ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ ಕೇಸ್ : ನಟಿ ಪ್ರೀತಿ ಜಿಂಟಾ ಸಲ್ಲಿಸಿದ್ದ ಅರ್ಜಿ ವಜಾ

|
Google Oneindia Kannada News

ಉದ್ಯಮಿ ನೆಸ್ ವಾಡಿಯಾ ಹಾಗೂ ಡಿಂಪಲ್ ಕೆನ್ನೆಯ ನಟಿ ಪ್ರೀತಿ ಜಿಂಟಾ ನಡುವಿನ ಮುನಿಸು, ಕಿತ್ತಾಟ ಐಪಿಎಲ್ ಅಂಗಳದಿಂದ ಕೋರ್ಟ್ ಮೆಟ್ಟಿಲೇರಿ ನಾಲ್ಕು ವರ್ಷಗಳ ಬಳಿಕ ಇಂದು ತೀರ್ಪು ಬಂದಿದೆ. ಇಂಥ ಅರ್ಜಿಯನ್ನು ಪರಸ್ಪರ ಮಾತುಕತೆ ಮೂಲಕವೇ ಮುಗಿಸಿಕೊಳ್ಳಿ ಎಂದು ಬಾಂಬೆ ಹೈಕೋರ್ಟ್ ಹೇಳುವ ಮೂಲಕ ಪ್ರೀತಿ ಜಿಂಟಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು(ಅಕ್ಟೋಬರ್ 10) ತಿರಸ್ಕರಿಸಿದೆ.

ಎರಡು ದಿನಗಳ ಹಿಂದೆ ಈ ಪ್ರಕರಣವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಕೋರ್ಟ್ ಸೂಚಿಸಿತ್ತು. ಉದ್ಯಮಿ ನೆಸ್ ವಾಡಿಯಾ ಅವರು ಕ್ಷಮೆಯಾಚಿಸಿದರೆ ಮಾತ್ರ ಅರ್ಜಿ ಹಿಂಪಡೆಯಲು ನನ್ನ ಕಕ್ಷಿದಾರರು ಸಿದ್ಧರಾಗಿದ್ದಾರೆ ಎಂದು ಪ್ರೀತಿ ಅವರ ವಕೀಲರು ಕೋರ್ಟಿಗೆ ತಿಳಿಸಿದ್ದರು. ಆದರೆ, ನೆಸ್ ವಾಡಿಯಾ ಕ್ಷಮೆಯಾಚಿಸಲು ನಿರಾಕರಿಸಿದ್ದರು. ಪ್ರೀತಿ ಪರ ಸಾಕ್ಷಿಗಳು ಬಲವಾಗಿ ಇರಲಿಲ್ಲ.

2014ರ ಮೇ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆಯಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಇವರಿಬ್ಬರು ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರಾಗಿದ್ದರು. ಅಂದು ವಾಂಖೆಡೆ ಮೈದಾನದಲ್ಲಿ ವಾಡಿಯಾ ಅವರು ತಮಗೆ ಲೈಂಗಿಕ ಕಿರುಕುಳ, ನಿಂದನೆ ಹಾಗೂ ಬೆದರಿಕೆ ಅನುಭವಿಸಿದೆ ಎಂದು ಪ್ರೀತಿ ಕಣ್ಣೀರಿಟ್ಟಿದ್ದರು. ಈ ಬಗ್ಗೆ ಇನ್ನಷ್ಟು ವಿವರ ಮುಂದೆ ಓದಿ..

ವಾಡಿಯಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು

ವಾಡಿಯಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು

ಮೇ 30 ರಂದು ನಡೆದ ಘಟನೆ ಕುರಿತಂತೆ ಪ್ರೀತಿ ನೀಡಿದ ದೂರಿನ ಅನ್ವಯ ಪೊಲೀಸರು ಜೂನ್ 13, 2014ರಂದು ಮುಂಬೈ ಪೊಲೀಸರು, ವಾಡಿಯಾ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಭಾರತೀಯ ದಂಡ ಸಂಹಿತೆ ಸೆಕ್ಷನ್ 354 (ಹಲ್ಲೆ ನಡೆಸಿ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡಿದ), ಸೆಕ್ಷನ್ 504 (ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು), ಸೆಕ್ಷನ್ 506 (ಬೆದರಿಕೆ) ಹಾಗೂ ಸೆಕ್ಷನ್ 509 (ಮಹಿಳೆಯ ಜತೆ ಅಶ್ಲೀಲವಾಗಿ ಮಾತನಾಡುವುದು) ಪ್ರಕಾರ ದೂರು ದಾಖಲಿಸಿಕೊಂಡಿದ್ದರು. ನಂತರ ಎಫ್ಐಆರ್, 2018ರಲ್ಲಿ ಚಾರ್ಜ್ ಶೀಟ್ ಕೂಡಾ ಹಾಕಲಾಗಿತ್ತು.

ಜೋಡಿ ಹಕ್ಕಿಗಳು ಬೇರ್ಪಟ್ಟಿದ್ದರು

ಜೋಡಿ ಹಕ್ಕಿಗಳು ಬೇರ್ಪಟ್ಟಿದ್ದರು

ಒಂದು ಕಾಲದಲ್ಲಿ ಜೋಡಿ ಹಕ್ಕಿಗಳಾಗಿ ವಿಹರಿಸುತ್ತಿದ್ದ ಪ್ರೀತಿ ಹಾಗೂ ನೆಸ್ ವಾಡಿಯಾ 2012ರಲ್ಲಿ ಈ ಘಟನೆ ನಡೆಯುವ ವೇಳೆಗೆ ಸಂಗಾತಿಗಳಾಗಿರಲಿಲ್ಲ. ಫ್ರೆಂಡ್ಸ್ ಎಂದು ಕರೆಯುವಂತೆಯೂ ಇರಲಿಲ್ಲ. ಇಬ್ಬರಿಗೂ ಇದ್ದದ್ದು ಒಂದೇ ಕೊಂಡಿ ಐಪಿಎಲ್ ಹಾಗೂ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಸಹ ಮಾಲೀಕತ್ವ. ಐಪಿಎಲ್ ಗಾಗಿ ಇಬ್ಬರು ಒಟ್ಟಿಗೆ ಇದ್ದರು. ಆದರೆ, ಇಬ್ಬರ ನಡುವೆ ಯಾವುದೇ ರೀತಿ ಹೊಂದಾಣಿಕೆ ಇರಲಿಲ್ಲ. ಇದು ತಂಡದ ಮೇಲೂ ಪರಿಣಾಮ ಬೀರಿತ್ತು.

ಪೊಲೀಸರ ತನಿಖೆ ಚುರುಕುಗೊಂಡರೂ ಸಾಕ್ಷಿ ಇರಲಿಲ್ಲ

ಪೊಲೀಸರ ತನಿಖೆ ಚುರುಕುಗೊಂಡರೂ ಸಾಕ್ಷಿ ಇರಲಿಲ್ಲ

ಜೂನ್ ತಿಂಗಳಿನಲ್ಲಿ ಪ್ರೀತಿ ಜಿಂಟಾ ಅವರು ಅಂದಿನ ಘಟನೆ ಕುರಿತಂತೆ ಆಡಿಯೋ, ವಿಡಿಯೋ ಸಾಕ್ಷಿಗಳನ್ನು ನೀಡಿ ದೂರು ದಾಖಲಿಸಿದ್ದರು. ಆದರೆ,ಅಂದು ಘಟನೆ ಸಾಕ್ಷಿಯಾಗಿದ್ದವರ ಪೈಕಿ ನಾಲ್ಕನೇ ಸಾಕ್ಷಿ ಮಾಹಿಂತುರಾ ಅವರ ಹೇಳಿಕೆ ಪ್ರೀತಿಗೆ ವಿರುದ್ಧವಾಗಿತ್ತು. 'ಅಂದು ಎಲ್ಲವೂ ಸಹಜವಾಗಿತ್ತು. ನೆಸ್ ಅವರು ಪ್ರೀತಿ ಬಳಿ ಬಂದು ಮಾತನಾಡಿ ದರು. ಇಬ್ಬರ ನಡುವೆ ಅಂಥ ಜಗಳವಾಗಿರಲಿಲ್ಲ, ಸೆಹ್ವಾಗ್ ಅವರು ಪಂಜಾಬ್ ಪರ ಚೆನ್ನೈ ವಿರುದ್ಧ ಚೆನ್ನಾಗಿ ಆಡಿದರು, ಪ್ರೀತಿ ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದರು'

ಪೂಜಾ ದಡ್ಲಾನಿ, ಫರ್ಹಾ ಓಮರ್ ಬಾಯ್, ಸಾವಾನ್ ದಾರು ಇನ್ನಿತರ ಪ್ರಮುಖ ಸಾಕ್ಷಿಗಳಾಗಿದ್ದು, ಯಾರೂ ಕೂಡಾ ಅಂದು ನೆಸ್ ವಾಡಿಯಾ ಅನುಚಿತವಾಗಿ ವರ್ತಿಸಿದರು ಎಂದು ಸಾಕ್ಷಿ ನುಡಿದಿರಲಿಲ್ಲ.

ಇಬ್ಬರ ನಡುವೆ ಮನಸ್ತಾಪ ಇದ್ದಿದ್ದು ನಿಜ

ಇಬ್ಬರ ನಡುವೆ ಮನಸ್ತಾಪ ಇದ್ದಿದ್ದು ನಿಜ

ಇಬ್ಬರ ನಡುವೆ ಮನಸ್ತಾಪ ಇದ್ದಿದ್ದು ನಿಜ ಇದಕ್ಕೆ ಕಿಂಗ್ಸ್ ಎಲೆವನ್ ತಂಡದ ಮಾಲೀಕತ್ವದ ಹೊಣೆ, ತಂಡದ ವೈಫಲ್ಯ, ಭ್ರಷ್ಟಾಚಾರದ ಆರೋಪ, ನಷ್ಟ ಎಲ್ಲವೂ ಕಾರಣ ಇರಬಹುದು. ವಾಡಿಯಾ ಅವರು ಮತ್ತೊಂದು ಹುಡುಗಿ ಜತೆ ಇರುವುದು ಗೊತ್ತಾಗಿ ಅವರಿಂದ ಪ್ರೀತಿ ದೂರಾಗಿದ್ದಳು ಎನ್ನಲಾಗಿದೆ. ಆದರೆ, ವಾಡಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರೀತಿ ದೂರು ದಾಖಲಿಸಿದ್ದರು ಎಂಬ ಸುದ್ದಿಯೂ ಇದೆ.

English summary
A molestation case filed by actor Preity Zinta against industrialist Ness Wadia in 2014 was today cancelled by the Bombay High Court, news agency ANI has reported. The court decision comes two days after it had suggested the actor to consider "finishing off" the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X