ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು

|
Google Oneindia Kannada News

ಮುಂಬೈ, ಅಕ್ಟೋಬರ್ 4: ಸರ್ಕಾರ ಒದಗಿಸುವ ಸೇವೆಗಳ ಗುಣಮಟ್ಟದ ಬಗ್ಗೆ ಜನರಲ್ಲಿ ತಕರಾರು ಇರುವುದು ಸಾಮಾನ್ಯ. ಸಣ್ಣಪುಟ್ಟ ಲೋಪದೋಷಗಳಿಗೂ ಸೇವೆಯನ್ನು ಟೀಕಿಸುವ ಮನೋಭಾವ ನಮ್ಮದು. ಆದರೆ, ಸರ್ಕಾರ ಒದಗಿಸುವ ಸೌಲಭ್ಯಗಳನ್ನು ಮತ್ತು ಸಾರ್ವಜನಿಕ ವಸ್ತುಗಳನ್ನು ರಕ್ಷಿಸುವಲ್ಲಿ ಎಷ್ಟರಮಟ್ಟಿಗೆ ನಾವು ಬದ್ಧತೆ ತೋರಿಸುತ್ತಿದ್ದೇವೆ ಎಂಬುದನ್ನು ಜಾಣ್ಮೆಯಿಂದ ಮರೆಯುತ್ತೇವೆ.

ಭಾರತದ ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾದ ರೈಲ್ವೆಯಲ್ಲಿ ಒದಗಿಸುವ ಸೌಲಭ್ಯಗಳು, ಅದರ ಗುಣಮಟ್ಟ ಮತ್ತು ಸ್ವಚ್ಛತೆಗಳ ಬಗ್ಗೆ ಅನೇಕ ದೂರುಗಳಿವೆ. ಆದರೆ, ರೈಲಿನಲ್ಲಿ ಓಡಾಡುವ ಪ್ರಯಾಣಿಕರು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಜೋಪಾನವಾಗಿ ನೋಡಿಕೊಳ್ಳುವ ಹೊಣೆಗಾರಿಕೆಯನ್ನೂ ನಿರ್ವಹಿಸಬೇಕಲ್ಲವೇ?

ಆದರೆ, ರೈಲಿನಲ್ಲಿ ಓಡಾಡುವ ಪ್ರಯಾಣಿಕರು, ರೈಲಿನಲ್ಲಿನ ವಸ್ತುಗಳನ್ನೇ ಹೊತ್ತೊಯ್ಯುತ್ತಿದ್ದಾರೆ. ಹೀಗೆ ಕಳೆದ ವರ್ಷ ರೈಲ್ವೆ ಪ್ರಯಾಣಿಕರು ರೈಲ್ವೆ ಇಲಾಖೆಗೆ ಸೇರಿದ ಎಷ್ಟು ವಸ್ತುಗಳನ್ನು ಕದ್ದಿದ್ದಾರೆ ಎಂಬುದನ್ನು ನೋಡಿದರೆ ದಿಗಿಲಾಗುತ್ತದೆ.

ದೇಶದಲ್ಲೇ ಮೊದಲ ಬಾರಿಗೆ ಗೂಡ್ಸ್ ರೈಲು ನಿಲ್ದಾಣಗಳ ನಿರ್ಮಾಣದೇಶದಲ್ಲೇ ಮೊದಲ ಬಾರಿಗೆ ಗೂಡ್ಸ್ ರೈಲು ನಿಲ್ದಾಣಗಳ ನಿರ್ಮಾಣ

ವಿಶೇಷವೆಂದರೆ ಹೆಚ್ಚಿನ ಕಳ್ಳತನಗಳು ನಡೆಯುವುದು ದುಬಾರಿ ವೆಚ್ಚದ ಎ.ಸಿ. ಅಥವಾ ಐಷಾರಾಮಿ ರೈಲುಗಳಲ್ಲಿಯೇ. ಈ ರೈಲುಗಳಲ್ಲಿ ಹಣವಂತರೇ ಹೆಚ್ಚಾಗಿ ಪ್ರಯಾಣಿಸುತ್ತಾರೆ. ದೂರದ ರಾಜ್ಯಗಳಿಗೆ ಪ್ರಯಾಣಿಸುವವರಿಗೆ ಟವೆಲ್, ಬೆಡ್‌ಶೀಟ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಬೋಗಿಗಳಲ್ಲಿ ಪ್ರಯಾಣಿಸುವ ಜನರು ಪುಕ್ಕಟೆಯಾಗಿ ಸಿಕ್ಕ ವಸ್ತು ತಮ್ಮದೇ ಎಂಬಂತೆ ಅವುಗಳನ್ನು ಮರಳಿಸದೆ ಹೊತ್ತೊಯ್ಯುತ್ತಿದ್ದಾರೆ.

ಈಗ ದೊರೆತಿರುವುದು ಪಶ್ಚಿಮ ಮತ್ತು ಕೇಂದ್ರ ರೈಲ್ವೆ ವಿಭಾಗಗಳಲ್ಲಿ ದೊರೆತಿರುವ ಕಳ್ಳತನದ ಮಾಹಿತಿ ಮಾತ್ರ.

ಪಶ್ಚಿಮ ರೈಲ್ವೆಯಲ್ಲಿ ಕಳ್ಳತನದ ಪ್ರಮಾಣ

ಪಶ್ಚಿಮ ರೈಲ್ವೆಯಲ್ಲಿ ಕಳ್ಳತನದ ಪ್ರಮಾಣ

ಕಳೆದ ವರ್ಷ ಕಳ್ಳತನವಾದ ವಸ್ತುಗಳ ಸುದೀರ್ಘ ಪಟ್ಟಿಯನ್ನು ಪಶ್ಚಿಮ ರೈಲ್ವೆ ಬಿಡುಗಡೆ ಮಾಡಿದೆ.

ದೂರದ ಊರುಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಲ್ಲಿ 1.95 ಲಕ್ಷ ಟವೆಲ್‌ಗಳನ್ನು ಕದಿಯಲಾಗಿದೆ. 81,736 ಬೆಡ್‌ಶೀಟ್‌ಗಳು, 55,573 ದಿಂಬಿನ ಕವರ್‌ಗಳು, 5,038 ದಿಂಬುಗಳು ಮತ್ತು 7,043 ಬ್ಲಾಂಕೆಟ್‌ಗಳನ್ನು ಖದೀಮರು ಎಗರಿಸಿದ್ದಾರೆ.

ಮಾತ್ರವಲ್ಲ, ರೈಲ್ವೆ ಶೌಚಾಲಯಗಳಲ್ಲಿ ಸರಪಳಿಯನ್ನೇ ಕತ್ತರಿಸಿ 200 ಮಗ್‌ಗಳನ್ನು ಹೊತ್ತೊಯ್ದಿದ್ದಾರೆ. ಸುಮಾರು ಒಂದು ಸಾವಿರ ನಲ್ಲಿಗಳು ಹಾಗೂ 300 ಫ್ಲಶ್ ಪೈಪ್‌ಗಳನ್ನು ಕೂಡ ಕದ್ದೊಯ್ದಿದ್ದಾರೆ.

ಬೆಂಗಳೂರು ರೈಲ್ವೆ ನಿಲ್ದಾಣ ಸ್ವಚ್ಛತೆಯಲ್ಲಿ ಪರ್ವಾಗಿಲ್ಲ ಅಂತೆ!ಬೆಂಗಳೂರು ರೈಲ್ವೆ ನಿಲ್ದಾಣ ಸ್ವಚ್ಛತೆಯಲ್ಲಿ ಪರ್ವಾಗಿಲ್ಲ ಅಂತೆ!

2.5 ಕೋಟಿ ಮೌಲ್ಯದ ವಸ್ತು ಕಳ್ಳತನ

2.5 ಕೋಟಿ ಮೌಲ್ಯದ ವಸ್ತು ಕಳ್ಳತನ

ಪಶ್ಚಿಮ ರೈಲ್ವೆಯಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಕಳ್ಳತನವಾದ ವಸ್ತುಗಳ ಅಂದಾಜು ಮೌಲ್ಯ 2.5 ಕೋಟಿ ರೂ. ಒಂದು ಬೆಟ್‌ಶೀಟ್‌ಗೆ 132 ರೂ, ಟವೆಲ್‌ಗೆ 22 ರೂ ಮತ್ತು ತಲೆದಿಂಬಿಗೆ 25 ರೂ. ವೆಚ್ಚವಿದೆ. ಪ್ರಯಾಣಿಕರಿಗೆ ನೀಡಿದ ಪ್ರತಿ ವಸ್ತುಗಳು ವಾಪಸ್ ಬಂದಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಆಯಾ ಕೋಚ್‌ಗಳ ಸಹಾಯಕರ ಜವಾಬ್ದಾರಿ ಎನ್ನುತ್ತದೆ ರೈಲ್ವೆ ಇಲಾಖೆ ಮೂಲಗಳು.

ರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನರೈಲ್ವೆ ಹಳಿ ತಪಾಸಣೆಗೆ ಇನ್ನು ಅಧಿಕಾರಿಗಳು ಬೇಕಿಲ್ಲ, ಬಂತು ವಾಹನ

ಕೇಂದ್ರ ರೈಲ್ವೆಯಲ್ಲಿ ಕಳವು

ಕೇಂದ್ರ ರೈಲ್ವೆಯಲ್ಲಿ ಕಳವು

ಕೇಂದ್ರ ರೈಲ್ವೆಯಲ್ಲಿ 2018ರ ಏಪ್ರಿಲ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿಯೇ 79,350 ಟವೆಲ್‌ಗಳು, 27,545 ಬೆಡ್‌ಶೀಟ್‌ಗಳು, 21,050 ದಿಂಬಿನ ಕವರ್‌ಗಳು, 2,150 ತಲೆದಿಂಬು ಮತ್ತು 2065 ಬ್ಲಾಂಕೆಟ್‌ಗಳನ್ನು ಕಳ್ಳತನ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ಅಂದಾಜು 62 ಲಕ್ಷ ರೂ.

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಭಾರತೀಯ ರೈಲ್ವೆ ಸುಮಾರು 4 ಸಾವಿರ ಕೋಟಿ ರೂ ನಷ್ಟ ಅನುಭವಿಸಿದೆ. ಅದರಲ್ಲಿ ಕಳ್ಳತನಗಳಿಂದ ಆದ ನಷ್ಟದ ಪಾಲು ಅಧಿಕವಾಗಿದೆ. ಕಿಟಕಿಯ ಸರಳುಗಳನ್ನು ಕತ್ತರಿಸುವುದು, ಫ್ಯಾನ್‌ಗಳನ್ನು ಕಳಚುವುದು ಈ ಕಳ್ಳರಿಗೆ ಸಲೀಸಾಗಿದೆ.

ಕಡಿಮೆ ದರವೇ 1,185 ರೂ.

ಕಡಿಮೆ ದರವೇ 1,185 ರೂ.

ಐಷಾರಾಮಿ ರೈಲುಗಳಲ್ಲಿನ ಕೋಚ್‌ಗಳಲ್ಲಿ ಈ ಕಳ್ಳರು ತಮ್ಮ ಕೈಚಳಕ ಮೆರೆಯುತ್ತಿದ್ದಾರೆ. ಮುಖ್ಯವಾಗಿ ಅಲ್ಲಿನ ಬಾತ್‌ರೂಂ ಫಿಟ್ಟಿಂಗ್‌ಗಳನ್ನು ಕಳಚಿ ಕದಿಯುತ್ತಾರೆ.

ಕಳೆದ ವರ್ಷದ ಮೇ ತಿಂಗಳಿನಲ್ಲಿ ಚಾಲನೆ ಪಡೆದ ಐಷಾರಾಮಿ ರೈಲು ತೇಜಸ್ ಎಕ್ಸ್‌ಪ್ರೆಸ್‌ನಿಂದ ಮೊದಲ ದಿನದಲ್ಲೇ ಡಜನ್‌ಗಟ್ಟಲೆ ಹೆಡ್‌ಫೋನ್‌ಗಳನ್ನು ಕದ್ದಿದ್ದರೆ, ಎಲ್‌ಇಡಿ ಸ್ಕ್ರೀನ್‌ಗಳಿಗೆ ಹಾನಿ ಮಾಡಿದ್ದರು. ಈ ರೈಲಿನ ಪ್ರಯಾಣದ ಅತಿ ಕಡಿಮೆ ದರವೆಂದರೆ 1,185 ರೂ.

97 ಕೋಟಿ ರೂ ಮೌಲ್ಯದ ವಸ್ತು ವಶ

97 ಕೋಟಿ ರೂ ಮೌಲ್ಯದ ವಸ್ತು ವಶ

ರೈಲಿನಲ್ಲಿ ನಡೆಯುವ ಕಳ್ಳತನಗಳನ್ನು ತಡೆಯಲು ಇಲಾಖೆ ಸಾಕಷ್ಟು ಪ್ರಯತ್ನಿಸುತ್ತದೆ. ನಿರಂತರ ಪೊಲೀಸ್ ಗಸ್ತು ಇದ್ದರೂ ಅವರ ಕಣ್ಣುತಪ್ಪಿಸಿ ಕದಿಯುವುದರಲ್ಲಿ ಪರಿಣತರಾದ ಕಳ್ಳರಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಸಿಬ್ಬಂದಿ ವಾಶ್‌ರೂಮ್‌ನ ಶವರ್‌ಗಳು, ಕಿಟಕಿಯ ಸರಳುಗಳು ಸೇರಿದಂತೆ 2.97 ಕೋಟಿ ಮೌಲ್ಯದ ಕದ್ದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

ರೈಲ್ವೆ ಕಳ್ಳನ ಬಂಧನ

ಸೋಮವಾರ ಬಾಂದ್ರಾ- ಅಮೃತಸರ ಪಶ್ಚಿಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬ್ಲಾಂಕೆಟ್ಸ್ ಮತ್ತು ಬೆಡ್‌ಶೀಟ್‌ಗಳನ್ನು ಕದಿಯುತ್ತಿದ್ದ ಮುಂಬೈನ ನಿವಾಸಿ ಶಬ್ಬೀರ್ ರೋಟಿವಾಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತನ ಬಳಿ ಕದ್ದ ಮೂರು ಬ್ಲಾಂಕೆಟ್‌ಗಳು, ಆರು ಬೆಡ್‌ಶೀಟ್ ಮತ್ತು ಮೂರು ದಿಂಬುಗಳು ದೊರೆತಿದ್ದವು.

ಆದರೆ, ತುಂಬಿ ತುಳುಕುವ ರೈಲುಗಳಲ್ಲಿ ಕಳ್ಳ ಪ್ರಯಾಣಿಕರನ್ನು ಹಿಡಿಯುವುದು ಸುಲಭವಲ್ಲ. ಹೀಗಾಗಿ ಕಳ್ಳರ ಪತ್ತೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

English summary
Passengers of Indian Railways are headache for the department. According to the numbers released by Western Railways, 1.95 lakh towels, 81,736 bedsheets, 55,573 pillow covers were stolen alone in the last fiscal year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X