ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಎಂಎನ್ಎಸ್ ಸ್ಪರ್ಧೆಯಿಲ್ಲ, ಎನ್ಸಿಪಿಗೆ ಸಾಥ್ ಸಾಧ್ಯತೆ!

|
Google Oneindia Kannada News

ಮುಂಬೈ, ಮಾರ್ಚ್ 18: ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾನ್ ಸೇನಾ(ಎಂಎನ್ಎಸ್) ಈ ಬಾರಿಯಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧಾರಿಸಿದೆ.

ಎಂಎನ್ಎಸ್ ಮುಖಂಡ ಶಿರೀಶ್ ಸಾವಂತ್ ಅವರು ಈ ಕುರಿತಂತೆ ಭಾನುವಾರದಂದು ಸುದ್ದಿಗೋಷ್ಠಿ ನಡೆಸಿ, ವಿವರ ನೀಡಿದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಗೆ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿದೆ. ಮಾರ್ಚ್ 19ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿರುವ ಎನ್ ಸಿಪಿಗೆ ಎಂಎನ್ಎಸ್ ಸಾಥ್ ನೀಡಲಿದೆ.

Raj Thackerays Maharashtra Navnirman Sena Bows Out of Lok Sabha Elections

ಆದರೆ, ಎಂಎನ್ ಎಸ್ ಬೆಂಬಲ ನೀಡಲು ಮುಂದಾಗಿರುವುದನ್ನು ಎನ್ ಸಿಪಿ ಮಿತ್ರಪಕ್ಷ ಕಾಂಗ್ರೆಸ್ ವಿರೋಧಿಸುತ್ತಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್

2009ರಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎಂಎನ್ ಎಸ್, 2014ರಲ್ಲಿ ಒಂದು ಸೀಟು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಂಎನ್ ಎಸ್ ತನ್ನ ಪ್ರಭಾವವನ್ನು ಉಳಿಸಿಕೊಂಡಿತ್ತು.

ಎನ್ ಸಿಪಿ ಮೊದಲ ಪಟ್ಟಿ ಪ್ರಕಟ, ಬಾರಾಮತಿಯಿಂದ ಸುಪ್ರಿಯಾ ಕಣಕ್ಕೆ ಎನ್ ಸಿಪಿ ಮೊದಲ ಪಟ್ಟಿ ಪ್ರಕಟ, ಬಾರಾಮತಿಯಿಂದ ಸುಪ್ರಿಯಾ ಕಣಕ್ಕೆ

ಒಂದು ಕಾಲದಲ್ಲಿ ಪ್ರಧಾನಿ ಮೋದಿ ಅವರ ಅಭಿಮಾನಿ, ಬೆಂಬಲಿಗನಾಗಿದ್ದ ರಾಜ್ ಠಾಕ್ರೆ ಅವರು, ಈಗ ಬಿಜೆಪಿ ವಿರೋಧಿಯಾಗಿದ್ದು, ಮತ ಬ್ಯಾಂಕ್ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.

English summary
The Maharashtra Navnirman Sena (MNS), led by Raj Thackeray, has decided not to contest the upcoming Lok Sabha elections. MNS leader Shirish Sawant issued a statement in this regard on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X