ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಸಬ್ ಅರ್ಬನ್: ನ.1ರಿಂದ 610 ಹೆಚ್ಚುವರಿ ರೈಲು ಸಂಚಾರ

|
Google Oneindia Kannada News

ಮುಂಬೈ, ನ.1: ಸಬ್ ಅರ್ಬನ್ ರೈಲುಗಳಲ್ಲಿನ ದಟ್ಟಣೆ ತಗ್ಗಿಸಲು ನವೆಂಬರ್ 1ರಿಂದ ಹೆಚ್ಚುವರಿಯಾಗಿ 61ರೈಲುಗಳನ್ನು ಒದಗಿಸುತ್ತಿರುವುದಾಗಿ ರೈಲ್ವೆ ಇಲಾಖೆ ಪ್ರಕಟಿಸಿದೆ.

ಈ ಕುರಿತಂತೆ ಕೇಂದ್ರ ವಲಯ ರೈಲ್ವೆ ಹಾಗೂ ಪಶ್ಚಿಮ ರೈಲ್ವೆ ಜಂಟಿಯಾಗಿ ಪ್ರಕಟಣೆ ಹೊರಡಿಸಿದೆ. ಹೆಚ್ಚುವರಿ ರೈಲು ಸೇವೆಯಲ್ಲದೆ, ವಿಶೇಷ ಸಬ್ ಅರ್ಬನ್ ಸೇವೆಯನ್ನು ಹೆಚ್ಚಿಸಲು ಇಲಾಖೆ ಮುಂದಾಗಿದೆ.

610 ರೈಲುಗಳ ಪೈಕಿ 314 ರೈಲುಗಳು ಕೇಂದ್ರ ರೈಲ್ವೆ ವಲಯ ಜಾಲದಲ್ಲಿ ಹಾಗೂ 296 ಪಶ್ಚಿಮ ವಲಯದಲ್ಲಿ ಚಲಿಸಲಿವೆ.ಮುಂಬೈನ ಸಬ್ ಅರ್ಬನ್ ಜಾಲದಲ್ಲಿ ಒಟ್ಟಾರೆ, ಸುಮಾರು 1,410 ರೈಲುಗಳು ಸಂಚರಿಸುತ್ತಿದ್ದು, ಈ ಪೈಕಿ 706 ಕೇಂದ್ರ ಲೇನ್ ಹಾಗೂ 704 ಪಶ್ಚಿಮ ರೈಲ್ವೆ ವಲಯದಲ್ಲಿ ಸಂಚರಿಸುತ್ತಿವೆ.

Railways to run 610 additional local train services in Mumbai from November 1

ಜೂನ್ 15ರಂದು ವಿಶೇಷ ರೈಲು ವ್ಯವಸ್ಥೆ ಮೂಲಕ ಅಗತ್ಯ ಸೇವೆ ಒದಗಿಸುವವರಿಗೆ ಮಾತ್ರ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿತ್ತು. ಇತ್ತೀಚೆಗೆ ವಕೀಲರು ಹಾಗೂ ವಿದೇಶಿ ಸಲಹೆಗಾರರ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಕೊವಿಡ್ 19 ಸಾಂಕ್ರಾಮಿಕಕ್ಕೂ ಮೊದಲು ಸುಮಾರು 80 ಲಕ್ಷ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸಬ್ ಅರ್ಬನ್ ರೈಲ್ವೆ ಈಗ 22 ಲಕ್ಷ ಪ್ರಯಾಣಿಕರಿಗೆ ತಗ್ಗಿದೆ. ಕೊವಿಡ್ 19 ಅರೋಗ್ಯ ಹಾಗೂ ಸಾಮಾಜಿಕ ಅಂತರದ ನಿಯಮಾವಳಿಗಳಿಗೆ ಬದ್ಧರಾಗಿ ಪ್ರಯಾಣಿಸಲು ಸೂಚಿಸಲಾಗಿದೆ.

English summary
In a bid to reduce overcrowding in suburban local trains here, the Railways has decided to run 610 additional services starting November 1, an official said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X