ್ಲರ ಲೆಕ್ಕಾಚಾರ. ಆದರೆ ಪ್ರಾಣಿಗಳು ಕಳ್ಳತನ ಮಾಡಿದರೆ ಅದನ್ನು ಕಂಡು ಹಿಡಿಯುವುದು ಹೇಗೆ? ಜೊತೆಗೆ ಆ ಪ್ರಾಣಿ ಬೇರೆಲ್ಲೂ ಅಲ್ಲ ನಮ್ಮೆಲ್ಲರ ನಡುವೆಯೇ ವಾಸಿಸುತ್ತದೆ. ಅದ್ಯಾವುದು ಅಂತ ಯೋಚನೆ ಮಾಡ್ತಾಯಿದ್ದೀರಾ. ಅದು ಬೇರೆ ಯಾವುದು ಅಲ್ಲ ನೀವು ನಂಬಲು ಅನರ್ಹವಾದ ಪ್ರಾಣಿ ಇಲಿ.

ಇಲಿ ಕೆಲಸ ಬರಿ ಮನೆಯಲ್ಲಿರುವ ವಸ್ತುಗಳನ್ನು ಕಚ್ಚೋದು ಮಾತ್ರವಲ್ಲ ಚಿನ್ನದೊಂದಿಗೆ ಪರಾರಿಯಾಗಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಮಹಿಳೆಯೊಬ್ಬರ 10 ಗ್ರಾಂ ಚಿನ್ನ ನಾಪತ್ತೆಯಾಗಿತ್ತು. ಅವರು ಪೊಲೀಸರ ಬಳಿ ಸಹಾಯ ಕೋರಿದ್ದರು. ವಿಷಯದ ಗಂಭೀರತೆಯ ದೃಷ್ಟಿಯಿಂದ ಪೊಲೀಸರು ತನಿಖೆ ಆರಂಭಿಸಿದಾಗ, ಈ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಹಳ ಫಿಲ್ಮಿ ಶೈಲಿಯಲ್ಲಿ ಕಂಡುಬಂದಿದೆ. ಆದರೆ, ಇದೀಗ ಪೊಲೀಸರು ಕುತೂಹಲಕಾರಿ ರೀತಿಯಲ್ಲಿ ಚಿನ್ನವನ್ನು ವಶಪಡಿಸಿಕೊಂಡಿದ್ದು, ಈ ವಿಷಯವು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಮಾರ್ಗ ಮದ್ಯೆ ಭಿಕ್ಷುಕ ಭೇಟಿ

ಮಾರ್ಗ ಮದ್ಯೆ ಭಿಕ್ಷುಕ ಭೇಟಿ

ದಿಂಡೋಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಸುಂದರಿ ಪ್ಲಾನಿಬೆಲ್ ಸಾಲವನ್ನು ಹೊಂದಿದ್ದರು. ಅದನ್ನು ತೀರಿಸಲು ಮನೆಯ ಚಿನ್ನಾಭರಣವನ್ನು ಬ್ಯಾಂಕ್ ನಲ್ಲಿ ಅಡಮಾನ ಇಡಲು ಯೋಚಿಸಿದ್ದರು. ಇದಕ್ಕಾಗಿ ಅವರು ತನ್ನ ಚೀಲದಲ್ಲಿ ಚಿನ್ನವನ್ನು ಇಟ್ಟುಕೊಂಡು ಮನೆಯಿಂದ ಹೊರಬಂದಿದ್ದಾರೆ. ಅವಳ ಬಳಿ ದೊಡ್ಡ ಪಾವ್‌ ಬಾಜಿ ಕೂಡ ಇತ್ತು. ಕೆಲವು ಭಿಕ್ಷುಕರು ಮಧ್ಯದಲ್ಲಿ ಅವರನ್ನು ಭೇಟಿಯಾದರು. ಮಹಿಳೆ ದೊಡ್ಡ ಪಾವ್‌ ಬಾಜಿಯನ್ನು ಭಿಕ್ಷುಕರಿಗೆ ನೀಡಿದ್ದಾರೆ.

ಮಹಿಳೆ ದೂರು

ಮಹಿಳೆ ದೂರು

ಬ್ಯಾಂಕ್‌ಗೆ ಬಂದು ನೋಡಿದಾಗ ಆಕೆಯ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಇರಲಿಲ್ಲ. ಸ್ವಲ್ಪ ಸಮಯದ ನಂತರ ಅವರು ಭಿಕ್ಷುಕನಿಗೆ ನೀಡಿದ ದೊಡ್ಡ ಪಾವ್ ಬ್ಯಾಗ್‌ನಲ್ಲಿ 10 ಗ್ರಾಂ ಚಿನ್ನವಿದೆ ಎಂದು ಅರಿತುಕೊಂಡರು. ತರಾತುರಿಯಲ್ಲಿ ಭಿಕ್ಷುಕನಿಗೆ ದೊಡ್ಡ ಪಾವ್ ಬಾಜಿ ನೀಡಿದ ಸ್ಥಳವನ್ನು ತಲುಪಿದರು. ಆದರೆ ಅವನು ಅಲ್ಲೆಲ್ಲೂ ಕಾಣಲಿಲ್ಲ. ಆ ನಂತರ ಅವರು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇಲಿಗಳು ಮಾಡಿದ್ದೇನು?

ಇಲಿಗಳು ಮಾಡಿದ್ದೇನು?

ಪೊಲೀಸರು ಸಿಸಿಟಿವಿ ಸಹಾಯದಿಂದ ಭಿಕ್ಷುಕರನ್ನು ಪತ್ತೆಹಚ್ಚಿದರು. ಆದರೆ ಅವರ ಬಳಿ ಪಾವ್ ಚೀಲ ಇರಲಿಲ್ಲ. ಅದು ಒಣಗಿ ಸರಿಯಾಗಿಲ್ಲದ ಕಾರಣ ಅವರು ಅದನ್ನು ಕಸಕ್ಕೆ ಎಸೆದಿದ್ದರು. ಇದಾದ ಬಳಿಕ ಕಸದ ರಾಶಿಯಲ್ಲಿ ತನಿಖೆ ಆರಂಭವಾಗಿದೆ. ಅಲ್ಲೇ ಇದ್ದ ಇಲಿಗಳು ಪಾವ್ ತಿಂದು ಅಲ್ಲಿದ್ದ ಬ್ಯಾಗ್ ಸಮೇತ ಗಟಾರಕ್ಕೆ ಹೋಗಿರುವುದು ಸಿಸಿಟಿವಿ ಸಹಾಯದಿಂದ ತಿಳಿದು ಬಂದಿದೆ.

10 ಗ್ರಾಂ ಚಿನ್ನ ಕದ್ದಿದ್ದ ಇಲಿ

10 ಗ್ರಾಂ ಚಿನ್ನ ಕದ್ದಿದ್ದ ಇಲಿ

ಪೊಲೀಸ್ ತಂಡವು ಇಲಿಯನ್ನು ಬೆನ್ನಟ್ಟಿತು. ಬಳಿಕ ಅವರು ಗಟಾರದೊಳಗೆ ಒಂದು ಚೀಲವನ್ನು ಕಂಡುಕೊಂಡರು. ಅದರಲ್ಲಿ ಮಹಿಳೆಯ ಎಲ್ಲಾ ಆಭರಣಗಳಿರುವುದು ಕಂಡು ಬಂದಿದೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಅವರ ಚಿನ್ನವನ್ನು ಅವರಿಗೆ ಹಿಂತಿರುಗಿಸಲಾಗಿದೆ. ಇದಾದ ನಂತರ ಮಹಿಳೆಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

English summary
Rat escape with 10 grams of gold the Police search operation in the gutter and found out the gold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X