ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮುಂಬೈನಲ್ಲಿ 1,400 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ

|
Google Oneindia Kannada News

ಮುಂಬೈ, ಆ.04: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿರುವ ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು 1,400 ಕೋಟಿ ರೂಪಾಯಿ ಮೌಲ್ಯದ 700 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ (mephedrone) ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು. ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ಮುಂಬೈ ಅಪರಾಧ ವಿಭಾಗದ ನಾರ್ಕೋಟಿಕ್ ಸೆಲ್ ದಾಳಿ ನಡೆಸಿತ್ತು.

"ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ತಂಡವು ಮಾದಕ ವಸ್ತು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿತು, ಈ ಸಮಯದಲ್ಲಿ ನಿಷೇಧಿತ ಔಷಧವಾದ ಮೆಫೆಡ್ರೋನ್ ಅನ್ನು ತಯಾರಿಸಲಾಗುತ್ತಿದೆ ಎಂಬುದು ಕಂಡುಬಂದಿದೆ" ಎಂದು ಮಾಹಿತಿ ನೀಡಿದರು.

Police Seizes Over 700 Kg Mephedrone Arrests Five At Mumbai

"ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಮುಂಬೈನಲ್ಲಿ ಬಂಧಿಸಿದ್ದರೆ, ಒಬ್ಬ ವ್ಯಕ್ತಿಯನ್ನು ನಲಸೋಪಾರಾದಲ್ಲಿ ಬಂಧಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ನಗರ ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚಿದ ಅತಿ ಹೆಚ್ಚಿನ ಡ್ರಗ್ಸ್ ಇದಾಗಿದೆ" ಎಂದು ಪೊಲೀಸರು ಹೇಳಿದರು.

ಮೆಫೆಡ್ರೋನ್ ಅನ್ನು 'ಮಿಯಾಂವ್ ಮಿಯಾವ್' ಅಥವಾ MD ಎಂದೂ ಕರೆಯುತ್ತಾರೆ. ಇದು ಸಿಂಥೆಟಿಕ್ ಉತ್ತೇಜಕವಾಗಿದ್ದು, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯಿದೆಯಡಿಯಲ್ಲಿ ನಿಷೇಧಿಸಲಾದ ಸೈಕೋಟ್ರೋಪಿಕ್ ವಸ್ತುವಾಗಿದೆ.

ಇನ್ನು, ದೇಶದಲ್ಲೇ ಅತಿ ದೊಡ್ಡ ಖಾಸಗಿ ಬಂದರು ಎನ್ನಲಾಗುವ ಗುಜರಾತ್‌ನಲ್ಲಿರುವ ಗಲ್ಫ್ ಆಫ್ ಕಚ್‌ನಲ್ಲಿನ ಮುಂದ್ರಾ ಬಂದರಿನಲ್ಲಿ ಅಧಿಕಾರಿಗಳು ಮಂಗಳವಾರ ಮತ್ತೊಮ್ಮೆ ದಾಳಿ ಮಾಡಿ 350 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಇದು ಬಂದರಿನಲ್ಲಿ ಈ ವರ್ಷದ ನಡೆದ ಎರಡನೇ ದಾಳಿಯಾಗಿದೆ.

English summary
Mumbai police seized mephedrone drug worth 1,400 crore in Palghar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X