ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ವರ್ಷದಿಂದ ಕಿಂಗ್ ಫಿಷರ್ ಲಾಭವನ್ನೇ ಮಾಡಿಲ್ಲ!

By Srinath
|
Google Oneindia Kannada News

ಮುಂಬೈ, ಫೆ.12: ಒಟ್ಟು 17 ಸಾರ್ವಜನಿಕ ಬ್ಯಾಂಕುಗಳಿಗೆ 12,000 ಕೋಟಿ ರೂ ಸಾಲ ಉಳಿಸಿಕೊಂಡಿರುವ ಕನ್ನಡಿಗ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯು ಮೂರನೆಯ ತ್ರೈಮಾಸಿಕ ಫಲಿತಾಂಶದಲ್ಲಿಯೂ ಶೂನ್ಯ ಗಳಿಸಿದೆ. ಲಾಭ ಗಳಿಸುವುದು ಹಾಗಿರಲಿ 822 ಕೋಟಿ ರೂಪಾಯಿ ನಿವ್ವಳ ನಷ್ಟ ಅನುಭವಿಸಿದೆ.

ದುರಂತವೆಂದರೆ ಕಳೆದ 8 ವರ್ಷಗಳಿಂದ ಚಾಲ್ತಿಯಲ್ಲಿರುವ Kingfisher Airlines (KFA) ಸಂಸ್ಥೆಯು ಯಾವುದೇ ತ್ರೈಮಾಸಿಕದಲ್ಲೂ ಲಾಭ ದಾಖಲಿಸಿಲ್ಲ. ಬಹುಶಃ ಇದೇ KFAಯ ಇಡೀ ಕರ್ಮಕಾಂಡವನ್ನು ಬಿಡಿಸಿ ಹೇಳುತ್ತದೆ.

Q3 Loss kingfisher never profited during eight years of operations

ಅಂದಹಾಗೆ 12,000 ಕೋಟಿ ರೂ ಸಾಲದ ಹೊರೆ ಹೊತ್ತಿರುವ ವಿಜಯ್ ಮಲ್ಯ ಅವರು ಇಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಐಪಿಎಲ್ ಕ್ರಿಕೆಟ್ಟನಿಂದ ಹಣ ಗಳಿಸಿ, KFA ಸಾಲವನ್ನು ಕಟ್ಟುವ ಮಲ್ಯರ ಪ್ರಯತ್ನವಾ ಇದು? ಗೊತ್ತಿಲ್ಲ. [ಕಿಂಗ್ ಫಿಷರ್ 12000 ಕೋಟಿ ಸಾಲ ನೀರಿನಲ್ಲಿ ಹೋಮ]

2012ರ ಅಕ್ಟೋಬರ್ ತಿಂಗಳಿಂದ KFA ವಿಮಾನಗಳು ಒಂದೂ ಮೇಲಕ್ಕೆ ಹಾರಿಲ್ಲ. ಹಾಗಾಗಿ, ಮತ್ತೊಂದು ತ್ರೈಮಾಸಿಕ ಫಲಿತಾಂಶದಲ್ಲಿ ಲಾಭ ಗಳಿಸಲು ಸಾಧ್ಯವಾಗದೆ ನಷ್ಟವನ್ನು ಕಂಡಿದೆ.

ಹಿಂದೊಮ್ಮೆ ಭಾರತದ ನಂಬರ್ 2ನೆಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆ ಸಂಪಾದಿಸಿದ್ದ KFA, ಡಿಸೆಂಬರ್ ಅಂತ್ಯಕ್ಕೆ 8.22 billion rupees ($132 million) ನಷ್ಟ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7.55 billion rupees ನಷ್ಟ ಅನುಭವಿಸಿತ್ತು.

ವಿಜಯ್ ಮಲ್ಯ ಅವರ KFA ಸಂಸ್ಥೆಯು ಬ್ಯಾಂಕುಗಳಿಗೇ 12,000 ಕೋಟಿ ರೂ ಸಾಲ ಉಳಿಸಿಕೊಂಡಿಲ್ಲ. ಜತೆಗೆ ವಿಮಾನ ನಿಲ್ದಾಣಗಳಿಗೆ ಬಾಡಿಗೆ ಕಟ್ಟಬೇಕಿದೆ ಮತ್ತು ಭಾರಿ ಮೊತ್ತದ ತೆರಿಗೆಗಳನ್ನೂ ಉಳಿಸಿಕೊಂಡಿದೆ ಎಂಬುದು ಗಮನಾರ್ಹ.

English summary
Q3 Loss kingfisher never profited during eight years of operations. India's grounded Kingfisher Airlines, which has not flown in more than a year, reported yet another quarterly loss as it had no income from operations. Kingfisher, once India's no. 2 carrier and headed by flamboyant liquor baron Vijay Mallya, said net loss was 8.22 billion rupees ($132 million) for its fiscal third quarter to end-December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X