ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂಸಿ ಬ್ಯಾಂಕ್ 4355 ಕೋಟಿ ಹಗರಣ; ಎಚ್ ಡಿಐಎಲ್ ನಿರ್ದೇಶಕರ ಬಂಧನ

|
Google Oneindia Kannada News

ಮುಂಬೈ, ಅಕ್ಟೋಬರ್ 3: ಮುಂಬೈ ಪೊಲೀಸ್ ನ ಆರ್ಥಿಕ ಆಪರಾಧ ದಳವು ಗುರುವಾರ ಹೌಸಿಂಗ್ ಡೆವಲಪ್ ಮೆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್ ಡಿಐಲ್) ನಿರ್ದೇಶಕರನ್ನು ಬಂಧಿಸಿದೆ. ಸಾರಂಗ್ ವಾಧ್ವಾನ್, ರಾಕೇಶ್ ವಾಧ್ವಾನ್ ಬಂಧಿತರು. ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ (ಪಿಎಂಸಿ)ನಿಂದ ಸಾಲ ಪಡೆದಿದ್ದ ಇವರು, ಮರು ಪಾವತಿ ಮಾಡಿರಲಿಲ್ಲ.

ಇಬ್ಬರನ್ನು ಗುರುವಾರ ವಿಚಾರಣೆಗಾಗಿ ಕರೆಸಲಾಗಿತ್ತು. ವಿಚಾರಣೆಗೆ ಅವರು ಸಹಕರಿಸದ ಕಾರಣ ಬಂಧಿಸಲಾಯಿತು. ಪಿಎಂಸಿ ಬ್ಯಾಂಕ್ ನ ಇಂದಿನ ಸ್ಥಿತಿಗೆ ಕಾರಣವಾಗಿರುವ ನಲವತ್ನಾಲ್ಕು ಖಾತೆಯಲ್ಲಿ ಹತ್ತು ಖಾತೆ ಎಚ್ ಡಿಐಎಲ್ ಜತೆಗೆ ತಳುಕು ಹಾಕಿಕೊಂಡಿದೆ. ಈ ಹತ್ತು ಖಾತೆಯಲ್ಲಿ ಸಾರಂಗ್ ಹಾಗೂ ರಾಕೇಶ್ ದು ಕೂಡ ಇದೆ.

ಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIRಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIR

ಸೆಪ್ಟೆಂಬರ್ ಮೂವತ್ತನೇ ತಾರೀಕು ಮುಂಬೈನ ಆರ್ಥಿಕ ಅಪರಾಧ ದಳದಿಂದ ಎಚ್ ಡಿಐಎಲ್ ನ ಹಿರಿಯ ಅಧಿಕಾರಿಗಳು ಹಾಗೂ ಪಿಎಂಸಿ ಬ್ಯಾಂಕ್ ನಲ್ಲಿ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ದೂರು ದಾಖಲಾಗಿತ್ತು. ಬ್ಯಾಂಕ್ ನಲ್ಲಿ ಒಟ್ಟಾರೆ 4355 ಕೋಟಿ ರುಪಾಯಿ ವಂಚನೆ ಆಗಿದೆ.

PMC Bank

ಪಿಎಂಸಿ ಬ್ಯಾಂಕ್ ನಲ್ಲಿ ವಂಚನೆ ನಡೆದಿರುವುದು ಪತ್ತೆಯಾದ ಮೇಲೆ ಗ್ರಾಹಕರಿಗೆ ಹಣ ವಿಥ್ ಡ್ರಾ ಮಾಡಲು ಮಿತಿ ಹೇರಲಾಗಿದೆ.

English summary
Mumbai economic offence wing police arrested HDIL 2 directors on Thursday in PMC bank scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X