ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಆಗಲೇ ಆದಿತ್ಯ ಠಾಕ್ರೆ ಮುಖ್ಯಮಂತ್ರಿ! ಪೋಸ್ಟರ್ ಹೇಳುವ ಕಥೆ!

|
Google Oneindia Kannada News

ಮುಂಬೈ, ಅಕ್ಟೋಬರ್ 26: "ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆದಿತ್ಯ ಠಾಕ್ರೆ" ಎಂಬ ಸಾಲುಗಳುಳ್ಳ ಪೋಸ್ಟರ್ ವೊಂದು ಮುಂಬೈಯ ಠಾಕ್ರೆ ನಿವಾಸ 'ಮಾತೋಶ್ರೀ' ಬಳಿ ಕಾಣಿಸಿಕೊಂಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

ಮರಾರಾಷ್ಟ್ರದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಬಹುತೇಕ ಖಚಿತವಾಗದರೂ ಅದಕ್ಕೆ ಶರತ್ತುಗಳು ಅನ್ವಯ ಎಂದು ಈಗಾಗಲೇ ಶಿವಸೇನೆ ಹೇಳಿದೆ. 50:50 ಸೂತ್ರಕ್ಕೆ ಒಪ್ಪುವುದಾದರೆ ಮಾತ್ರವೇ ಮೈತ್ರಿಗೆ ಸಿದ್ಧ ಎಂದು ಈಗಾಗಲೇ ಶಿವಸೇನೆ ಹೇಳಿದ್ದು, ಅದಕ್ಕೆ ಒಪ್ಪಿಗೆ ಸೂಚಿಸುವುದೂ ಬಿಜೆಪಿಗೆ ಅನಿವಾರ್ಯವಾಗಿದೆ.

ಶಿವಸೇನೆ50-50 ಕೇಳುವುದರಲ್ಲಿ ತಪ್ಪೇನಿಲ್ಲ: ಶರದ್ ಪವಾರ್ಶಿವಸೇನೆ50-50 ಕೇಳುವುದರಲ್ಲಿ ತಪ್ಪೇನಿಲ್ಲ: ಶರದ್ ಪವಾರ್

ಮಹಾರಾಷ್ಟ್ರದ ವರ್ಲಿ ಕ್ಷೇತ್ರದಿಂದ ಶಿವಸೇನೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆದಿತ್ಯ ಠಾಕ್ರೆ ಭರ್ಜರಿ ಜಯ ಸಾಧಿಸಿದ್ದರು. ಚುನಾವಣೆಗೂ ಮೊದಲೇ ಶಿವಸೇನೆ ಆದಿತ್ಯ ಠಾಕ್ರೆ ಅವರೇ ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಎಂದು ಘೋಷಿಸಿತ್ತು.

Poster In Mumbai Reads Aaditya Tackeray CM Of Maharashtra

ಮಹಾರಾಷ್ಟ್ರದ 288 ಕ್ಷೇತ್ರಗಳ್ಲಲಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಶಿವಸೇನೆ 56, ಎನ್ ಸಿಪಿ 54, ಕಾಂಗ್ರೆಸ್ 44 ಕ್ಷೇತ್ರಗಳಲ್ಲಿ ಗೆದ್ದಿವೆ. ಸರ್ಕಾರ ರಚಿಸಬೇಕಾದರೆ ಬಿಜೆಪಿಗೆ ಶಿವಸೇನೆ ಬೆಂಬಲ ಅತ್ಯಗತ್ಯ. 50:50 ಸೂತ್ರದ ಪ್ರಕಾರ ಎರಡೂವರೆ ವರ್ಷ ಶಿವಸೇನೆ, ಇನ್ನೆರಡೂವರೆ ವರ್ಷ ಬಿಜೆಪಿ ಆಅಡಳಿತ ನಡೆಸಬೇಕಿದೆ.

50:50 ಸೂತ್ರಕ್ಕೆ ಒಪ್ಪಿದರೆ ಮಾತ್ರ ಸರ್ಕಾರ, ಬಿಜೆಪಿಗೆ ತಲೆನೋವಾದ ಶಿವಸೇನೆ50:50 ಸೂತ್ರಕ್ಕೆ ಒಪ್ಪಿದರೆ ಮಾತ್ರ ಸರ್ಕಾರ, ಬಿಜೆಪಿಗೆ ತಲೆನೋವಾದ ಶಿವಸೇನೆ

ಒಲ್ಲೆ ಎಂದರೆ, ಕಾಂಗ್ರೆಸ್, ಎನ್ ಸಿಪಿ, ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು. ಆಗ ಆದಿತ್ಯ ಠಾಕ್ರೆ ಸಿಎಂ ಆಗುವುದು ಖಚಿತ. ಆದದ್ರಿಂದ ಬಿಜೆಪಿಗೆ ಅಧಿಕಾರದ ಅಗತ್ಯವಿದ್ದರೆ ಈ ಸೂತ್ರವನ್ನು ಒಪ್ಪಿಕೊಳ್ಳಲೇಬೇಕಿದೆ.

English summary
Mumbai: A Poster put up outside Thackeray residence reads 'CM Maharashtra only Aditya Thackeray'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X