ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಜೊತೆ ನಂಟು ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೆಲ್ ಗೆ ಸಮನ್ಸ್

|
Google Oneindia Kannada News

ಮುಂಬೈ, ಅಕ್ಟೋಬರ್ 17: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿರುವ ಮುಂಬೈನಲ್ಲಿರುವ ಆಸ್ತಿಗಳನ್ನು ಖರೀದಿಸಿರುವ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ, ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿದೆ. ಆದರೆ ವಿವಾದಿತ ಸೀಜೆ ಹೌಸ್ ಕಟ್ಟಡದ ಭೂ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಫುಲ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

2005ರಲ್ಲಿ ದಾವೂದ್ ಸಹಚರ ಇಕ್ಬಾಲ್ ಮಿರ್ಚಿ ಈ ಕಟ್ಟಡವನ್ನು ಪ್ರಫುಲ್ ಪಟೇಲ್ ಗೆ ಮಾರಿದ್ದಾನೆ. ಇಕ್ಬಾಲ್ ಪತ್ನಿ ಹಜ್ರಾ ಮೆಮೊನ್ ಹೆಸರಿನಲ್ಲಿದ್ದ ಮತ್ತೊಂದು ಆಸ್ತಿ ಕೂಡಾ ಪಟೇಲ್ ಪಾಲಾಗಿದೆ. ಈ ಕಟ್ಟಡಗಳ ಮಾಲೀಕತ್ವ ಪಡೆದ ಬಳಿಕ ಪುನರ್ ವಿನ್ಯಾಸಗೊಳಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.

Dawood Ibrahim

ಆದರೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಿರತರಾಗಿರುವ ಪ್ರಫುಲ್ ಪಟೇಲ್ ಅವರು ಎಲ್ಲಾ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. 2004ರಿಂದ 2009ರ ಅವಧಿಯಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದರು.

ಇನ್ನೊಂದು ವಾದದ ಪ್ರಕಾರ ಈ ಕಟ್ಟಡದ ಮಾಲೀಕತ್ವ ವಿವಾದ ಕೋರ್ಟಿನಲ್ಲಿ ವಿಚಾರಣೆಗೊಳಪಟ್ಟಿದ್ದು, 1978ರಿಂದ 2005ರ ತನಕ ಇದ್ದ ಮಾಲೀಕರು ಬೇರೆ, ಇಕ್ಬಾಲ್ ಮಿರ್ಚಿ ಅಸಲಿ ಹಕ್ಕುದಾರನಲ್ಲ ಎಂಬ ವರದಿಗಳು ಬಂದಿವೆ. 1963ರಲ್ಲಿ ಸೀಜೆ ಹೌಸ್ ಹಾಗೂ ವರ್ಲಿಯ ಕಟ್ಟಡ ನಮ್ಮ ಸುಪರ್ದಿಗೆ ಬಂದಿದ್ದು, ನನ್ನ ಕುಟುಂಬದ 21 ಸದಸ್ಯರು ಸೇರಿದಂತೆ 65 ಮಂದಿಗೆ ಮಾರಾಟವಾಗಿದೆ. ಕಟ್ಟಡದ ಹಿಂಬದಿಯಲ್ಲಿ ಅಕ್ರಮವಾಗಿ ನೆಲೆಸಿದ್ದವರ ಬಗ್ಗೆ ಉಲ್ಲೇಖಿಸುವುದು ಇಲ್ಲಿ ಮುಖ್ಯ ಎಂದು ಪಟೇಲ್ ಹೇಳಿದ್ದಾರೆ.

English summary
Former Union Minister Praful Patel on Tuesday sought to clear the air over allegations of his link to an alleged land deal with a close aide of Dawood Ibrahim.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X