• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಸ್ತೆಯಲ್ಲಿ ಮಗುವಿಗೆ ಜನ್ಮವಿತ್ತ ಕಾರ್ಮಿಕ ಮಹಿಳೆ, ಬಳಿಕ 150 ಕಿಮೀ ಪ್ರಯಾಣ

|

ಮುಂಬೈ, ಮೇ 13: ಕೊರೊನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆ ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿದ್ದ ಅನೇಕ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಸರ್ಕಾರ ವ್ಯವಸ್ಥೆ ಮಾಡಿರುವ ರೈಲು ಹಾಗೂ ಬಿಸ್ಸಿಗೂ ಕಾಯದ ಕೆಲವು ಕಾರ್ಮಿಕರು ಹೆದ್ದಾರಿಗಳಲ್ಲಿ ನಡೆದುಕೊಂಡೇ ಊರು ಸೇರುತ್ತಿದ್ದಾರೆ.

ಹೀಗೆ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಹೋಗುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರು ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

ಮಲೇಷ್ಯಾ ಮತ್ತು ಕತಾರ್‌ನಿಂದ ಭಾರತಕ್ಕೆ ಬಂದಿಳಿದ ಭಾರತೀಯರು

ಮಹಾರಾಷ್ಟ್ರದ ನಾಸಿಕ್‌ನಗರದಿಂದ ಮಧ್ಯಪ್ರದೇಶದ ಸಾತ್ನ ಜಿಲ್ಲೆಗೆ ಹೋಗುತ್ತಿದ್ದ ಗರ್ಭಿಣಿ ಹೆಂಗಸು, ಮಾರ್ಗಮಧ್ಯ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಗುವಿಗೆ ಜನ್ಮ ನೀಡಿದ ಬಳಿಕವೂ ಆಕೆ ಸುಮಾರು 150 ಕಿ.ಮೀ ನಡೆದುಕೊಂಡು ಹೋಗಿದ್ದಾರೆ ಎಂದು ಆಕೆಯ ಪತಿ ಹೇಳಿದ್ದಾರೆ. ''ಮಗುವಿಗೆ ಜನ್ಮ ನೀಡಿದ ಬಳಿಕ ಸುಮಾರು ಗಂಟೆ ವಿಶ್ರಾಂತಿ ಪಡೆದೆವು. ನಂತರ ಸುಮಾರು 150 ಕಿ.ಮೀ ನಡೆದುಕೊಂಡು ಹೋದೆವು'' ಎಂದಿದ್ದಾರೆ.

ಇನ್ನು ಈ ವಿಷಯ ತಿಳಿದ ಸಾತ್ನ ಜಿಲ್ಲೆಯ ಆಡಳಿತ ಮಂಡಳಿ ಕೂಡಲೇ ಬಸ್ಸಿನ ವ್ಯವಸ್ಥೆ ಮಾಡಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ನೀಡಿದೆ. ಸದ್ಯ ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

''ಆ ದಂಪತಿಗಳು ಮಹಾರಾಷ್ಟ್ರ ಗಡಿ ಭಾಗಕ್ಕೆ ಬಂದಾಗ ಆಡಳಿತ ಮಂಡಳಿಯೂ ಅವರಿಗೆ ಬಸ್ ವ್ಯವಸ್ಥೆ ಮಾಡಿದೆ ಎಂದು ನಮಗೆ ತಿಳಿಯಿತು, ಅವರು ಉಂಚೇರಾ ತಲುಪುತ್ತಿದ್ದಂತೆ ನಾವು ಅವರನ್ನು ಆಸ್ಪತ್ರೆಗೆ ಕರೆತಂದೆವು. ಎಲ್ಲಾ ತಪಾಸಣೆಗಳನ್ನು ಮಾಡಲಾಗಿದೆ, ತಾಯಿ ಮತ್ತು ಮಗು ಇಬ್ಬರೂ ಉತ್ತಮವಾಗಿದ್ದಾರೆ'' ವೈದ್ಯರು ಮಾಹಿತಿ ನೀಡಿದ್ದಾರೆ.

English summary
A pregnant migrant worker who was walking back to her village in Satna from Nashik in Maharashtra amid Coronavirus Lockdown, delivered a child on the way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X