ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೆಲವು ಬೇಜವಾಬ್ದಾರಿ ರಾಷ್ಟ್ರಗಳು' ಎಂದು ಚೀನಾ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್‌

|
Google Oneindia Kannada News

ಮುಂಬೈ, ನವೆಂಬರ್‌ 21: ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ "ಐಎನ್‌ಎಸ್‌ ವಿಶಾಖಪಟ್ಟಣಂ" ಅನ್ನು ನೌಕಾಪಡೆಗೆ ಸೇರ್ಪಡೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿ ಪರೋಕ್ಷವಾಗಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿದರು.

"ಪಕ್ಷಪಾತ ಧೋರಣೆ ಹಾಗೂ ಪ್ರಾಬಲ್ಯ ಮೆರೆಯುವ ಪ್ರವೃತ್ತಿ ಹೊಂದಿರುವ ಕೆಲವು ಬೇಜವಾಬ್ದಾರಿ ರಾಷ್ಟ್ರಗಳು ವಿಶ್ವಸಂಸ್ಥೆಯ ಕಡಲ ಕಾನೂನನ್ನು (ಯುಎನ್‌ಸಿಎಲ್‌ಒಎಸ್‌) ತಪ್ಪಾಗಿ ವ್ಯಾಖ್ಯಾನ ಮಾಡುತ್ತಿದೆ," ಎಂದು ಭಾನುವಾರ ಟೀಕೆ ಮಾಡಿದ್ದಾರೆ. "ಕೆಲವು ರಾಷ್ಟ್ರಗಳು ಕಡಲ ಕಾನೂನನ್ನು ತನಗೆ ಬೇಕಾದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಕಳವಳಕಾರಿ ಸಂಗತಿ," ಎಂದು ಕೂಡಾ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

 'ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧಿ' ಎಂದ ರಾಜನಾಥ್‌ ಸಿಂಗ್‌ 'ಬ್ರಿಟಿಷರ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾವರ್ಕರ್‌ಗೆ ಹೇಳಿದ್ದು ಗಾಂಧಿ' ಎಂದ ರಾಜನಾಥ್‌ ಸಿಂಗ್‌

ದಕ್ಷಿಣ ಚೀನಾ ಸಮುದ್ರವು ಸಂವಹನ ವ್ಯವಸ್ಥೆ ಹೊಂದಿರುವ ಪ್ರಮುಖ ಸಾಗರ ಮಾರ್ಗವಾಗಿದೆ. ಈ ಕಡಲ ಮಾರ್ಗವು ಹೈಡ್ರೋಕಾರ್ಬನ್‌ಗಳಿಂದ ಸಂಪದ್ಭರಿತವಾಗಿದೆ. ಈ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಚೀನಾ ತನ್ನ ಮಿಲಿಟರಿ ಪ್ರಾಬಲ್ಯವನ್ನು ಇಲ್ಲಿ ಹೆಚ್ಚು ಮಾಡುತ್ತಿದೆ. ಇದು ಇಂಡಿ-ಪೆಸಿಫಿಕ್‌ ಪ್ರದೇಶದ ರಾಷ್ಟ್ರಗಳ ಕಳವಳಕ್ಕೆ ಕಾರಣವಾಗಿದೆ. ಇನ್ನು ಈ ಚೀನಾದ ನಡೆಯು ಹೆಚ್ಚು ಟೀಕೆಗೆ ಕಾರಣವಾಗಿದೆ.

ಇನ್ನು ಇಂದು ಮುಂಬೈನ ನೌಕಾ ನೆಲೆಯಲ್ಲಿ ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ "ಐಎನ್‌ಎಸ್‌ ವಿಶಾಖಪಟ್ಟಣಂ" ಅನ್ನು ಅನಾವರಣ ಮಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, "ಐಎನ್‌ಎಸ್‌ ವಿಶಾಖಪಟ್ಟಣಂನ ವೈಶಿಷ್ಟ್ಯಗಳು ಇಂದಿನ ಅತ್ಯಗತ್ಯಗಳನ್ನು ಮಾತ್ರ ಅಲ್ಲದೆ, ಭವಿಷ್ಯದ ಅಗತ್ಯಗಳನ್ನು ಕೂಡಾ ಪೂರೈಕೆ ಮಾಡಲಿದೆ. ಭಾರತವು ತನ್ನ ಅಗತ್ಯಕ್ಕಾಗಿ ಮಾತ್ರವಲ್ಲದೆ ಪ್ರಪಂಚದ ಅಗತ್ಯಕ್ಕಾಗಿ ಹಡಗುಗಳನ್ನು ನಿರ್ಮಾಣ ಮಾಡಲಿದೆ. ಈ ಐಎನ್‌ಎಸ್‌ ಕಾರ್ಯ ಆರಂಭ ನಮ್ಮ ಪ್ರಾಚೀನ, ಮಧ್ಯಕಾಲೀನ ಭಾರತದ ಕಡಲ ಶಕ್ತಿ, ಹಡಗು ನಿರ್ಮಾಣ ಕೌಶಲ್ಯ ಹಾಗೂ ಅದ್ಭುತ ಇತಿಹಾಸವನ್ನು ನಮಗೆ ನೆನಪು ಮಾಡುತ್ತದೆ," ಎಂದು ಹೇಳಿದರು.

ವಿಶ್ವದಲ್ಲಿ 2023 ರ ವೇಳೆಗೆ ಭದ್ರತೆಯ ವೆಚ್ಚವು 2.1 ಟ್ರಿಲಿಯನ್ ಡಾಲರ್‌ಗೆ ತಲುಪಲಿದೆ ಎಂಬ ವರದಿಗಳನ್ನು ಉಲ್ಲೇಖ ಮಾಡಿದ ಕೇಂದ್ರ ರಕ್ಷಣಾ ಸಚಿವರು, "ಇದರಿಂದಾಗಿ ಭಾರತವು ತನ್ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮತ್ತು ರಾಷ್ಟ್ರ ಸ್ವದೇಶಿ ಹಡಗು ನಿರ್ಮಾಣದತ್ತ ಸಾಗಲು ಉತ್ತಮ ಅವಕಾಶ ಆಗಿದೆ. ನಾವು ಮೇಕ್‌ ಇನ್‌ ಇಂಡಿಯಾ ಮುಖಾಂತರ ಕೈಗೊಂಡ ಕ್ರಮದಿಂದಾಗಿ ಭಾರತೀಯ ನೌಕಾಪಡೆಯು 2014 ರಲ್ಲಿ ದೇಶದ ಮಾರಾಟಗಾರರಿಗೆ ಶೇಕಡ 76 ರಷ್ಟು ಏರ್ ಆಪರೇಷನ್ಸ್ ನೆಟ್ (ಎಒಎನ್‌) ಮತ್ತು ಶೇಕಡ 66ರಷ್ಟು ಕಾಸ್ಟ್ ಬೇಸಿಸ್ ಒಪ್ಪಂದಗಳನ್ನು ಒದಗಿಸಿದೆ," ತಿಳಿಸಿದರು.

ಚೀನಾದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಸಚಿವರು

ಇನ್ನು ಈ ಸಂದರ್ಭದಲ್ಲೇ ಚೀನಾದ ವಿರುದ್ಧ ಪರೋಕ್ಷ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಾಗ್ದಾಳಿ ನಡೆಸಿದ್ದಾರೆ. "ಕೆಲವು ರಾಷ್ಟ್ರಗಳು ತಮಗೆ ಬೇಕಾದಂತೆ ಕಾನೂನನ್ನು ವ್ಯಾಖ್ಯಾನ ಮಾಡಿಕೊಂಡಿದ್ದಾರೆ. ಹಾಗೆಯೇ ಕಾನೂನನ್ನು ತಮಗೆ ಬೇಕಾದಂತೆ ದುರ್ಬಲ ಮಾಡುತ್ತಿದ್ದಾರೆ, ಇದು ಕಳವಳಕಾರಿ," ಎಂದು ಹೇಳಿದ್ದಾರೆ. "ನಾವು ಕಡಲ ರಕ್ಷಣೆಗೆ ವಿಚಾರಕ್ಕೆ ಬಂದರೆ ಭಾರತವು ಒಮ್ಮತದಿಂದ ರೂಪಿಸಿರುವ ತತ್ವಗಳಿಗೆ ಬೆಂಬಲ ನೀಡುತ್ತದೆ," ಎಂದು ಕೂಡಾ ಹೇಳಿದರು.

Recommended Video

ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯ ಈಗ ಕೆತ್ತಲಾಗಿದೆ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Rajnath Singh Slams Some Irresponsible Nations, After Unveiling New Warship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X