ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಂಸಿ ಬ್ಯಾಂಕ್ ಗೆ 4355 ಕೋಟಿ ನಷ್ಟ; ಮುಂಬೈ ಪೊಲೀಸರಿಂದ FIR

|
Google Oneindia Kannada News

ಮುಂಬೈ, ಸೆಪ್ಟೆಂಬರ್ 30: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ ನ ಈ ಹಿಂದಿನ ಆಡಳಿತ ಮಂಡಳಿ ಹಾಗೂ ಎಚ್ ಡಿಐಎಲ್ ನ ಪ್ರವರ್ತಕರ ವಿರುದ್ದ ಪಿಎಂಸಿ ಕೋ ಆಪರೇಟಿವ್ ಬ್ಯಾಂಕ್ ಪ್ರಕರಣದಲ್ಲಿ ಸೋಮವಾರ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಶೇಷ ತನಿಖಾ ತಂಡವು ಈ ಬಗ್ಗೆ ತನಿಖೆ ನಡೆಸಲಿದೆ.

ಆರ್ ಬಿಐ ನೇಮಿಸಿದ್ದ ಆಡಳಿತಗಾರ ದಾಖಲಿಸಿದ ದೂರಿನ ಆಧಾರದಲ್ಲಿ ಮುಂಬೈ ನಗರ ಪೊಲೀಸ್ ಆರ್ಥಿಕ ಅಪರಾಧ ದಳದಿಂದ ಎಫ್ ಐಆರ್ ದಾಖಲಿಸಲಾಗಿದೆ. ಫೋರ್ಜರಿ, ವಂಚನೆ ಹಾಗೂ ಕ್ರಿಮಿನಲ್ ಪಿತೂರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಹನ್ನೊಂದು ವರ್ಷದಿಂದ ಈಚೆಗೆ ಬ್ಯಾಂಕ್ ಗೆ 4355.33 ಕೋಟಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

99 ಲಕ್ಷ ಹಣದೊಂದಿಗೆ ಎಟಿಎಂಗೆ ವಾಹನದ ಚಾಲಕ ಪರಾರಿ99 ಲಕ್ಷ ಹಣದೊಂದಿಗೆ ಎಟಿಎಂಗೆ ವಾಹನದ ಚಾಲಕ ಪರಾರಿ

ಬ್ಯಾಂಕ್ ನ ಮಾಜಿ ಅಧ್ಯಕ್ಷ ವರ್ಯಾಮ್ ಸಿಂಗ್, ಕಾರ್ಯನಿರ್ವಾಹಕ ನಿರ್ದೇಶಕ ಜಾಯ್ ಥಾಮಸ್ ಮತ್ತು ಇತರ ಹಿರಿಯ ಅಧಿಕಾರಿಗಳು, ಎಚ್ ಡಿಐಎಲ್ ನ ನಿರ್ದೇಶಕರು ವಾಧ್ವಾನ್ ನನ್ನು ಎಫ್ ಐಆರ್ ನಲ್ಲಿ ಹೆಸರಿಸಲಾಗಿದೆ. ಬ್ಯಾಂಕ್ ನ ಭಂಡುಪ್ ಶಾಖೆಯಲ್ಲಿ ಸಾಲ ಪಡೆದು, ವಂಚಿಸಲಾಗಿದೆ. ಇದಕ್ಕಾಗಿ ಎಚ್ ಡಿಐಎಲ್ ನ ಪ್ರವರ್ತಕರ ಜತೆ ಬ್ಯಾಂಕ್ ನ ಆಡಳಿತ ಮಂಡಳಿ ಕೈ ಜೋಡಿಸಿದೆ ಎಂಬ ಆರೋಪ ಇದೆ.

PMC Bank Loss Pegged To 4300 Crore; FIR By Mumbai Police

ಸಾಲ ಮರುಪಾವತಿ ಆಗದಿದ್ದಾಗಲೂ ಬ್ಯಾಂಕ್ ನ ಆಡಳಿತ ಮಂಡಳಿಯು ಅದನ್ನು ಎನ್ ಪಿಎ ಎಂದು ತೋರಿಸಿಲ್ಲ. ಆ ಮೂಲಕ ಆರ್ ಬಿಐನಿಂದಲೂ ಮುಚ್ಚಿಡಲಾಗಿದೆ. ಜತೆಗೆ ಅಸ್ತಿತ್ವದಲ್ಲೇ ಇಲ್ಲದ ಕಂಪೆನಿಗಳ ಹೆಸರಿನಲ್ಲಿ ಸಣ್ಣ ಮೊತ್ತದ ಸಾಲಗಳನ್ನು ಪಡೆದಂತೆ ತೋರಿಸಲಾಗಿದೆ.

ಪಿಎಂಸಿ ಬ್ಯಾಂಕ್ ಗೆ 137 ಶಾಖೆ ಇದ್ದು, 11 ಸಾವಿರ ಕೋಟಿ ಠೇವಣಿ ಇದೆ. ಬ್ಯಾಂಕ್ ನಲ್ಲಿ ಅವ್ಯವಹಾರ ಕಂಡುಬಂದ ಮೇಲೆ ಕಳೆದ ವಾರದಿಂದ ಕೆಲ ನಿರ್ಬಂಧಗಳನ್ನು ಹೇರಲಾಗಿದೆ.

English summary
Punjab and Maharashtra co operative bank loss pegged to 4355.33 crores. Mumbai police registered FIR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X