• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋರೆಗಾಂವ್ ವಿಜಯೋತ್ಸವಕ್ಕೆ ಕಲ್ಲು, ಬೀದಿಗಿಳಿದ ದಲಿತ ಸಂಘಟನೆಗಳು

By Manjunatha
|

ಮುಂಬೈ, ಜನವರಿ 02: ಪುಣೆಯ ಭೀಮಾ ಕೊರೆಗಾಂವ್ ನಲ್ಲಿ ದಲಿತರ ವಿಜಯಯಾತ್ರೆ ಮೇಲೆ ಕಲ್ಲೆಸೆತ ಹಾಗೂ ಹಿಂಸೆ ನಡೆದ ಬೆನ್ನಲ್ಲಿ ಇಂದು ಮುಂಬೈ ಹಾಗೂ ಮಹಾರಾಷ್ಟ್ರದ ಹಲವೆಡೆ ದಲಿತರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಭೀಮಾ ಕೋರೆಗಾಂವ್ ಯುದ್ಧ ವಿಜಯೋತ್ಸವದ ಸಂಘರ್ಷಣೆಯಲ್ಲಿ ಯುವಕ ಬಲಿ

ಪೂರ್ವ ಮುಂಬೈನ ಚೆಂಬೂರ್‌ ಮತ್ತಿತರೆ ಪ್ರದೇಶಗಳಲ್ಲಿ ದಲಿತರು ರಸ್ತೆ ರೋಕೊ ನಡೆಸುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ಥವ್ಯಸ್ಥವಾಗಿದೆ. ರೈಲುಗಳನ್ನು ತಡೆಲಯಾಗಿದ್ದು, ಅಂಗಡಿಗಳನ್ನು ಮುಚ್ಚಿಸಿಲಾಗಿದೆ, ಬಸ್ಸುಗಳ ಮೇಲೆ ಕಲ್ಲುತೂರಾಟ ನಡೆದಿದ್ದು ಮುಂಬೈನ ಶಿವಸೇನಾ ಕಚೇರಿಯನ್ನು ಧ್ವಂಸ ಮಾಡಲಾಗಿದೆ.

ಕೆಲವು ಕಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗುತ್ತಿದೆಯಾದರೂ ಮುಂಬೈ ಪೊಲೀಸರು ಇದನ್ನು ಅಲ್ಲಗಳೆದಿದ್ದು ಗಾಳಿ ಸುದ್ದಿ ಎಂದಿದ್ದಾರೆ.

ಜನವರಿ 01ರಂದು ಭೀಮಾ ಕೊರೆಗಾಂವ್ ಯುದ್ಧದ ವಿಜಯದ 200ನೇ ವರ್ಷಾಚರಣೆ ವೇಳೆ ಕೆಲವರು ಕಲ್ಲುತೂರಾಟ ನಡೆಸಿದ ಕಾರಣ ಹಿಮಸಾಚಾರ ಪ್ರಾರಂಭವಾಗಿ ಒಬ್ಬ ವ್ಯಕ್ತಿ ನಿಧನಹೊಂದಿದ್ದರು. ಇದಕ್ಕೆ ಪ್ರತಿಭಟನಾರ್ಥವಾಗಿ ಇಮದು ಮಹಾರಾಷ್ಟ್ರದ ಹಲವು ಕಡೆ ದಲಿತರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ದಲಿತ ಸಂಘಟನೆಗಳು ನಾಳೆ ಮುಂಬೈ ಬಂದ್ ಗೆ ಕರೆ ನೀಡಿವೆ.

1818 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಹಾಗೂ ಪೇಶ್ವೆ ಬಾಜಿರಾವ್ ಅವರ ಸೈನಿಕರ ನಡುವೆ ಭಿಕರ ಯುದ್ಧ ನಡೆದಿತ್ತು, ದಲಿತ ಸೈನಿಕರೇ ತುಂಬಿದ್ದ ಈಸ್ಟ್ ಇಂಡಿಯಾ ಕಂಪೆನಿ ಈ ಯುದ್ಧದಲ್ಲಿ ವಿಜಯ ಸಾಧಿಸಿತ್ತು, ಈ ವಿಜಯವನ್ನು ಮೇಲ್ಜಾತಿಯವರ ಮೇಲೆ ದಲಿತರ ವಿಜಯವೆಂದೇ ಬಿಂಬಿಸಲಾಗಿತ್ತು, 1818ರಿಂದಲೂ ಪುಣೆ ಸಮೀಪದ ಭೀಮಾ ಕೊರೆಗಾಂವ್ನಲ್ಲಿ ಜನವರಿ 1ರಂದು ವಿಜಯೋತ್ಸವ ಆಚರಿಸಲಾಗುತ್ತದೆ, ಸಾವಿರಾರು ಸಂಖ್ಯೆಯಲ್ಲಿ ದಲಿತರು ಈ ವಿಜಯೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.

English summary
A day after violence broke out near Pune on the 200th anniversary of the Bhima Koregaon battle, there was trouble in the Eastern suburbs of Mumbai as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X