ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲಿಕಾಪ್ಟರ್ ಉರುಳಿ ಬಿದ್ದು, ಐವರು ದುರ್ಮರಣ

By Mahesh
|
Google Oneindia Kannada News

ಮುಂಬೈ, ಸೆ.29:ಇಲ್ಲಿನ ಜುಹು ವಿಮಾನ ನಿಲ್ದಾಣದಿಂದ ಔರಂಗಬಾದಿಗೆ ಹೊರಟಿದ್ದ ಖಾಸಗಿ ಕಂಪೆನಿಗೆ ಸೇರಿದ ಹೆಲಿಕಾಪ್ಟರ್ ಉರುಳಿಬಿದ್ದಿದೆ. ಹೆಲಿಕಾಪ್ಟರ್ ನಲ್ಲಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರೆಲ್ಲರೂ ದುರಂತ ಸಾವನ್ನಪ್ಪಿದ್ದಾರೆ.

ತಾಂತ್ರಿಕ ದೋಷ ಉಂಟಾಗಿ ಹೆಲಿಕಾಪ್ಟರ್ ಸ್ಫೋಟಗೊಂಡ ಪರಿಣಾಮ ಐದು ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆಯ ಮುರ್ಬಾದ್ ತಾಲೂಕಿನ ಟೊಕ್ವಾನೆ ಎಂಬಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಪ್ರಾಥಮಿಕ ವರದಿ ಪ್ರಕಾರ ಹೆಲಿ ಕಾಪ್ಟರ್ ನಲ್ಲಿ ಸಿಬ್ಬಂದಿ ಸೇರಿದಂತೆ ಐವರು ಇದ್ದರು ಎಂದು ತಿಳಿದು ಬಂದಿದೆ ಐವರು ಕೂಡಾ ಸಾವನ್ನಪ್ಪಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಹೆಲಿ ಕಾಪ್ಟರ್ ನ ಬ್ಲ್ಯಾಕ್ ಬಾಕ್ಸ್ ಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಥಾಣೆ ಗ್ರಾಮೀಣ ಠಾಣೆ ಸೂಪರ್ ರಿಂಟೆಂಡೆಂಟ್ ಆಫ್ ಪೊಲೀಸ್ ಅನಿಲ್ ಕುಂಭಾರೆ ಅವರು ಪಿಟಿಐಗೆ ತಿಳಿಸಿದ್ದಾರೆ.

Private chopper crashes near Tokwane, Thane, Mumbai

ಯುನೈಟೆಡ್ ಹೆಲಿ ಕಂಪೆನಿಗೆ ಸೇರಿದ Bell 212 ಹೆಲಿಕಾಪ್ಟರ್ ಬೆಳಿಗ್ಗೆ ಮುಂಬೈನ ಜುಹು ನಿಲ್ದಾಣದಿಂದ ಔರಂಗಬಾದಿಗೆ ತೆರಳಲು ನಿಗದಿಯಾಗಿತ್ತು. ಹೆಲಿಕಾಪ್ಟರ್ ಹೊರಟ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕೊಠಡಿ (ಎಟಿಸಿ)ಯ ಸಂಪರ್ಕ ಕಳೆದುಕೊಂಡಿತು. ಬಳಿಕ 15 ನಿಮಿಷಗಳ ನಂತರ ಗ್ರಾಮೀಣ ಭಾಗದ ಹೈಟೆನ್ಷನ್ ತಂತಿಗೆ ಹೆಲಿ ಕಾಪ್ಟರ್ ಬಡಿದು ಬೆಂಕಿ ಹತ್ತಿಕೊಂಡಿತು ಎನ್ನಲಾಗಿದೆ.

ಹೆಲಿಕಾಪ್ಟರ್ ನಲ್ಲಿದ್ದ ಪೈಲೆಟ್ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆಂದು ನಾಗರಿಕ ವಿಮಾನ ಇಲಾಖೆ(DGCA) ಮೂಲಗಳು ತಿಳಿಸಿವೆ. ಔರಂಗಬಾದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಇದನ್ನು ಖಚಿತಪಡಿಸಿದ್ದಾರೆ. ಹೆಲಿಕಾಪ್ಟರ್ ನಲ್ಲಿದ್ದ ಐದು ಮಂದಿ ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದಾರೆ.
ಘಟನಾ ಸ್ಥಳಕ್ಕೆ ಮುಂಬೈನಿಂದ ನಾಗರಿಕ ರಕ್ಷಣಾ ಇಲಾಖೆ ತಂಡ ಆಗಮಿಸಿದೆ.

ಈ ಸುದ್ದಿ ಹಬ್ಬುತ್ತಿದ್ದಂತೆ ರಕ್ಷಣಾ ತಂಡ ಮತ್ತು ನಾಗರಿಕರು ಆಗಮಿಸಿದರು. ಹೆಲಿಕಾಪ್ಟರ್ ಗ್ರಾಮದ ಹೊರಭಾಗದಲ್ಲಿ ಸ್ಫೋಟಗೊಂಡಿದ್ದರಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ.

ಓರ್ವ ಪೈಲೆಟ್ ತೀವ್ರವಾಗಿ ಗಾಯಗೊಂಡಿದ್ದ. ಆದರೆ, ಆಸ್ಪತ್ರೆಗೆ ಕರೆದೊಯ್ಯಲು ಸೌಲಭ್ಯಗಳಿಲ್ಲದೆ ಕೊನೆಯುಸಿರೆಳೆದಿದ್ದಾನೆ. ಘಟನೆ ಬಗ್ಗೆ ನಾಗರಿಕ ವಿಮಾನ ಇಲಾಖೆ ತನಿಖೆಗೆ ಆದೇಶಿಸಿದೆ. (ಪಿಟಿಐ)

English summary
Five people were killed when a private chopper crashed in Thane rural area near Mumbai on Sunday after it came in contact with high tension wires.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X