ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಂದಿರ ಮೊದಲು, ಸರ್ಕಾರ ನಂತರ' : ಶಿವಸೇನಾದಿಂದ ರಾಮಜಪ

|
Google Oneindia Kannada News

ಮುಂಬೈ, ಮೇ 29: "ಮೊದಲು ಮಂದಿರ, ನಂತರ ಸರ್ಕಾರ. ಇದು ಎಲ್ಲ ಹಿಂದುಗಳ ಬೇಡಿಕೆ. ಹಾಗಾಗಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಬೇಕು" ಎಂದು ಘೋಷಿಸಿದ್ದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತೊಮ್ಮೆ ರಾಮ ಮಂತ್ರ ಜಪಿಸಿದ್ದಾರೆ. ಅಖಂಡ ಭಾರತ, ರಾಮರಾಜ್ಯದ ಕನಸನ್ನು ಬಿಚ್ಚಿಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಇನ್ನೇನು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯ ಪುಟದಲ್ಲಿ ರಾಮಮಂದಿರ ನಿರ್ಮಾಣದ ವಿಚಾರ ಎತ್ತಿದೆ.

ರಾಮಮಂದಿರ ನಿರ್ಮಾಣ ಕೂಡಾ 'ಜೂಮ್ಲಾ' : ಉದ್ಧವ್ ಠಾಕ್ರೆ ರಾಮಮಂದಿರ ನಿರ್ಮಾಣ ಕೂಡಾ 'ಜೂಮ್ಲಾ' : ಉದ್ಧವ್ ಠಾಕ್ರೆ

ಶ್ರೀರಾಮ ಆರಾಧಿಸುವ ಪಕ್ಷ ಮತ್ತೆ ಕೇಂದ್ರದ ಅಧಿಕಾರ ಪಡೆದಿದೆ. ರಾಮರಾಜ್ಯ ನಿರ್ಮಾಣವಾಗುತ್ತೆ ಎಂಬ ಆಸೆಯಿಂದಲೇ ಕೋಟ್ಯಂತರ ಜನರು ಬಿಜೆಪಿ ಆಯ್ಕೆ ಮಾಡಿದ್ದಾರೆ. ಎಲ್ಲವೂ ರಾಮನ ಆಶೀರ್ವಾದದಂತೆಯೆ ನಡೆದಿದೆ. ಇನ್ನು ರಾಮಮಂದಿರ ನಿರ್ಮಾಣಕ್ಕಾಗಿ ನೂರಾರು ಕರಸೇವಕರು ಬಲಿದಾನ ಮಾಡಿದ್ದಾರೆ. ಅವರು ಹರಿಸಿರುವ ರಕ್ತ ವ್ಯರ್ಥವಾಗಬಾರದು. ಇದೇ ಯೋಚನೆಯುಳ್ಳ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದರಿಂದ ರಾಮಮಂದಿರ ನಿರ್ಮಾಣ ಕಾರ್ಯ ಖಂಡಿತ ನಡೆಯುತ್ತದೆ ಎಂದು ಬರೆದುಕೊಂಡಿದೆ.

Ram temple will be constructed soon, Modi’s victory in favour of ‘Ram Rajya’, claims Shiv Sena

"ರಾಮ ಮಂದಿರದ ವಿಚಾರವನ್ನು ನಾವು ಕೈಗೆತ್ತಿಕೊಂಡಾಗ, ಮಂದಿರವನ್ನು ನಿಜವಾಗಿಯೂ ನಿರ್ಮಾಣ ಮಾಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ, ರಾಮ ಮಂದಿರದ ವಿಚಾರ ಪ್ರತಿ ಚುನಾವಣೆ ಹೊತ್ತಲ್ಲೂ ಚರ್ಚೆಗೆ ಬರುತ್ತದೆ. ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಎಲ್ಲರೂ ಮರೆತುಬಿಡುತ್ತಾರೆ' ಎಂದು ವಿಷಾದ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಂದು ಪ್ರಶ್ನೆಯನ್ನು ಮೋದಿ ಸ್ವೀಕರಿಸಲಿಲ್ಲವೇಕೆ? ಶಿವಸೇನಾ ಪ್ರತಿಕ್ರಿಯೆ ಒಂದು ಪ್ರಶ್ನೆಯನ್ನು ಮೋದಿ ಸ್ವೀಕರಿಸಲಿಲ್ಲವೇಕೆ? ಶಿವಸೇನಾ ಪ್ರತಿಕ್ರಿಯೆ

'ರಾಮ್​ ಕಾ ಕಾಮ್​ ಹೋಗಾ' ಎಂಬ ಶೀರ್ಷಿಕೆಯಲ್ಲಿ ಸಂಪದಾಕೀಯ ಬರೆದಿರುವ ಶಿವಸೇನೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಿಂದ ಯಾವೆಲ್ಲಾ ಅನುಕೂಲಗಳಿವೆ ಎಂದು ಬರೆಯಲಾಗಿದೆ. ಸುಪ್ರೀಂ ಆದೇಶದ ಬಳಿಕ ರಾಮಮಂದಿರ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುವ ಪ್ರಧಾನಿ ಮೋದಿ ನಿರ್ಧಾರಕ್ಕೆ ನಮ್ಮ ಸಹಮತ ಇದೆ ಎಂದು ಶಿವಸೇನೆ ಹೇಳಿದೆ.

English summary
In an editorial in its mouthpiece Saamana, the Shiv Sena said crores of people have voted the Bharatiya Janata Party to power so that “Ram Rajya can be established in the country, all with the blessing of Lord Ram”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X