ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂಸಿ ಬ್ಯಾಂಕ್ ಪ್ರಮುಖ ಆರೋಪಿಯ ಖಾಸಗಿ ವಿಮಾನ, 22 ರೂಮ್ ಬಂಗಲೆ...

|
Google Oneindia Kannada News

ಮುಂಬೈ, ಅಕ್ಟೋಬರ್ 8: ಪಂಜಾಬ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ನ ಸಾವಿರಾರು ಕೋಟಿ ರುಪಾಯಿಗಳ ವಂಚನೆ ಪ್ರಕರಣದ ಆರೋಪಿ ಸಾರಂಗ್ ವಾದ್ವಾನ್ ಗೆ ಸೇರಿದ ಆಸ್ತಿ ಜಪ್ತಿ ಪ್ರಕ್ರಿಯೆ ಮುಂದುವರಿದಿದೆ. ಆತನ ಐಷಾರಾಮಿ ಜೀವನದ ವೈಭೋಗ, ಬಂಗಲೆ, ಖಾಸಗಿ ವಿಮಾನಗಳು, ವಜ್ರ- ಚಿನ್ನಾಭರಣಗಳ ಭಂಡಾರ ಬಯಲಿಗೆ ಬಂದಿವೆ.

ಎಚ್ ಡಿಐಎಲ್ ನ ನಿರ್ದೇಶಕ ಸಾರಂಗ್ ಅಲಿಯಾಸ್ ಸನ್ನಿಗೆ ಸೇರಿದ ಮತ್ತೊಂದು ಖಾಸಗಿ ವಿಮಾನವನ್ನು ಸೋಮವಾರ ಜಪ್ತಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲ್, ಕಡಲ ತೀರ ಅಲಿಬಾಗ್ ನ ಬಂಗಲೆ ಜಪ್ತಿ ಮಾಡಿಕೊಳ್ಳಲು ಪ್ರಕ್ರಿಯೆ ನಡೆಯುತ್ತಿದೆ. ಬಾಲಿವುಡ್ ನಲ್ಲಿರುವ ತನ್ನ ಸ್ನೇಹ ವಲಯಕ್ಕೆ ಸಾರಂಗ್ ವಾದ್ವಾನ್ ಔತಣ ಕೂಟ ನೀಡುತ್ತಿದ್ದುದು ಇಲ್ಲೇ ಎಂದು ಮೂಲಗಳು ತಿಳಿಸಿವೆ.

ಪಿಎಂಸಿ ಬ್ಯಾಂಕ್ 4355 ಕೋಟಿ ಹಗರಣ; ಎಚ್ ಡಿಐಎಲ್ ನಿರ್ದೇಶಕರ ಬಂಧನಪಿಎಂಸಿ ಬ್ಯಾಂಕ್ 4355 ಕೋಟಿ ಹಗರಣ; ಎಚ್ ಡಿಐಎಲ್ ನಿರ್ದೇಶಕರ ಬಂಧನ

ಇನ್ನು ಔಡಿ ಕಾರು, ಟೆರೈನ್ ಮೋಟಾರ್ ಬೈಕ್ ಗಳು, ಸ್ಪೀಡ್ ಬೋಟ್, ಎರಡು ಗಾಲ್ಫ್ ಕಾರ್ಟ್ಸ್ ಬಂಗಲೆಯಲ್ಲಿ ಪತ್ತೆಯಾಗಿವೆ. ಇನ್ನು ಸಿನಿಮಾ ಜಗತ್ತಿನ ಸ್ನೇಹಿತರ ಜತೆಗೆ ಸಾರಂಗ್ ತೆಗೆಸಿಕೊಂಡಂಥ ರಾಶಿಗಟ್ಟಲೆ ಫೋಟೋಗ್ಳು ಸಹ ಬಂಗಲೆಯಲ್ಲಿ ಸಿಕ್ಕಿವೆ. ಕಳೆದ ವಾರವಷ್ಟೇ ಒಂಬತ್ತು ಸೀಟಿನ ವಿಮಾನವನ್ನು ವಶಕ್ಕೆ ಪಡೆಯಲಾಗಿತ್ತು. ಅದರ ಬಗ್ಗೆ ತನಿಖೆ ನಡೆಸುವ ವೇಳೆಯೇ ಎರಡನೇ ವಿಮಾನದ ಬಗ್ಗೆ ಮಾಹಿತಿ ದೊರೆತಿತ್ತು.

PMC Bank Scam: Prime Accused Sarang Private Chopper Attached

ಎರಡೂವರೆ ಎಕರೆಯಷ್ಟು ವಿಶಾಲ ಜಾಗದಲ್ಲಿ ಹಬ್ಬಿರುವ ಬಂಗಲೆಯಲ್ಲಿ ಇಪ್ಪತ್ತೆರಡು ಕೋಣೆಗಳಿವೆ. ಇನ್ನು ಸ್ಪೋರ್ಟ್ಸ್ ಬೈಕ್ ಗಳು, ಗಾಲ್ಫ್ ಕಾರ್ಟ್ಸ್ ಬಂಗಲೆ ಆವರಣದಲ್ಲೇ ಇದ್ದವು. ಅಷ್ಟೇ ಅಲ್ಲ, ಸ್ಪೀಡ್ ಬೋಟ್ ಕೂಡ ಬಂಗಲೆ ಸಮೀಪವೇ ಇತ್ತು ಎಂದು ಮೂಲಗಳು ತಿಳಿಸಿವೆ. ಇದೀಗ ಬಂಗಲೆ ನಿರ್ಮಾಣ ಕಾನೂನು ಬದ್ಧವಾಗಿದೆಯಾ ಎಂಬ ಬಗ್ಗೆ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಈಚೆಗೆ ಸಾರಂಗ್ ನ ಪತ್ನಿ ಅನು, ಆತನ ತಾಯಿಯನ್ನು ತನಿಖಾಧಿಕಾರಿಗಳು ಕಚೇರಿಗೆ ಕರೆಸಿ, ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಸಾರಂಗ್ ಮತ್ತು ಆತನ ಪತ್ನಿ ಅನು ಬಾಲಿವುಡ್ ಚಿತ್ರ ತಾರೆಯರಿಗೆ ನೀಡುತ್ತಿದ್ದ ಔತಣ ಕೂಟಗಳು ಬಹಳ ಹೆಸರಾಗಿದ್ದವು.

ಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIRಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIR

ಹದಿನೈದು ಕೋಟಿ ಬೆಲೆಯ ವಜ್ರದ ಉಂಗುರ ಒಳಗೊಂಡಂತೆ ಅರವತ್ತು ಕೋಟಿ ಮೌಲ್ಯದ ಆಭರಣ ಕಳೆದ ವಾರ ವಶಪಡಿಸಿಕೊಳ್ಳಲಾಗಿತ್ತು. ಅದನ್ನು ವಶಕ್ಕೆ ಪಡೆಯದಿರಲಿ ಎಂದು ಮುಂಜಾಗ್ರತೆಯಿಂದ ಸಂಬಂಧಿಗಳ ಮನೆಗೆ ಸಾಗಿಸಲಾಗಿತ್ತು. ಇದೀಗ ಸಾರಂಗ್ ವಾದ್ವಾನ್ ಗೆ ಸೇರಿದ ಇತರ ಚರಾಸ್ತಿಗಳನ್ನು ಹುಡುಕಾಡುತ್ತಿದ್ದಾರೆ.

English summary
Sarang Wadwan, HDIL director, prime accused of PMC bank scam. His private chopped attached by probe agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X