ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಮುಂದಿಟ್ಟುಕೊಂಡು ಇಂದೆಂಥ ಮಾತು!

By Mahesh
|
Google Oneindia Kannada News

ಮುಂಬೈ, ಅ.14: ಚುನಾವಣೆ ಸಂದರ್ಭದಲ್ಲಿ ಇಲ್ಲ ಸಲ್ಲದ ಆಶ್ವಾಸನೆ ನೀಡುತ್ತಾ ಜನರ ಓಲೈಕೆಗೆ ತೊಡಗುವ ರಾಜಕಾರಣಿಗಳ ಮಧ್ಯೆ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ವಿಭಿನ್ನವಾದ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ರಾಜ್ ಠಾಕ್ರೆ ಅವರ ಕಸಿನ್ ಉದ್ಧವ್ ಅವರು ಬೆಳಗಾವಿ ಗಡಿ ವಿವಾದದಲ್ಲಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಯತ್ನಿಸಿದರೆ ರಾಜ್ ಠಾಕ್ರೆ ಅವರು ಈ ವಿವಾದ ಎಂದಿಗೂ ಬಗೆ ಹರಿಯುವುದಿಲ್ಲ ಎಂದಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ ಎಂದಿಗೂ ಬಗೆ ಹರಿಯುವುದಿಲ್ಲ, ಬಗೆ ಹರಿಯಲು ರಾಜಕೀಯ ಬಿಡುವುದಿಲ್ಲ. ಸುಮಾರು 55 ವರ್ಷಗಳಿಂದ ನಡೆದು ಬಂದಿರುವ ಗೊಂದಲ ಘರ್ಷಣೆಗೆ ತಕ್ಷಣವೇ ಪರಿಹಾರ ನೀಡುತ್ತೇವೆ ಎಂದು ಯಾವುದಾದರೂ ಪಕ್ಷ ಹೇಳಿದರೆ ಅದು ಪೊಳ್ಳು ಭರವಸೆ ಅಲ್ಲದೆ ಮತ್ತೇನಲ್ಲ.

ಪರಿಹಾರ ಯಾರಿಗೂ ಬೇಕಿಲ್ಲ : ಅಸಲಿಗೆ ಸಮಸ್ಯೆಗೆ ಪರಿಹಾರ ಯಾರಿಗೂ ಬೇಕಿಲ್ಲ. ಗಡಿ ವಿವಾದವನ್ನು ಜೀವಂತ ಇಟ್ಟುಕೊಂಡು ರಾಜಕೀಯ ಲಾಭ ಪಡೆಯುವುದೇ ಎಲ್ಲರ ಉದ್ದೇಶ. ಒಂದು ವೇಳೆ ಬೆಳಗಾವಿಯಲ್ಲಿರುವ ಅಷ್ಟೂ ಮರಾಠಿಗಳು ಮಹಾರಾಷ್ಟ್ರಕ್ಕೆ ಸೇರಿದ ಕೂಡಲೇ ಅವರ ಬದುಕಿನ ಭಾಗ್ಯೋದಯವಾಗುತ್ತದೆ ಎಂದರೆ ಅದು ಮರೀಚಿಕೆಯ ಮಾತು.

Border dispute with K'taka can't be solved: Raj Thackeray

ಬೆಳಗಾವಿಯಲ್ಲಿರುವ ಮರಾಠಿಗಳು 24 ತಾಸು ವಿದ್ಯುತ್ ಪಡೆಯುತ್ತಿದ್ದಾರೆ ಎಂದುಕೊಳ್ಳೋಣ. ಇದೇ ವ್ಯವಸ್ಥೆಯನ್ನು ಮಹಾರಾಷ್ಟ್ರದ ಭಾಗಕ್ಕೆ ಬಂದ ಕೂಡಲೇ ನಿರೀಕ್ಷಿಸುವಂತಿಲ್ಲ. ಮಹಾರಾಷ್ಟ್ರದಲ್ಲಿ ವಿದ್ಯುತ್ ಕ್ಷಾಮ ಹೆಚ್ಚಾಗಿದೆ ಎಂದು ರಾಜ್ ಠಾಕ್ರೆ ವಿವರಿಸಿದರು.

ಬೆಳಗಾಂ ಅನ್ನು ಬೆಳಗಾವಿ ಎಂದು ಬದಲಾಯಿಸುವುದು ಕರ್ನಾಟಕ ಸರ್ಕಾರಕ್ಕೆ ಬಿಟ್ಟಿದ್ದು, ಇದರಿಂದ ಮರಾಠಿಗರಿಗೇನು ನಷ್ಟವಿಲ್ಲ. ಮರಾಠಿಗಳು ದೇಶದ ಎಲ್ಲೆಡೆ ನೆಲೆಸಿದ್ದಾರೆ. ವಡೋದರಾದಲ್ಲೂ ಮರಾಠಿಗರು ತಮ್ಮತನವನ್ನು ಉಳಿಸಿಕೊಂಡು ಅಲ್ಲಿನ ಸಂಸ್ಕೃತಿಗೂ ಒಗ್ಗಿಕೊಂಡಿದ್ದಾರೆ. ಹೀಗಾಗಿ ಜನರ ಓಲೈಕೆಗಿಂತ ವಸ್ತುಸ್ಥಿತಿ ಅರಿವು ಮೂಡಿಸುವುದು ಮುಖ್ಯ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ಮಹಾ ಚುನಾವಣೆ ಬಗ್ಗೆ: ಮಹಾರಾಷ್ಟ್ರ ಚುನಾವಣೆ ಚತುಷ್ಕೋನ ಸ್ಪರ್ಧೆ ಎಂದೇ ಎಲ್ಲೆಡೆ ಬಿಂಬಿಸಲಾಗುತ್ತಿದೆ. ಅದರೆ, ಬಿಜೆಪಿ, ಕಾಂಗ್ರೆಸ್, ಶಿವ ಸೇನಾ, ಎನ್ ಸಿಪಿಗೆ ತಕ್ಕ ಉತ್ತರ ನೀಡಲು ಎಂಎನ್ ಎಸ್ ಕೂಡಾ ಸಜ್ಜಾಗಿದೆ. ರಾಷ್ಟ್ರೀಯ ಪಕ್ಷಗಳು ಲೋಕಸಭೆ ಚುನಾವಣೆಯತ್ತ ಮಾತ್ರ ಗಮನ ಹರಿಸಿದರೆ ಒಳ್ಳೆಯದು. ರಾಜ್ಯಗಳ ಅಭಿವೃದ್ಧಿ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟರೆ ಮಾತ್ರ ಏಳಿಗೆ ಸಾಧ್ಯ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಹೇಳಿ ಕೊಟ್ಟ ಪಾಠ ಈಗ ಮರೆತಿದ್ದಾರೆ ಎಂದರು.

English summary
MNS president Raj Thackeray said the border dispute between the Karnataka and Maharashtra cannot be solved as it has been exploited over the years for political gains. He also said MNS won't contest Lok Sabha polls
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X