ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್ ಬಿ ಕೇಸ್ ಆರೋಪಿ ಮೋದಿ, ದೇಶದಿಂದ ಪರಾರಿ

By Mahesh
|
Google Oneindia Kannada News

ಮುಂಬೈ, ಫೆಬ್ರವರಿ 15: ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಆಭರಣ ವಿನ್ಯಾಸಗಾರ ನೀರವ್ ಮೋದಿ ಅವರು ದೇಶದಿಂದ ಪರಾರಿಯಾಗಿರುವ ಸುದ್ದಿ ಬಂದಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 280 ಕೋಟಿ ರೂ.ಗಳ ಅವ್ಯವಹಾರ ಮಾಡಿರುವ ಆರೋಪದ ಹೊತ್ತಿರುವ ನೀರವ್ ಮೋದಿ ಅವರ ಮನೆ, ಕಚೇರಿ ಮೇಲೆ ಗುರುವಾರದಂದು ದಾಳಿ ನಡೆಸಿದ್ದಾರೆ. ದಾಳಿ ಬಗ್ಗೆ ತಿಳಿದ ನೀರವ್ ಮೋದಿ ಅವರು ಸ್ವಿಟ್ಜರ್ಲೆಂಡ್ ಗೆ ಪರಾರಿಯಾಗಿರುವ ಸಾಧ್ಯತೆ ಕಂಡು ಬಂದಿದೆ.

PNB fraud case: Nirav Modi flees the country, off to Switerland

ಸೂರತ್ ನಲ್ಲಿ ಮೂರು ಕಡೆ, ಮುಂಬೈನಲ್ಲಿ ನಾಲ್ಕು ಹಾಗೂ ದೆಹಲಿಯಲ್ಲಿ ಎರಡು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನೀರವ್ ಮೋದಿ, ಪತ್ನಿ ಅಮಿ, ಸೋದರ ನಿಶ್ಚಲ್, ಪಾರ್ಟ್ನರ್ ಮೆಹುಲ್ ಚೌಕ್ಸಿ, ಡೈಮಂಡ್ಸ್ ಆರ್ ಯುಎಸ್, ಸೋಲಾರ್ ಎಕ್ಸ್ ಪೋರ್ಟ್ಸ್ ಹಾಗೂ ಸ್ಟೆಲ್ಲಾರ್ ಡೈಮಂಡ್ಸ್ ಸಂಸ್ಥೆ ಮೇಲೆ ಕೇಸು ದಾಖಲಾಗಿದೆ. ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಎಫ್ ಐಆರ್ ಹಾಕಿದೆ.

English summary
News has come in that billionaire jewellery designer Nirav Modi, accused in a ₹280 crore money laundering case following a complaint by Punjab National Bank, has fled the country. News18 reported that he has gone to Switzerland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X