ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ : ರೈಲ್ವೆ ಪಾದಚಾರಿ ಸೇತುವೆ ಕುಸಿತ, 4 ಸಾವು

|
Google Oneindia Kannada News

ಮುಂಬೈ, ಮಾರ್ಚ್ 14 : ಮುಂಬೈನಲ್ಲಿ ರೈಲ್ವೆ ನಿಲ್ದಾಣದ ಪಾದಚಾರಿ ಸೇತುವೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ 34 ಜನರು ಗಾಯಗೊಂಡಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದೆ.

ಗುರುವಾರ ರಾತ್ರಿ ಛತ್ರಪತಿ ಶಿವಾಜಿ ಟೆರ್ಮಿನಸ್ ರೈಲ್ವೆ ನಿಲ್ದಾಣದ ಹೊರಭಾಗದ ಪಾದಚಾರಿ ಸೇತುವೆ ಕುಸಿದುಬಿದ್ದಿದೆ. ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಭಂದಿ ರಕ್ಷಣಾ ಕಾರ್ಯಾಚಣೆ ನಡೆಸುತ್ತಿದ್ದಾರೆ.

ಗುರುಪುರ ಸೇತುವೆ: ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದೇ ಜಿಲ್ಲಾಡಳಿತ?ಗುರುಪುರ ಸೇತುವೆ: ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದೇ ಜಿಲ್ಲಾಡಳಿತ?

Bridge collapses in Mumbai : At Least 7 Injured

ಆಜಾದ್ ಮೈದಾನ್ ಪೊಲೀಸ್ ಠಾಣೆ, ಟೈಮ್ಸ್‌ ಆಫ್ ಇಂಡಿಯಾ ಕಟ್ಟಡವನ್ನು ರೈಲ್ವೆ ನಿಲ್ದಾಣದೊಂದಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತಿತ್ತು. ಗುರುವಾರ ರಾತ್ರಿ ಸೇತುವೆ ಕುಸಿದಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ಬಿರುಕುಬಿಟ್ಟ ಸೇತುವೆ ಸುರಸ್ತಿ ಮಾಡಿ ಮಾನವೀಯತೆ ಮೆರೆದ ಪೊಲೀಸರು!ಬಿರುಕುಬಿಟ್ಟ ಸೇತುವೆ ಸುರಸ್ತಿ ಮಾಡಿ ಮಾನವೀಯತೆ ಮೆರೆದ ಪೊಲೀಸರು!

ಸೇತುವೆ ಕುಸಿತದಿಂದಾಗಿ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಬದಲಿ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸೆಂಟ್ ಜಾರ್ಜ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Railway

ಪಾದಚಾರಿ ಸೇತುವೆಯ ಬೀಮ್‌ಗಳು ಹಾಗೆ ಇದ್ದು ಕಾಂಕ್ರೀಟ್‌ ಭಾಗಗಳು ಮಾತ್ರ ಕುಸಿದು ರಸ್ತೆಗೆ ಬಿದ್ದಿವೆ. ಅವಶೇಷಗಳಡಿ 15ಕ್ಕೂ ಅಧಿಕ ಜನರು ಸಿಲುಕಿಹಾಕಿಕೊಂಡಿರುವ ಸಾಧ್ಯತೆ ಇದೆ. ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

2018ರ ಜುಲೈ 4ರಂದು ಅಂಧೇರಿ ಪ್ರದೇಶದಲ್ಲಿ ಉಪನಗರ ರೈಲು ಮಾರ್ಗವನ್ನು ಸಂಪರ್ಕಿಸುವ ಪಾದಚಾರಿ ಸೇತುವೆ ಕುಸಿದು ಬಿದ್ದಿತ್ತು. ಈ ಅಪಘಾತದಲ್ಲಿ ಐವರು ಗಾಯಗೊಂಡಿದ್ದರು. 1971ರಲ್ಲಿ ನಿರ್ಮಿಸಿದ್ದ ಸೇತುವೆಯನ್ನು ಗೋಖಲೆ ಸೇತುವೆ ಎಂದು ಕರೆಯಲಾಗುತ್ತಿತ್ತು.

ಕಾಲ್ತುಳಿತದ ನೆನಪು : 2017ರ ಸೆಪ್ಟೆಂಬರ್ 29ರಂದು ಎಲ್ಫಿನ್‌ಸ್ಟನ್ ರೋಡ್ ರೈಲ್ವೆ ಸೇತುವೆಯಲ್ಲಿ ಕಾಲ್ತುಳಿತ ಉಂಟಾಗಿ 22 ಜನರು ಮೃತಪಟ್ಟಿದ್ದರು. ಸೇತುವೆ ಕುಸಿದಿದೆ ಎಂಬ ವದಂತಿಯೇ ಕಾಲ್ತುಳಿತಕ್ಕೆ ಕಾರಣವಾಗಿತ್ತು.

English summary
The footover bridge outside the Chhatrapati Shivaji Maharaj Terminus (CSMT) railway station in Mumbai collapsed on March 14, 2019 evening. According to initial inputs at least seven persons are injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X