ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಜಿಂದಾಬಾದ್ ಎಂದ ರೈಲ್ವೆ ನೌಕರ ಕಂಬಿಯ ಹಿಂದೆ

|
Google Oneindia Kannada News

ಮುಂಬೈ, ಫೆಬ್ರವರಿ 16 : ನಲವತ್ನಾಲ್ಕು ಭಾರತೀಯ ಯೋಧರ ಬರ್ಬರ ಹತ್ಯೆ ನೂರು ಕೋಟಿ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ, ದೇಶಪ್ರೇಮವನ್ನು ಬಡಿದೆಬ್ಬಿಸುವಂತೆ ಮಾಡಿದೆ, ಉಗ್ರರ ವಿರುದ್ಧ ಆಕ್ರೋಶ ಸಿಡಿದೇಳುವಂತೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ 'ಪಾಕಿಸ್ತಾನ ಜಿಂದಾಬಾದ್' ಅಂದವರನ್ನು ಏನು ಮಾಡಬೇಕು?

ಯೋಧರ ಮೇಲೆ ಉಗ್ರರ ದಾಳಿ ಖಂಡಿಸಿ ಫೆ.19 ರಂದು ಕರ್ನಾಟಕ ಬಂದ್ ಯೋಧರ ಮೇಲೆ ಉಗ್ರರ ದಾಳಿ ಖಂಡಿಸಿ ಫೆ.19 ರಂದು ಕರ್ನಾಟಕ ಬಂದ್

ಕೇಂದ್ರ ಮೀಸಲು ಪೊಲೀಸ್ ಪಡೆಯ 44 ಯೋಧರ ಸಾವಿಗಾಗಿ ಇಡೀ ದೇಶವೇ ಮಮ್ಮಲ ಮರುಗಿ, ಕಂಬನಿ ಮಿಡಿಯುತ್ತಿರುವಾಗ ಮತ್ತು ಭಯೋತ್ಪಾದನೆ ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತಿರುವಾಗ, ಲೋನಾವಾಳಾದ ಶಿವಾಜಿ ಚೌಕ್ ನಲ್ಲಿ 39 ವರ್ಷದ ವ್ಯಕ್ತಿಯೊಬ್ಬ 'ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿದ್ದಾನೆ.

Railway employee sent to jail for shouting Pakistan Zindabad

ಹಾಗೆ ಕೂಗಿದವನು ಹಿಂದೂ ಆಗಿರುವುದು ಮತ್ತೂ ದುರ್ದೈವದ ಸಂಗತಿ. ಈತನ ಹೆಸರು ಉಪೇಂದ್ರಕುಮಾರ್ ಶ್ರೀವೀರ್. ಈತ ರೈಲ್ವೆ ಇಲಾಖೆಯಲ್ಲಿ ಜ್ಯೂನಿಯರ್ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇಂಥವನಿಗೆ ಕೆಲಸ ಕೊಟ್ಟಿದ್ದಕ್ಕೆ ರೈಲ್ವೆ ಇಲಾಖೆ ಪರಿತಪಿಸಬೇಕಿದೆ. ಸ್ಥಳೀಯರು ಒಟ್ಟುಗೂಡಿ ಹುತಾತ್ಮ ಯೋಧರಿಗಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದ ಸಮಯದಲ್ಲಿ ಈ ದೇಶದ್ರೋಹಿ ದೇಶವಿರೋಧಿ ಘೋಷಣೆ ಕೂಗಿದ್ದಾನೆ. ಇವನನ್ನು ಪೊಲೀಸರು ಕೂಡಲೆ ಬಂಧಿಸಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಆ ಯೋಧ ಮನೆಗೆ ಬಂದಿದ್ದು ಶವವಾಗಿ... ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಆ ಯೋಧ ಮನೆಗೆ ಬಂದಿದ್ದು ಶವವಾಗಿ...

ಲೋನಾವಾಳಾದ ನಿವಾಸಿಗಳು ಶಿವಾಜಿ ಚೌಕ್ ನಲ್ಲಿ ಸೇರಿ ಅಗಲಿದ ಯೋಧರಿಗಾಗಿ ಕಂಬನಿ ಮಿಡಿಯುತ್ತಿದ್ದರು. ಎಲ್ಲವೂ ಪ್ರಶಾಂತವಾಗಿಯೇ ಇತ್ತು. ಆಗ ಅಲ್ಲಿದೆ ಬಂದ ಉಪೇಂದ್ರಕುಮಾರ್, ಅಲ್ಲಿದ್ದವರೆಲ್ಲ ನಿಬ್ಬೆರಗಾಗುವಂತೆ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಲು ಆರಂಭಿಸಿದ ಎಂದು ಲೋನಾವಾಳಾದ ಪೊಲೀಸ್ ಅಧಿಕಾರಿ ಬಿಆರ್ ಪಾಟೀಲ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪುಲ್ವಾಮಾ ದಾಳಿಯ ಲೇವಡಿ: ಎನ್‌ಡಿಟಿವಿಯ ನಿಧಿ ಸೇಥಿ ಅಮಾನತು ಪುಲ್ವಾಮಾ ದಾಳಿಯ ಲೇವಡಿ: ಎನ್‌ಡಿಟಿವಿಯ ನಿಧಿ ಸೇಥಿ ಅಮಾನತು

Railway employee sent to jail for shouting Pakistan Zindabad

ಆತ ದೇಶವಿರೋಧಿ ಘೋಷಣೆಯಿಂದ ರೊಚ್ಚಿಗೆದ್ದ ಸ್ಥಳೀಯರು ಉಪೇಂದ್ರಕುಮಾರನನ್ನು ಹೊಡೆಯಲು ಮುಂದಾದರು. ಆದರೆ, ಅಲ್ಲಿ ಪೊಲೀಸರನ್ನು ಮೊದಲೇ ನಿಯೋಜಿಸಲಾಗಿದ್ದರಿಂದ ಮಧ್ಯ ಪ್ರವೇಶಿಸಿದ ಪೊಲೀಸರು ಉಪೇಂದ್ರನನ್ನು ಬಂಧಿಸಿ ಎಳೆದೊಯ್ದರು. ಅವನ ವಿರುದ್ಧ ಭಾರತೀಯ ದಂಡ ಸಂಹಿತೆ 153ಬಿ ಸೆಕ್ಷನ್ (ದೇಶದ ಐಕ್ಯತೆಗೆ ಧಕ್ಕೆ ತರುವಂಥ ಕೆಲಸ) ಅಡಿಯಲ್ಲಿ ಕೇಸನ್ನು ದಾಖಲಿಸಲಾಗಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ ನಂತರ, ಫೆಬ್ರವರಿ 18ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

English summary
Railway employee Upendrakumar Shrivir has been sent to police custody for shouting Pakistan Zindabad in Lonavala on Friday. When residents had gathered to mourn the death of 44 CRPF personnel, who died in a human bomb blast in Pulwama in Jammu and Kashmir, Upendra shouted anti-India slogan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X