ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಜೊತೆ ಜಗಳ; ಪತಿ ಹಚ್ಚಿದ ಬೆಂಕಿಗೆ 10 ಮನೆಗಳು ಭಸ್ಮ!

|
Google Oneindia Kannada News

ಮುಂಬೈ, ಅಕ್ಟೋಬರ್ 19: ತನ್ನ ಪತ್ನಿಯೊಂದಿಗೆ ಜಗಳವಾಡಿದ ಪತಿರಾನೊಬ್ಬ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಅಕ್ಕಪಕ್ಕದ 10 ಮನೆಗಳು ಸಹ ಸುಟ್ಟು ಕರಕಲಾಗಿವೆ. ಇದರಿಂದ ಕೋಪಗೊಂಡ ನೆರೆಹೊರೆಯವರು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು.. ಮಹಾರಾಷ್ಟ್ರದ ಸತಾರದಲ್ಲಿ ಈ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತ್ನಿ ಜೊತೆ ಜಗಳವಾಡಿದ ಪತಿ ಕೋಪಗೊಂಡು ಹಚ್ಚಿದ ಬೆಂಕಿ ಇಡೀ ಪ್ರದೇಶವೇ ಸುಟ್ಟು ಹೋಗುವಂತೆ ಮಾಡಿದೆ. ಘಟನೆಯ ಬಳಿಕ ಸ್ಥಳೀಯ ಜನರು ಆತನನ್ನು ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸತಾರಾದ ಪಟಾನ್‌ನಲ್ಲಿರುವ ಮಜಗಾಂವ್ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಪತಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯು ವೇಗವಾಗಿ ಬೇರೆ ಪ್ರದೇಶಕ್ಕೂ ಹರಡಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

Quarrel with wife Husband set fire to home: 10 houses burned down

ಸುಮಾರು 10 ಮನೆಗಳಿಗೆ ಬೆಂಕಿ ಆವರಿಸಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ತಕ್ಷಣ ಜನರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ಘಟನೆಯಿಂದ ಕೋಪಗೊಂಡ ನೆರೆಹೊರೆಯವರು ಆ ವ್ಯಕ್ತಿಯನ್ನು ಥಳಿಸಿದರು, ಪೊಲೀಸರನ್ನು ಕರೆಸಿದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಸಂಜಯ್ ಎಂದು ಗುರುತಿಸಲಾಗಿದೆ. ಆತ ತನ್ನ ಪತ್ನಿಯೊಂದಿಗೆ ಕೆಲವು ವಿಷಯಕ್ಕಾಗಿ ಜಗಳವಾಡಿದ್ದ. ಇಬ್ಬರ ನಡುವೆ ಜಟಾಪಟಿ ಹೆಚ್ಚಾದ ಕಾರಣ ವಿಷಯ ವಿಕೋಪಕ್ಕೆ ತಲುಪಿತು. ಈ ಸಮಯದಲ್ಲಿ ಸಂಜಯ್ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಈ ಕಾರಣದಿಂದಾಗಿ ಸಮೀಪದ 10 ಮನೆಗಳು ಸಹ ಸುಟ್ಟುಹೋಗಿವೆ. ಈ ಘಟನೆಯಲ್ಲಿ ಸಂಜಯ್ ಅವರ ಮನೆಯ ಸಮೀಪದ 4 ಮನೆಗಳು ಹೆಚ್ಚು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಅಪಾರ ಆಸ್ತಿ-ಪಾಸ್ತಿ ಸುಟ್ಟು ಇಡೀ ಪ್ರದೇಶದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ಪೊಲೀಸರು ಸಂಜಯ್‌ನನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಸಂಜಯ್ ಪತ್ನಿ ಕೌಟುಂಬಿಕ ದೌರ್ಜನ್ಯ ಮತ್ತು ಆತನ ವಿರುದ್ಧ ಹಲ್ಲೆ ಮಾಡಿರುವ ದೂರು ನೀಡಿದ್ದಾರೆ. ಪತ್ನಿ ಮತ್ತು ನೆರೆಹೊರೆಯವರ ದೂರಿನ ಆಧಾರದ ಮೇಲೆ ಪೊಲೀಸರು ಸಂಜಯ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ತೀವ್ರತೆಗೆ ಕಾರಣವೇನು?
ಮಜಗಾಂವದ ಸಂಜಯ್ ಪಾಟೀಲ್ ಮತ್ತು ಆತನ ಪತ್ನಿ ಪಲ್ಲವಿ ನಡುವನ ಜಗಳ ಹಲವಾರು ಮನಗಳ ನಾಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಸಂಜಯ್ ಹಚ್ಚಿದ ಬೆಂಕಿ ವೇಗವಾಗಿ ಹರಡಲು ಕಾರಣವಿದೆ. ಆರಂಭದಲ್ಲಿ ಪತಿ ಸಂಜಯ್ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ. ಪೆಟ್ರೋಲ್ ಹಾಕಿದ್ದರಿಂದ ಮನೆ ಇಡೀ ಬೆಂಕಿ ಆವರಿಸಿದೆ. ನಂತರ ಮನೆಯಲ್ಲಿದ್ದ ಸಿಲಿಂಡರ್ ಗೆ ಬೆಂಕಿ ಆವರಿಸಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆ ಹೆಚ್ಚಾಗಿದ್ದರಿಂದ ನೆರೆಹೊರೆಯ ಸುಮಾರು 10 ಮನೆಗಳು ಬೆಂಕಿಗಾಹುತಿಯಾಗಿವೆ. ಅಕ್ಕ ಪಕ್ಕದ ಮನೆಯವರು ಸ್ಪೋಟದ ಶಬ್ದಕ್ಕೆ ಗಾಬರಿಗೊಂಡು ಮನೆಯಿಂದ ಹೊರೋಡಿ ಬಂದಿದ್ದಾರೆ. ನಂತರ ಬೆಂಕಿ ಪ್ರದೇಶವೆಲ್ಲವನ್ನೂ ಆವರಿಸುತ್ತಿದ್ದಂತೆ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿ ವೇಗವಾಗಿ ಪಸರಿಸಿ ಎಲ್ಲವೂ ಸುಟ್ಟು ಭಸ್ಮವಾಗಿದೆ.

ನಷ್ಟ ಭರಿಸುವಂತೆ ಸ್ಥಳೀಯರ ಪಟ್ಟು
ಘಟನೆಗೆ ಕಾರಣರಾದ ಸಂಜಯ್ ಅವರನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ. ಆತನ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ಆದರೆ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸಂಜಯ್ ಮನೆಯ ಹತ್ತಿರವಿದ್ದ ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸಮಯ ಪ್ರಜ್ಞೆಯಿಂದ ಕೆಲವರು ಮನೆಯಲ್ಲಿದ್ದ ಕೆಲ ವಸ್ತುಗಳನ್ನು ಹೊರತೆಗೆದುಕೊಂಡು ಬಂದರೂ ಕೆಲವರಿಗೆ ಪ್ರಾಣ ಉಳಿಸಿಸಕೊಂಡರೆ ಸಾಕು ಅನ್ನುವಷ್ಟು ವೇಗದಲ್ಲಿ ಬೆಂಕಿ ಆವರಿಸಿದೆ. ಹೀಗಾಗಿ ಬೆಂಕಿಗೆ ಆಹುತಿಯಾದ ಮನೆ ಮಾಲೀಕರು ತಮಗೆ ನಷ್ಟ ಭರಿಸಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆರೋಪಿಯಿಂದ ತಮಗೆ ನ್ಯಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪತ್ನಿಯಿಂದಲೂ ದೂರು
ಇನ್ನೂ ಪ್ರಕರಣದಲ್ಲಿ ಪತ್ನಿ ಪಲ್ಲವಿ ಕೂಡ ಪತಿ ಸಂಜಯ್ ವಿರುದ್ಧ ದೂರು ನೀಡಿದ್ದಾಳೆ. ಆಕೆ ಮಾನಸಿಕ ಕಿರುಕುಳ, ದೈಹಿಕ ಹಲ್ಲೆ, ನಿಂದನೆ ಆರೋಪ ಮಾಡಿದ್ದಾಳೆ. ತಮ್ಮಿಬ್ಬರ ಮಧ್ಯೆ ಮನಸ್ತಾಪಗಳಿದ್ದು ಆಗಾಗ ಜಗಳವಾಗುತ್ತಿರುತ್ತವೆ. ಇದರಿಂದ ತನ್ನ ಪತಿಯೊಂದಿಗೆ ತನಗೆ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

ಸಂಜಯ್ ಗೆ ಚಿಕಿತ್ಸೆ
ಘಟನೆಯ ಬಳಿಕ ಸ್ಥಳೀಯರು ಕೋಪಗೊಂಡು ಸಂಜಯ್ ಗೆ ಹುಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸುವ ಕಾರ್ಯ ಮಾಡಿ ನಂತರ ಸಂಜಯ್ ನನ್ನು ವಶಕ್ಕೆ ಪಡೆದರು. ಈ ವಳೆ ಗಾಯಗೊಂಡಿದ್ದ ಸಂಜಯ್ ಗೆ ಠಾಣೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

English summary
A husband has quarreled with his wife in a village in Maharashtra. This has also resulted in 10 nearby houses. Neighbors then severely beat the man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X