ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಬಂದ್‌: ಉದ್ಯೋಗ, ಶಿಕ್ಷಣ ಮೀಸಲಿಗೆ ಮರಾಠಿಗರ ಪಟ್ಟು

By Nayana
|
Google Oneindia Kannada News

Recommended Video

Maharashtra Bandh : ಇಂದೂ ಕೂಡ ಮಹಾರಾಷ್ಟ್ರದಲ್ಲಿ ಮುಂದುವರೆದಿದೆ ಬಂದ್ | Oneindia Kannada

ಮುಂಬೈ, ಜು.25: ಸರ್ಕಾರಿ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲು ಆಗ್ರಹಿಸಿ ಅನೇಕ ಮರಾಠ ಸಂಘಟನೆಗಳು ಮಹಾರಾಷ್ಟ್ರದಲ್ಲಿ ಕರೆ ನೀಡಿರುವ ಬಂದ್‌ ಬುಧವಾರವೂ ಮುಂದುವರೆಯಲಿದ್ದು, ಮುಂಬೈನಲ್ಲಿ ಪ್ರತಿಭಟನೆ ತೀವ್ರವಾಗಿದೆ.

ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು ತಮ್ಮ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಪರಿಗಣಿಸುವುದಾಗಿ ಹಲವು ಬಾರಿ ಭರವಸೆ ನೀಡಿರುವ ಹೊರತಾಗಿಯೂ ಅವರು ಈವರೆಗೆ ಏನನ್ನೂ ಮಾಡಿಲ್ಲ ಎಂದು ಮರಾಠಾ ಸಂಘಟನೆಗಳು ಆಕ್ಷೇಪಿಸಿವೆ

ಮರಾಠಾ ಸಮುದಾಯದ 27 ವರ್ಷದ ಯುವಕ ಕಾಕಾಸಾಹೇಬ್‌ ಶಿಂಧೆ ಎಂಬ ಯುವಕ ಔರಂಗಾಬಾದ್‌ ಸಮೀಪ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಮರಾಠಾ ಮೀಸಲಾತಿ ಚಳವಳಿಗೆ ಹೊಸ ತಿರುವು ನೀಡಿದೆ. ಜತೆಗೆ ಮಂಗಳವಾರ ಕೂಡ ಪ್ರತಿಭಟನಾಕಾರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಮಹಾರಾಷ್ಟ್ರ ಬಂದ್‌: ಮತ್ತೋರ್ವನಿಂದ ಆತ್ಮಹತ್ಯೆಗೆ ಯತ್ನಮಹಾರಾಷ್ಟ್ರ ಬಂದ್‌: ಮತ್ತೋರ್ವನಿಂದ ಆತ್ಮಹತ್ಯೆಗೆ ಯತ್ನ

ಶಿಂಧೆ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ರು.ಗಳ ಪರಿಹಾರವ ಘೋಷಿಸಿದೆ. ಇಂದು ಪ್ರತಿಭಟನಕಾರರು ಪರ್ಭಾನಿ ಜಿಲ್ಲೆಯ ಗಂಗಾಖೇಡ್‌ ತೆಹಶೀಲ್‌ನಲ್ಲಿನ ಅಹಮದಾಬಾದ್‌ -ಔರಂಗಾಬಾದ್‌ ಹೆದ್ದಾರಿ ತಡೆದು ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ ಪೊಲೀಸ್‌ ವ್ಯಾನ್‌ ಮತ್ತು ಬಸ್‌ ಸಹಿತ ಹಲವು ವಾಹನಗಳಿಗೆ ಹಾನಿಯಾಗಿವೆ.

ಬಸ್ ಸಂಚಾರ ಸ್ಥಗಿತಗೊಂಡಿರೋ ಹಿನ್ನೆಲೆಯಲ್ಲಿ ಚಿಕ್ಕೋಡಿ, ನಿಪ್ಪಾಣಿ ಮಾರ್ಗವಾಗಿ ಮಹಾರಾಷ್ಟ್ರದ ಪುಣೆ, ಬಾಂಬೆ, ಕೊಲ್ಹಾಪುರ, ಸಾಂಗ್ಲಿ, ಮೀರಜ್‍ಗೆ ಹೋಗುವ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಮಂಗಳವಾರದಂದು ಹೊತ್ತಿ ಉರಿದಿದ್ದ ಥಾಣೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇಂದು ಕೂಡ ಪ್ರತಿಭಟನೆಗಳು ನಡೆಯುತ್ತಿದ್ದು, ಥಾಣೆಯಲ್ಲಿ ಪ್ರತಿಭಟನಾಕಾರರು ರೈಲು, ಬಸ್‌ಗಳ ನ್ನು ತಡೆಯಲು ಯತ್ನಿಸಿದ್ರು. ಔರಂಗಾಬಾದ್‍ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಬಸ್ ಸಂಚಾರದಲ್ಲೂ ವ್ಯತ್ಯಯವಾಗಿದೆ.

ಮಹಾರಾಷ್ಟ್ರ ಬಂದ್‌: ಪಂಢರಪುರಕ್ಕೆ ಹೋಗಲು ಕನ್ನಡಿಗರ ಪರದಾಟಮಹಾರಾಷ್ಟ್ರ ಬಂದ್‌: ಪಂಢರಪುರಕ್ಕೆ ಹೋಗಲು ಕನ್ನಡಿಗರ ಪರದಾಟ

ಮಂಗಳವಾರ ಬೆಂಕಿ ಹಚ್ಚಿದ್ದ ಚೆಂಬೂರ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಪರಿಸ್ಥಿತಿ ತಹಬದಿಗೆ ಬಂದಿದ್ದರೂ ಬೂದಿ ಮುಚ್ಚಿದ ವಾತಾವರಣವಿದೆ. ಕೆಲವು ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಕೆಲವು ಮಕ್ಕಳು ಹಾಜರಾಗಿದ್ದು, ಅವರನ್ನು ಮನೆಗೆ ವಾಪಸ್ ಕಳಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.

 ಮಹಾರಾಷ್ಟ್ರ ಬಂದ್‌: ತೀವ್ರತೆಯ ಒಂದು ನೋಟ

ಮಹಾರಾಷ್ಟ್ರ ಬಂದ್‌: ತೀವ್ರತೆಯ ಒಂದು ನೋಟ

ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರ ಓರ್ವನ ಆತ್ಮಹತ್ಯೆ ನಂತರ ಮತ್ತಷ್ಟು ಕಾವು ಹೆಚ್ಚಾಗಿದೆ. ಪ್ರತಿಭಟನಾಕಾರರು ಟ್ರಕ್‌ಗಳು, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

 ಮಹಾರಾಷ್ಟ್ರ, ಔರಂಗಾಬಾದ್‌ ರಸ್ತೆಗಳೆಲ್ಲ ಖಾಲಿಖಾಲಿ

ಮಹಾರಾಷ್ಟ್ರ, ಔರಂಗಾಬಾದ್‌ ರಸ್ತೆಗಳೆಲ್ಲ ಖಾಲಿಖಾಲಿ

ಮರಾಠ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಔರಂಗಾಬಾದ್‌ ರಸ್ತೆಗಳೆಲ್ಲವೂ ಖಾಲಿ ಹೊಡೆಯುತ್ತಿದೆ. ಪ್ರತಿಭಟನಾಕಾರರು ಮಳಿಗೆ, ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ.

 ಮಹಾರಾಷ್ಟ್ರದಲ್ಲಿ ಮುಂದುವರೆದ ಪ್ರತಿಭಟನಾಕಾರರ ಧರಣಿ

ಮಹಾರಾಷ್ಟ್ರದಲ್ಲಿ ಮುಂದುವರೆದ ಪ್ರತಿಭಟನಾಕಾರರ ಧರಣಿ

ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೋದಾವರಿ ನದಿಗೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ, ಮೀಸಲಾತಿಗೆ ಆಗ್ರಹಿಸಿ ಬುಧವಾರದಿಂದ ಧರಣಿ ಆರಂಭಿಸಿದ್ದಾರೆ.

 ಮರಾಠ ಸಂಘಟನೆಗಳಿಂದ ಬೈಕ್‌ ಜಾಥಾ

ಮರಾಠ ಸಂಘಟನೆಗಳಿಂದ ಬೈಕ್‌ ಜಾಥಾ

ಮರಾಠಿಗರಿಗೆ ಸರ್ಕಾರಿ ಉದ್ಯೋದಲ್ಲಿ ಮೀಸಲಾತಿ ನ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಬಸ್ ಸಂಚಾರ ಸ್ಥಗಿತಗೊಂಡಿರೋ ಹಿನ್ನೆಲೆಯಲ್ಲಿ ಚಿಕ್ಕೋಡಿ, ನಿಪ್ಪಾಣಿ ಮಾರ್ಗವಾಗಿ ಮಹಾರಾಷ್ಟ್ರದ ಪುಣೆ, ಬಾಂಬೆ, ಕೊಲ್ಹಾಪುರ, ಸಾಂಗ್ಲಿ, ಮೀರಜ್‌ಗೆ ಹೋಗುವ ಪ್ರಯಾಣಿಕರು ಪರದಾಡುತ್ತಿದ್ದಾರೆ.

English summary
A protest has been called in Mumbai today by Maratha groups seeking reservation for the community. The Maratha Kranti Morcha, which is spearheading the agitation, announced bandh in Mumbai to press their demand of 16% reservation and to protest against the death of a Maratha youth in Aurangabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X