ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಶ್ಯಾವಾಟಿಕೆ: ಐತಿಹಾಸಿಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್

|
Google Oneindia Kannada News

ಮುಂಬೈ, ಸೆ 27 (ಪಿಟಿಐ) : ವೇಶ್ಯಾವಾಟಿಕೆ ಕಾನೂನು ಬದ್ದವೋ, ಕಾನೂನು ಬಾಹಿರವೋ, ಈ ವಿಚಾರದಲ್ಲಿ ಬಾಂಬೆ ಹೈಕೋರ್ಟ್ ತನ್ನ ತೀರ್ಪನ್ನು ನೀಡಿದೆ. ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಮೂವರು ಮಹಿಳೆಯರ ಅರ್ಜಿ ವಿಚಾರಣೆಯ ವೇಳೆ, ಕೋರ್ಟ್ ಈ ತೀರ್ಪನ್ನು ನೀಡಿದೆ.

"ವಯಸ್ಸಿನ ಮಹಿಳೆಗೆ ಯಾವ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ. ಕಾನೂನು ಚೌಕಟ್ಟಿನಲ್ಲಿ ವೇಶ್ಯಾವಾಟಿಕೆ ಅಪರಾಧವಲ್ಲ ಮತ್ತು ಕಾನೂನಿಗೆ ವಿರುದ್ದವಲ್ಲ"ಎನ್ನುವ ತೀರ್ಪನ್ನು ಹೈಕೋರ್ಟ್ ನೀಡಿದೆ.

ಉತ್ತರ ಕನ್ನಡದಲ್ಲಿ ಸದ್ದಿಲ್ಲದೇ ವೇಶ್ಯಾವಾಟಿಕೆ ಜೋರುಉತ್ತರ ಕನ್ನಡದಲ್ಲಿ ಸದ್ದಿಲ್ಲದೇ ವೇಶ್ಯಾವಾಟಿಕೆ ಜೋರು

ಏನಿದು ಪ್ರಕರಣ: ಮುಂಬೈ ಮಹಾನಗರಿಯ ಮಲಾಡ್ ಅತಿಥಿಗೃಹದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಮೂವರು ಮಹಿಳೆಯರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಂಧಿತ ಮಹಿಳೆಯರು ಸುಮಾರು ಇಪ್ಪತ್ತು ವಯಸ್ಸಿನವರಾಗಿದ್ದರು ಮತ್ತು ಕಳೆದ ವರ್ಷ ಈ ಘಟನೆ ನಡೆದಿತ್ತು.

Prostitution Not An Offence, Its Public Solicitation Is: Bombay High Court Verdict

ಮೂವರು ಮಹಿಳೆಯರ ಜೊತೆಗೆ, ಬ್ರೋಕರ್ ಅನ್ನು ಕೂಡಾ ಪೊಲೀಸರು ಬಂಧಿಸಿದ್ದರು. ಬಂಧನದ ವಿರುದ್ದ ಮಹಿಳೆಯರು ಮೆಟ್ರೋಪಾಲಿಟನ್ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ, ಈ ಮಹಿಳೆಯರ ಅರ್ಜಿ ವಜಾಗೊಂಡಿತ್ತು.

ಇದನ್ನು ಪ್ರಶ್ನಿಸಿ ಮೂವರು ಮಹಿಳೆಯರು ಬಾಂಬೆ ಹೈಕೋರ್ಟಿನ ಮೊರೆ ಹೋಗಿದ್ದರು. ಈಗ, ಮೆಟ್ರೋಪಾಲಿಟನ್ ಆದೇಶವನ್ನು ಬಾಂಬೆ ಹೈಕೋರ್ಟ್ ಅನೂರ್ಜಿತಗೊಳಿಸಿ, ವೇಶ್ಯಾವಾಟಿಕೆ ಕಾನೂನಿಗೆ ವಿರುದ್ದವಲ್ಲ ಎಂದಿದೆ. ಆದರೆ..

ಹುಬ್ಬಳ್ಳಿಯಲ್ಲಿ ಸದ್ದಿಲ್ಲದೇ ವೇಶ್ಯಾವಾಟಿಕೆ ಜೋರುಹುಬ್ಬಳ್ಳಿಯಲ್ಲಿ ಸದ್ದಿಲ್ಲದೇ ವೇಶ್ಯಾವಾಟಿಕೆ ಜೋರು

"ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ಶೋಷಣೆಗೆ ಒಳಪಡಿಸುವುದು, ನಿಂದಿಸುವುದು, ಬ್ಲ್ಯಾಕ್ ಮೇಲ್ ಮಾಡುವುದು ತಪ್ಪು. ಸಾರ್ವಜನಿಕ ಸ್ಥಳದಲ್ಲಿ ಈ ಚಟುವಟಿಕೆ ನಡೆಸುತ್ತಿದ್ದರೆ ಅದು ಕಾನೂನಿಗೆ ವಿರುದ್ದವಾದದ್ದು"ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

English summary
Prostitution Not An Offence, Its Public Solicitation Is: Bombay High Court Verdict
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X