ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್

|
Google Oneindia Kannada News

ಮುಂಬೈ, ಡಿಸೆಂಬರ್ 28: ಪ್ರಮಾದವಶಾತ್ ಸಂಭವಿಸಿದ ಅಥವಾ ಯಾವುದೇ ಲೈಂಗಿಕ ಉದ್ದೇಶಗಳಿಲ್ಲದ ದೈಹಿಕ ಸ್ಪರ್ಶವು ಪೋಕ್ಸೊ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯ ಎಂದಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊಂದಿರುವ 27 ವರ್ಷದ ವ್ಯಕ್ತಿಗೆ ನಿರೀಕ್ಷಣಾ ಜಾಮೀನಿ ನೀಡಿರುವ ನ್ಯಾಯಮೂರ್ತಿ ಭಾರತಿ ಡಾಂಗ್ರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಕುರಿತಾದ ವ್ಯಾಖ್ಯಾನವನ್ನು ಮಾಡಿದ್ದಾರೆ.

15 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಜಾತಕ15 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನ ಜಾತಕ

17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಟ್ಯೂಷನ್ ತರಗತಿಗೆ ಹೋಗುವಾಗ ಬಾಲಕಿಯ ನೆರೆಮನೆಯ ವ್ಯಕ್ತಿ ಆಕೆಯನ್ನು ತಡೆದು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡ. ಆದರೆ ಆಕೆ ಆತನ ಬಿನ್ನಹವನ್ನು ಮನ್ನಿಸದೆ ಹೋದಾಗ ಆಕೆಯ ಬಲಗೈಯನ್ನು ಹಿಡಿದುಕೊಂಡು ಮನವೊಲಿಸಲು ಪ್ರಯತ್ನಿಸಿದ. ಇದರಿಂದ ಭಯಗೊಂಡ ಆಕೆ ಆತನಿಂದ ಹೇಗೋ ತಪ್ಪಿಸಿಕೊಂಡು ಹೋದಳು ಎಂದು ದೂರಿನಲ್ಲಿ ಹೇಳಲಾಗಿತ್ತು.

ಶಿಶು ಅತ್ಯಾಚಾರಿಗಳಿಗೆ ಕ್ಷಮಾದಾನದ ಅರ್ಜಿಗೆ ಅನುಮತಿಯನ್ನೇ ಕೊಡಬಾರದು: ಕೋವಿಂದ್ಶಿಶು ಅತ್ಯಾಚಾರಿಗಳಿಗೆ ಕ್ಷಮಾದಾನದ ಅರ್ಜಿಗೆ ಅನುಮತಿಯನ್ನೇ ಕೊಡಬಾರದು: ಕೋವಿಂದ್

ಈ ಘಟನೆಯನ್ನು ಯಾರಿಗೂ ಹೇಳಬಾರದು ಎಂದ ಆತ, ಆಕೆಗೆ ಬೆದರಿಕೆ ಹಾಕತೊಡಗಿದ. ಬಾಲಕಿಯ ಹೆಸರಿಗೆ ಕಳಂಕ ತರುವುದಾಗಿ ಬೆದರಕೆ ಹಾಕಿದ್ದಲ್ಲದೆ, ಆಕೆಯ ಹೆಸರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದು, ಅವಳ ಸ್ನೇಹಿತರ ಜತೆ ಚಾಟ್ ಮಾಡಿದ್ದ. ಬಾಲಕಿಯ ಮನೆ ಮುಂದೆ ನಿಲ್ಲುತ್ತಿದ್ದ ಮತ್ತು ಆಕೆಗೆ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಮುಂದೆ ಓದಿ.

ಎಂಟು ತಿಂಗಳ ಬಳಿಕ ದೂರು

ಎಂಟು ತಿಂಗಳ ಬಳಿಕ ದೂರು

ಆಕೆಯೆಡೆಗೆ ಗುರಾಯಿಸಿಕೊಂಡು ನೋಡುತ್ತಿದ್ದದ್ದು ಆಕೆಗೆ ಅವಮಾನ ಉಂಟುಮಾಡುತ್ತಿತ್ತು ಮತ್ತು ಆಕೆಯ ಚಾರಿತ್ರ್ಯ ಹರಣ ಮಾಡಲು ಆತ ನಡೆಸಿದ ಪ್ರಯತ್ನಗಳು ಎಂದು ಕೋರ್ಟ್ ಪರಿಗಣಿಸಿತು. ಆಕೆಗೆ ತೊಂದರೆ ಕೊಡುವುದಿಲ್ಲ ಎಂದು ಮಾತು ನೀಡಿದ್ದರೂ ಅದನ್ನು ಮುಂದುವರಿಸಿದ್ದ ಮತ್ತು ತನಗೂ ಬೆದರಿಕೆ ಹಾಕತೊಡಗಿದ್ದ ಎಂದು ಬಾಲಕಿಯ ತಂದೆ ಆರೋಪಿಸಿದ್ದರು. ಇದು ಸುಮಾರು ಎಂಟು ತಿಂಗಳ ಕಾಳ ನಡೆದ ಬಳಿಕ ಬಾಲಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.

ಐಪಿಸಿ, ಪೋಕ್ಸೋ ಅಡಿ ಅನೇಕ ಪ್ರಕರಣ

ಐಪಿಸಿ, ಪೋಕ್ಸೋ ಅಡಿ ಅನೇಕ ಪ್ರಕರಣ

ಆತನ ವಿರುದ್ಧ ಐಪಿಸಿ ಸೆಕ್ಷನ್ 341, 354 B, 452, 506, 504, 509, 34ರ ಅಡಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅಲ್ಲದೆ, ಪೋಕ್ಸೋ ಕಾಯ್ದೆಯಡಿ ಸೆಕ್ಷನ್ 8, 12, 17ರ ಅಡಿ ಕೂಡ ವಿವಿಧ ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು.

ಜಾಮೀನು ಸಾಧ್ಯವಿಲ್ಲ

ಜಾಮೀನು ಸಾಧ್ಯವಿಲ್ಲ

'ಆತ ತನ್ನ ಪ್ರೀತಿಯನ್ನು ಆಕೆಯ ಮುಂದೆ ನಿವೇದಿಸಿಕೊಂಡಿದ್ದ. ಆಕೆ ತಾರುಣ್ಯದಲ್ಲಿರುವಾಕೆ. ಆಕೆಯ ಬಗ್ಗೆ ಆರೋಪಿಯಲ್ಲಿ ಲೈಂಗಿಕ ಬಯಕೆಗಳಿರಲಿಲ್ಲ' ಎಂದು ಆರೋಪಿ ಪರ ವಕೀಲರು ವಾದಿಸಿದ್ದರು. ಇದು ಜಾಮೀನುರಹಿತ ಅಪರಾಧ ಪ್ರಕರಣವಾಗಿರುವುದಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಕೆಳನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತ್ತು.

ಜಾಮೀನು ಮಂಜೂರು

ಜಾಮೀನು ಮಂಜೂರು

ಆದರೆ ಪೋಕ್ಸೊ ಕಾಯ್ದೆಯ ಸೆಕ್ಷನ್ 8, ಲೈಂಗಿಕ ದೌರ್ಜನ್ಯದ ಗಂಭೀರ ನಿದರ್ಶನಗಳಿದ್ದಾಗ ಅನ್ವಯವಾಗುತ್ತದೆ. ಅಂದರೆ, ಮಗುವಿನ ಖಾಸಗಿ ಅಂಗಗಳನ್ನು ಸ್ಪರ್ಶಿಸುವುದು, ಅಥವಾ ಯಾವುದೇ ವ್ಯಕ್ತಿಯ ಖಾಸಗಿ ಅಂಗಗಳನ್ನು ಮಗು ಸ್ಪರ್ಶಿಸುವಂತೆ ಮಾಡುವುದು ಈ ಕಾಯ್ದೆಯಲ್ಲಿ ಶಿಕ್ಷಾರ್ಹ. ಲೈಂಗಿಕ ಉದ್ದೇಶಗಳಿಲ್ಲದೆ ದೈಹಿಕವಾಗಿ ಸ್ಪರ್ಶಿಸುವುದನ್ನು ಲೈಂಗಿಕ ದೌರ್ಜನ್ಯ ಎಂದು ಕರೆಯಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿತು. ಆರೋಪಿಗೆ ಕೋರ್ಟ್ ಜಾಮೀನು ನೀಡಿತು.

English summary
Bombay High Court on POCSO Act said any physical touch without sexual intent is not a sexual assault.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X