ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಧವ್ ಠಾಕ್ರೆ ನಿವಾಸದಲ್ಲಿ ಸಬ್ ಇನ್ಸ್‌ಪೆಕ್ಟರ್‌ಗೆ ಕೊರೊನಾ

|
Google Oneindia Kannada News

ಮುಂಬೈ, ಏಪ್ರಿಲ್ 22: ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಕೈ ಮೀರಿ ಸಾಗುತ್ತಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 20 ಸಾವಿರ ದಾಟಿದ್ರೆ, ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರ 5 ಸಾವಿರ ಸೋಂಕಿತರು ವರದಿಯಾಗಿದ್ದಾರೆ.

ಇದೀಗ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧಿಕೃತ ನಿವಾಸ ವರ್ಷಾ ಬಂಗಲೆ ಬಳಿ ಕರ್ತವ್ಯದಲ್ಲಿದ್ದ ಮಹಿಳೆ ಸಬ್ ಇನ್ಸ್‌ಪೆಕ್ಟರ್‌ಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಬಹಿರಂಗವಾಗಿದೆ.

ಸೇಫ್ ಎಂದುಕೊಂಡಿದ್ದ ಕೇರಳಕ್ಕೆ ಮತ್ತೆ ಆಘಾತ ನೀಡಿದ ಕೊರೊನಾಸೇಫ್ ಎಂದುಕೊಂಡಿದ್ದ ಕೇರಳಕ್ಕೆ ಮತ್ತೆ ಆಘಾತ ನೀಡಿದ ಕೊರೊನಾ

ಈ ವಿಷಯವನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಮಂಗಳವಾರ ಖಚಿತಪಡಿಸಿದ್ದಾರೆ. ಇನ್ನು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರ ನಿವಾಸದ ಬಳಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗೆ ಕೊವಿಡ್ ಪಾಸಿಟಿವ್ ಬಂದಿದೆ ಎಂದು ವರದಿಯಾಗಿತ್ತು.

Police Inspector From CM Residence Tested Positive For COVID 19

ಏಪ್ರಿಲ್ 12 ರಂದು ಪೊಲೀಸ್ ಪೇದೆಗೆ ರೋಗದ ಲಕ್ಷಣ ಕಾಣಿಸಿಕೊಂಡಿತ್ತು. ಏಪ್ರಿಲ್ 14 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವರದಿ ಕೊರೊನಾ ಪಾಸಿಟಿವ್ ಬಂದಿತ್ತು. ಆತನ ಜೊತೆಯಲ್ಲಿದ್ದವರಿಗೆಲ್ಲಾ ಕ್ವಾರೆಂಟೈನ್‌ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೊರೊನಾ: ಮೋದಿ ಸರಕಾರ ಇನ್ನಾದರೂ ರಾಹುಲ್ ಗಾಂಧಿ ಮಾತಿಗೆ ಮನ್ನಣೆ ನೀಡಲಿಕೊರೊನಾ: ಮೋದಿ ಸರಕಾರ ಇನ್ನಾದರೂ ರಾಹುಲ್ ಗಾಂಧಿ ಮಾತಿಗೆ ಮನ್ನಣೆ ನೀಡಲಿ

ಇದುವರೆಗೂ ಮಹಾರಾಷ್ಟ್ರದಲ್ಲಿ 5218 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ 3451 ಜನರು ಮುಂಬೈ ನಗರದ ಜನರು. 251 ಜನರು ಮಹಾರಾಷ್ಟ್ರದಲ್ಲಿ ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
An assistant police inspector deployed at Varsha bungalow, the official residence of Chief Minister Uddhav Thackeray, has tested positive for COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X