ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಂದ್ರನ ಬಳಿ ರಾಕೆಟ್ ಹೋದರೆ ಯುವ ಜನರ ಹೊಟ್ಟೆ ತುಂಬಲ್ಲ'

|
Google Oneindia Kannada News

ಮುಂಬೈ, ಅಕ್ಟೋಬರ್ 13 : "ಚಂದ್ರನಲ್ಲಿಗೆ ರಾಕೆಟ್ ಕಳಿಸಿದರೆ ದೇಶದ ಯುವ ಜನರ ಹೊಟ್ಟೆ ತುಂಬುವುದಿಲ್ಲ. ಅವರ ಹೊಟ್ಟೆ ತುಂಬಲು ಉದ್ಯೋಗ ನೀಡಬೇಕು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.

ಮಹಾರಾಷ್ಟ್ರದ ಲಾಥೂರ್‌ನಲ್ಲಿ ಭಾನುವಾರ ರಾಹುಲ್ ಗಾಂಧಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು. "ಚಂದ್ರನಲ್ಲಿಗೆ ರಾಕೆಟ್ ಎರಡು ದಿನಕ್ಕೆ ಹೋಗಿಲ್ಲ. ಇಸ್ರೋ ಸಂಸ್ಥೆ ಸ್ಥಾಪನೆ ಮಾಡಿದ್ದು ಕಾಂಗ್ರೆಸ್" ಎಂದು ಹೇಳಿದರು.

ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆ ಮಹಾರಾಷ್ಟ್ರ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಸಿಹಿ ಸುದ್ದಿ ಕೊಟ್ಟ ಸಮೀಕ್ಷೆ

"ಚಂದ್ರನಲ್ಲಿಗೆ ರಾಕೆಟ್ ಕಳಿಸಿದ್ದೇವೆ ಎಂದು ಮಹಾರಾಷ್ಟ್ರದಲ್ಲಿ ಬಂದು ಹೇಳುತ್ತಾರೆ. ಯುವ ಜನರ ಹೊಟ್ಟೆ ತುಂಬ ಬೇಕಾದರೆ ಅವರಿಗೆ ಉದ್ಯೋಗ ನೀಡಬೇಕು" ಎಂದು ತಿಳಿಸಿದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣದಲ್ಲಿ 3239 ಅಭ್ಯರ್ಥಿಗಳುಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣದಲ್ಲಿ 3239 ಅಭ್ಯರ್ಥಿಗಳು

Rahul Gandhi Addresses Election Rally In Latur Maharashtra

"ಪೂನಾದ ಯಾವುದೇ ಫ್ಯಾಕ್ಟರಿಯಲ್ಲಿ ಹೋಗಿ ಮೇಕ್ ಇನ್ ಇಂಡಿಯಾ ಹೇಗೆ ನಡೆಯುತ್ತಿದೆ? ಎಂದು ಕೇಳಿ ನೋಡಿ. ಜನರು ನಿಜವಾದ ಉತ್ತರವನ್ನು ಹೇಳುತ್ತಾರೆ. ಮೇಕ್ ಇನ್ ಇಂಡಿಯಾದ ಉಪಯೋಗ ಚೀನಾದ ಯುವ ಜನರಿಗೆ ಆಗಿದೆ" ಎಂದು ಆರೋಪಿಸಿದರು.

ಮಹಾರಾಷ್ಟ್ರ ಚುನಾವಣೆ: ವೊರ್ಲಿಯಿಂದ ಆದಿತ್ಯ ಠಾಕ್ರೆ ಕಣಕ್ಕೆಮಹಾರಾಷ್ಟ್ರ ಚುನಾವಣೆ: ವೊರ್ಲಿಯಿಂದ ಆದಿತ್ಯ ಠಾಕ್ರೆ ಕಣಕ್ಕೆ

"ಯಾವುದೇ ವಸ್ತುವನ್ನು ಕೊಂಡುಕೊಳ್ಳಿ. ಮೇಡ್ ಇನ್ ಚೈನಾ, ಯಾವುದೇ ವಸ್ತು ನೋಡಿ ಮೇಡ್ ಇನ್ ಚೈನಾ ಎಂದು ಇರುತ್ತದೆ. ದೇಶದ ಒದೊಂದೇ ಫ್ಯಾಕ್ಟರಿ ಬಂದ್ ಆಗುತ್ತಿವೆ. ಚೈನಾದ ಯುವಕರಿಗೆ ಉದ್ಯೋಗ ಸಿಗುತ್ತಿದೆ" ಎಂದು ರಾಹುಲ್ ಗಾಂಧಿ ಹೇಳಿದರು.

"ಉದ್ಯಮಿಗಳ ಸಾಲ ಮನ್ನಾ ಮಾಡಿ ದೀಪಾವಳಿ ಉಡುಗೊರೆಯನ್ನು ನೀವು ಕೊಟ್ಟಿದ್ದೀರಿ. ನಮ್ಮ ರೈತರಿಗೆ ಯಾವ ಉಡುಗೊರೆ ನೀಡಿದ್ದೀರಿ. ಇದನ್ನು ಯಾವ ಮಾಧ್ಯಮಗಳು ಪ್ರಶ್ನೆ ಮಾಡುವುದಿಲ್ಲ. ಎಲ್ಲಾ ಮಾಧ್ಯಮಗಳು ಅವರದ್ದೇ ಆಗಿವೆ" ಎಂದು ರಾಹುಲ್ ಗಾಂಧಿ ದೂರಿದರು.

"ಒಂದೊಂದೇ ಕಂಪನಿಗಳು ಮುಚ್ಚುವ ಮೂಲಕ ಈಗ ಶುರುವಾಗಿದೆ. ಇನ್ನೂ 6 ತಿಂಗಳು ಕಾದು ನೋಡಿ ದೇಶದ ಸ್ಥಿತಿ ಏನಾಗಲಿದೆ ಎಂಬುದು ನಿಮಗೆ ತಿಳಿಯಲಿದೆ" ಎಂದು ರಾಹುಲ್ ಗಾಂಧಿ ಹೇಳಿದರು.

ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯಲಿದೆ. ಭಾನುವಾರ ರಾಹುಲ್ ಗಾಂಧಿ 3, ನರೇಂದ್ರ ಮೋದಿ 2 ಸಮಾವೇಶಗಳನ್ನು ಉದ್ದೇಶಿಸಿ ರಾಜ್ಯದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

English summary
Congress leader Rahul Gandhi addressed election campaign rally in Maharashtra. Maharashtra assembly election will be held on October 21, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X