ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡ್ರು ಬಿಡಲಿರುವ ಬುಲೆಟ್ ರೈಲಿನ ವಿಶೇಷತೆಗಳು!

By Mahesh
|
Google Oneindia Kannada News

ನವದೆಹಲಿ, ಜು.8: ರೇಲ್ವೆ ಬಜೆಟ್ ಮಂಡನೆ ಮಾಡಿದಂತೆ ಮುಂಬೈ ಹಾಗೂ ಅಹಮದಾಬಾದಿನ ನಡುವೆ ಶೀಘ್ರದಲ್ಲೆ ಬುಲೆಟ್ ರೈಲು ಸಂಚರಿಸಲಿದೆ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು, ದೇಶದ ಪ್ರಪ್ರಥಮ ಬುಲೆಟ್ ರೈಲು ಯೋಜನೆ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ.

ಆರಂಭಿಕ ಹಂತದಲ್ಲಿ ಮುಂಬೈ ಮತ್ತು ಅಹಮದಾಬಾದ್ ನಡುವೆ ಪ್ರಥಮ ಬುಲೆಟ್ ರೈಲನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಒಂದು ಬುಲೆಟ್ ರೈಲನ್ನು ಓಡಿಸಲು ಸುಮಾರು 9 ಲಕ್ಷ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. [ಸದಾನಂದರ ಚೊಚ್ಚಲ ಬಜೆಟ್ ಮುಖ್ಯಾಂಶ]

ಅಲ್ಲದೆ, ಬುಲೆಟ್ ರೈಲು ಆರಂಭಿಸಲು ಸುಮಾರು 60 ಸಾವಿರ ಕೋಟಿ ವೆಚ್ಚ ತಗುಲಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಚೀನಾ ಮತ್ತು ಜಪಾನ್ ದೇಶಗಳಲ್ಲಿ ತನ್ನ ವೇಗದಿಂದಲೇ ಖ್ಯಾತಿಗಳಿಸಿರುವ ಬುಲೆಟ್ ರೈಲುಗಳು ಕೆಲವೇ ನಿಮಿಷಗಳ ತನ್ನ ನಿಗದಿತ ನಿಲ್ದಾಣಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ ಎಂದು ಸದಾನಂದ ಗೌಡ ಹೇಳಿದ್ದಾರೆ. [ಗೌಡರ ಓಡಿಸಿದ ಹೊಸ ರೈಲುಗಳ ಪಟ್ಟಿ]

ಗಂಟೆಗೆ ಬರೋಬ್ಬರಿ 160 ಕಿ.ಮೀ. ಸಂಚರಿಸುವ ಸೆಮಿ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ದೆಹಲಿ ಹಾಗೂ ಆಗ್ರಾ ನಡುವೆ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿದೆ. ನವೆಂಬರ್ ವೇಳೆಗೆ ಪ್ರಧಾನಿಯ ಕನಸಿನ ಯೋಜನೆ ಸಂಪೂರ್ಣವಾಗಿ ಕಾರ್ಯಗತವಾಗುವ ಸಾಧ್ಯತೆಯಿದೆ.

ದೇಶದ ಪ್ರಪ್ರಥಮ ಬುಲೆಟ್ ರೈಲು

ದೇಶದ ಪ್ರಪ್ರಥಮ ಬುಲೆಟ್ ರೈಲು

ರೇಲ್ವೆ ಬಜೆಟ್ ಮಂಡನೆ ಮಾಡಿದಂತೆ ಮುಂಬೈ ಹಾಗೂ ಅಹಮದಾಬಾದಿನ ನಡುವೆ ಶೀಘ್ರದಲ್ಲೆ ಬುಲೆಟ್ ರೈಲು ಸಂಚರಿಸಲಿದೆ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು, ದೇಶದ ಪ್ರಪ್ರಥಮ ಬುಲೆಟ್ ರೈಲು ಯೋಜನೆ ಬಗ್ಗೆ ಹೆಮ್ಮೆಯಿಂದ ಹೇಳಿದ್ದಾರೆ.

ಬುಲೆಟ್ ರೈಲಿನ ವೇಗ ಮಿತಿ ಎಷ್ಟಿರುತ್ತದೆ?

ಬುಲೆಟ್ ರೈಲಿನ ವೇಗ ಮಿತಿ ಎಷ್ಟಿರುತ್ತದೆ?

ಬುಲೆಟ್ ರೈಲಿನ ವೇಗ ಸಾಮಾನ್ಯ ರೈಲುಗಳಿಗಿಂತಲೂ ಹೆಚ್ಚಾಗಿದ್ದು, ಗಂಟೆಗೆ ಕನಿಷ್ಟ 200 ಕಿ.ಮೀನಿಂದ ಗರಿಷ್ಟ 250 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

ಆರಂಭಿಕ ಹಂತದಲ್ಲಿ ಮುಂಬೈನಿಂದ ಅಹಮಾದಾಬಾದ್ ನಡುವೆ ಬುಲೆಟ್ ರೈಲು ಓಡಿಸಲು ಯೋಜನೆ ರೂಪಿಸಲಾಗಿದ್ದು, ಸುರಕ್ಷತಾ ದೃಷ್ಟಿಕೋನದಿಂದ ಬುಲೆಟ್ ರೈಲಿನ ವೇಗವನ್ನು ಆರಂಭಿಕ ಹಂತದಲ್ಲಿ ಕಡಿತಗೊಳಿಸಿ ಪ್ರತಿ ಗಂಟೆಗೆ 160 ಕಿ.ಮೀ ನಿಂದ 200 ಕಿ.ಮೀಗಳಿಗೆ ಮಿತಿಗೊಳಿಸಲಾಗುವುದು ಎಂದು ಸದಾನಂದಗೌಡ ಹೇಳಿದ್ದಾರೆ.

ಬುಲೆಟ್ ಟ್ರೈನ್ ಗೆ ಬೇಕಾಗುತ್ತೆ ವಿಶೇಷ ಹಳಿ

ಬುಲೆಟ್ ಟ್ರೈನ್ ಗೆ ಬೇಕಾಗುತ್ತೆ ವಿಶೇಷ ಹಳಿ

ಅಲ್ಲದೆ, ಬುಲೆಟ್ ರೈಲನ್ನು ಓಡಿಸಲು ವಿಶೇಷ ಹಳಿಗಳ ನಿರ್ಮಾಣದ ಅವಶ್ಯಕತೆ ಇದ್ದು, ಇದಕ್ಕಾಗಿ ಸುಮಾರು 9 ಲಕ್ಷ ಕೋಟಿ ವೆಚ್ಚವಾಗಬಹುದು ಮತ್ತು ರೈಲು ಆರಂಭಿಸಲು ಸುಮಾರು 60 ಸಾವಿರ ಕೋಟಿ ಖರ್ಚಾಗುತ್ತದೆ ಎಂದು ಸದಾನಂದಗೌಡ ಅವರು ತಿಳಿಸಿದರು.

ದೆಹಲಿಯಿಂದ ನಾಲ್ಕು ಸೆಮಿ ಬುಲೆಟ್ ರೈಲುಗಳು

ದೆಹಲಿಯಿಂದ ನಾಲ್ಕು ಸೆಮಿ ಬುಲೆಟ್ ರೈಲುಗಳು

ದೇಶದ ವಿವಿಧೆಡೆಯಿಂದ 4 ಸೆಮಿ ಬುಲೆಟ್ ರೈಲುಗಳನ್ನು ಓಡಿಸುವುದಾಗಿ ಸದಾನಂದಗೌಡ ಅವರು ಘೋಷಣೆ ಮಾಡಿದ್ದಾರೆ.

ದೆಹಲಿಯಿಂದ ಕಾನ್ಪುರ, ದೆಹಲಿ-ಚಂಡೀಗಡ, ದೆಹಲಿ-ಪಠಾಣ್ ಕೋಟ್ ಮತ್ತು ದೆಹಲಿ-ಆಗ್ರಾಗೆ ಸೆಮಿ ಬುಲೆಟ್ ರೈಲುಗಳ ಯೋಜನೆ ಘೋಷಣೆ ಮಾಡಲಾಗಿದೆ. ಇದಲ್ಲದೆ ದೇಶದ ವಿವಿಧ ಪ್ರತಿಷ್ಟಿತ ನಗರಗಳನ್ನು ಸಂಪರ್ಕಿಸುವಂತೆ 9 ವಿವಿಧ ಮಾರ್ಗಗಳಲ್ಲಿ ಸೆಮಿ ಬುಲೆಟ್ ರೈಲುಗಳ ಪ್ರಸ್ತಾಪ ಮಾಡಲಾಗಿದೆ.
ಮೆಟ್ರೋ ನಗರಗಳನ್ನು ಸಂಪರ್ಕಿಸುವ ಯೋಜನೆ

ಮೆಟ್ರೋ ನಗರಗಳನ್ನು ಸಂಪರ್ಕಿಸುವ ಯೋಜನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ Diamond Quadrilateral Network ಜಾರಿಗೊಳ್ಳಲಿದೆ. ಹೈಸ್ಪೀಡ್ ರೈಲುಗಳ ಮೂಲಕ ದೇಶದ ಪ್ರಮುಖ ನಗರಗಳಾದ ದೆಹಲಿ, ಚೆನ್ನೈ, ಕೋಲ್ಕತ್ತಾ, ಮುಂಬೈ, ಬೆಂಗಳೂರು ಸೇರಿದಂತೆ ಮೆಟ್ರೋ ಸಿಟಿಗಳಿಗೆ ತ್ವರಿತಗತಿಯಲ್ಲಿ ಸಂಚರಿಸುವ ಸೌಲಭ್ಯ ಒದಗಿಸಲಾಗುವುದು.

ಮೂಲ ಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ಬಿಡುಗಡೆ

ಮೂಲ ಸೌಕರ್ಯಕ್ಕಾಗಿ ಹೆಚ್ಚಿನ ಅನುದಾನ ಬಿಡುಗಡೆ

ಬುಲೆಟ್ ಟ್ರೈನ್, ಹೈಸ್ಪೀಡ್ ರೈಲು ಸ್ಥಾಪನೆಗೆ ಬೇಕಾದ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹೆಚ್ಚುವರಿಯಾಗಿ 100 ಕೋಟಿ ರು ಮೀಸಲಿಡಲಾಗಿದೆ. RVNL ಹೈ ಸ್ಪೀಡ್ ರೈಲ್ ಕಾರಿಡಾರ್ ನಡಿಯಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಪ್ರಸಕ್ತ ರೈಲು ಜಾಲವನ್ನು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಸದಾನಂದ ಗೌಡ ಹೇಳಿದ್ದಾರೆ.

English summary
Railways Minister Sadananda Gowda has said that the Indian Railways is on its way to fulfill the long cherished dream to run a bullet train between Mumbai and Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X