ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹುಲ್ ಚೋಕ್ಸಿಯ 14.45 ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು

|
Google Oneindia Kannada News

ಮುಂಬೈ, ಫೆಬ್ರವರಿ 4: ಗೀತಾಂಜಲಿ ಸಮೂಹ ಮತ್ತು ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರಿಗೆ ಸೇರಿದ 14.45 ಕೋಟಿ ರೂ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಮುಂಬೈನಲ್ಲಿನ ಚೋಕ್ಸಿ ಅವರ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅದರ ಜತೆಗೆ ಚಿನ್ನ, ಪ್ಲಾಟಿನಂ ಆಭರಣಗಳು, ವಜ್ರ, ಐಷಾರಾಮಿ ವಾಚ್‌ಗಳು ಮತ್ತು ಗೀತಾಂಜಲಿ ಸಮೂಹದ ಹೆಸರಿನಲ್ಲಿದ್ದ ಮರ್ಸಿಡಿಸ್ ಬೆಂಜ್ ಕಾರ್ ಒಂದನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಹೇಳಿಕೆ ನೀಡಿದೆ.

ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ನಂ.1ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ನಂ.1

ತಮ್ಮ ಸೋದರಳಿಯ ನೀರವ್ ಮೋದಿ ಜತೆಗೂಡಿ ಸಾಲ ಮರುಪಾವತಿ ಖಾತರಿ ಪತ್ರದ (ಎಲ್‌ಒಯು) ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 15,600 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಚೋಕ್ಸಿ ಅವರ ಮೇಲಿದೆ. ಈ ಹಿಂದೆ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಚೋಕ್ಸಿ ಅವರಿಗೆ ಸೇರಿದ್ದ 2,550 ಕೋಟಿ ರೂ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿತ್ತು.

PNB Scam Case: ED Attaches Assets Worth Rs 14 Crore Of Mehul Choksi

ಮೆಹುಲ್ ಚೋಕ್ಸಿಯನ್ನು ಕರೆದೊಯ್ಯಿರಿ, ನಮ್ಮ ಅಭ್ಯಂತರವಿಲ್ಲ: ಆಂಟಿಗುವಾ ಪ್ರಧಾನಿ ಮೆಹುಲ್ ಚೋಕ್ಸಿಯನ್ನು ಕರೆದೊಯ್ಯಿರಿ, ನಮ್ಮ ಅಭ್ಯಂತರವಿಲ್ಲ: ಆಂಟಿಗುವಾ ಪ್ರಧಾನಿ

2018ರ ಆರಂಭದಲ್ಲಿ ಪಿಎನ್‌ಬಿ ಬ್ಯಾಂಕ್ ವಂಚನೆ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಚೋಕ್ಸಿ ಮತ್ತು ನೀರವ್ ಮೋದಿ ಇಬ್ಬರೂ ಭಾರತದಿಂದ ಪರಾರಿಯಾಗಿದ್ದರು. ಚೋಕ್ಸಿ ಆಂಟಿಗುವಾದಲ್ಲಿ ಇದ್ದಾರೆ ಎಂದಿದ್ದರೆ, ನೀರವ್ ಮೋದಿ ಬ್ರಿಟನ್‌ನ ಜೈಲಿನಲ್ಲಿದ್ದು, ಭಾರತದ ಗಡಿಪಾರು ಮನವಿಯ ವಿರುದ್ಧ ಕಾನೂನು ಹೋರಾಟ ನಡೆಸಿದ್ದಾರೆ.

English summary
ED has attached assets worth Rs 14.45 crore of Mehul Choksi and Gitanjali Group related to Punjab National Bank fraud scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X