ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು: ಛತ್ರಪತಿ ಶಿವಾಜಿ ಸ್ಮಾರಕಕ್ಕೆ ಮೋದಿಯಿಂದ ಶಂಕುಸ್ಥಾಪನೆ

ಮಹಾರಾಷ್ಟ್ರ ಪ್ರವಾಸ ನಿರತ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಶಿಲಾಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

By Mahesh
|
Google Oneindia Kannada News

ಮುಂಬೈ, ಡಿಸೆಂಬರ್ 24: ಮಹಾರಾಷ್ಟ್ರ ಪ್ರವಾಸ ನಿರತ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಛತ್ರಪತಿ ಶಿವಾಜಿ ಮಹಾರಾಜರ ಶಿಲಾಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಅರಬ್ಬೀಸಮುದ್ರದ ಬಳಿ ನಿರ್ಮಾಣವಾಗಲಿರುವ ಸುಮಾರು 192 ಮೀಟರ್ ಎತ್ತರದ 3,600 ಕೋಟಿ ವೆಚ್ಚದ ಈ ಸ್ಮಾರಕ, ಬಿಜೆಪಿ ಸರ್ಕಾರದ ಕನಸಾಗಿದೆ.

ಜಗತ್ತಿನ ಅತಿ ಎತ್ತರದ ಪ್ರತಿಮೆಗಳ ಸಾಲಿಗೆ ಸೇರಲಿರುವ ಈ ಸ್ಮಾರಕ ನಿರ್ಮಾಣಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.

ಈ ಸ್ಮಾರಕ ನಿರ್ಮಾಣ ಸಾಧ್ಯವಾಗುವಂತೆ ಮಾಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹೂವರ್ ಕ್ರಾಫ್ಟ್ ಮೂಲಕ ಅರಬ್ಬೀ ಸಮುದ್ರದಲ್ಲಿ ಜಲಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಭೂಮಿ ಪೂಜೆ ಮಾಡಲಾಗಿತ್ತು. ಜಲಪೂಜೆ ನೆರವೇರಿಸಿದ ಬಳಿಕ ಮೋದಿ ಅವರೊಂದಿಗೆ ನೌಕಾಸಿಬ್ಬಂದಿ ಜತೆ ಸೆಲ್ಪಿ ತೆಗೆದುಕೊಂಡಿದ್ದು ವಿಶೇಷ.

ಶಿಲಾಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ

ಶಿಲಾಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ

ಅರಬ್ಬೀಸಮುದ್ರದ ಬಳಿ ನಿರ್ಮಾಣವಾಗಲಿರುವ ಸುಮಾರು 192 ಮೀಟರ್ ಎತ್ತರದ 3,600 ಕೋಟಿ ವೆಚ್ಚದ ಈ ಸ್ಮಾರಕ, ಬಿಜೆಪಿ ಸರ್ಕಾರದ ಕನಸಾಗಿದೆ. ಜಗತ್ತಿನ ಅತಿ ಎತ್ತರದ ಪ್ರತಿಮೆಗಳ ಸಾಲಿಗೆ ಸೇರಲಿರುವ ಈ ಸ್ಮಾರಕ ನಿರ್ಮಾಣಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.

ಜಲಪೂಜೆ, ಭೂಮಿ ಪೂಜೆ

ಜಲಪೂಜೆ, ಭೂಮಿ ಪೂಜೆ

ಪ್ರಧಾನಿ ಮೋದಿ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹೂವರ್ ಕ್ರಾಫ್ಟ್ ಮೂಲಕ ಅರಬ್ಬೀ ಸಮುದ್ರದಲ್ಲಿ ಜಲಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಭೂಮಿ ಪೂಜೆ ಮಾಡಲಾಗಿತ್ತು. ಜಲಪೂಜೆ ನೆರವೇರಿಸಿದ ಬಳಿಕ ಮೋದಿ ಅವರೊಂದಿಗೆ ನೌಕಾಸಿಬ್ಬಂದಿ ಜತೆ ಸೆಲ್ಪಿ ತೆಗೆದುಕೊಂಡಿದ್ದು ವಿಶೇಷ.

ಮಹಾರಾಷ್ಟ್ರದಲ್ಲಿ ವಿವಿಧ ಕಾಮಗಾರಿಗೆ ಚಾಲನೆ

ಮಹಾರಾಷ್ಟ್ರದಲ್ಲಿ ವಿವಿಧ ಕಾಮಗಾರಿಗೆ ಚಾಲನೆ

ಮುಂಬೈಗೆ ಶನಿವಾರ ಆಗಮಿಸಿರುವ ಮೋದಿ ಅವರು ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಪಾತಳ್ಗಂಗಾದಲ್ಲಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮ್ಯಾನೇಜ್ಮೆಂಟ್ ನೂತನವಾಗಿ ನಿರ್ಮಿಸಿದ ಕ್ಯಾಂಪಸ್‍ ಕೂಡಾ ಉದ್ಘಾಟನೆ, ಮುಂಬೈ - ಪುಣೆ ಮೆಟ್ರೋ ರೈಲು ಮಾರ್ಗ ಶಂಕುಸ್ಥಾಪನೆ ಪ್ರಮುಖವಾಗಿದೆ

ಚುನಾವಣೆಗೂ ಮುನ್ನ ಸ್ಮಾರಕಕ್ಕೆ ಶಂಕುಸ್ಥಾಪನೆ

ಚುನಾವಣೆಗೂ ಮುನ್ನ ಸ್ಮಾರಕಕ್ಕೆ ಶಂಕುಸ್ಥಾಪನೆ

ಕೆಲವೇ ತಿಂಗಳುಗಳಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮೋದಿ ಅವರ ಮುಂಬೈ ಭೇಟಿಗೆ ರಾಜಕೀಯ ಮಹತ್ವ ಲಭಿಸಿದೆ. ಬಾಂದ್ರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿ ಭಾಷಣವಿದೆ.

ಅತ್ಯಂತ ಎತ್ತರದ ಸ್ಮಾರಕ

ಶಿವ ಸ್ಮಾರಕವು ರಾಷ್ಟ್ರದಲ್ಲಷ್ಟೇ ಅಲ್ಲ ವಿಶ್ವದಲ್ಲೇ ಅತ್ಯಂತ ಎತ್ತರದ ಸ್ಮಾರಕವಾಗಲಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಭೂಮಿ ಹಾಗೂ ಜಲಪೂಜೆ ನೆರವೇರಿಸಿದ ಮೋದಿ

ಸ್ಮಾರಕ ನಿರ್ಮಾಣಕ್ಕಾಗಿ ಭೂಮಿ ಹಾಗೂ ಜಲಪೂಜೆ ನೆರವೇರಿಸಿದ ಮೋದಿ. ಶಿವಾಜಿ ಮಹಾರಾಜರಿಗೆ ಸಂಬಂಧಪಟ್ಟ ಸ್ಥಳಗಳಿಂದ ಮಣ್ಣು ಹಾಗೂ ನೀರು ಸಂಗ್ರಹಿಸಿ ಈ ಪೂಜೆಯಲ್ಲಿ ಬಳಸಲಾಗಿದೆ.

ಕಲಶ ಹಸ್ತಾಂತರಿಸಿದ ಫಡ್ನವೀಸ್

ವಿವಿಧ ಪುಣ್ಯಸ್ಥಳಗಳಿಂದ ಸಂಗ್ರಹಿಸಿದ ಮಣ್ಣು ಹಾಗೂ ನೀರುಳ್ಳ ಕಲಶವನ್ನು ಮೋದಿ ಅವರಿಗೆ ಹಸ್ತಾಂತರಿಸಿದ ಫಡ್ನವೀಸ್

English summary
Prime Minister Narendra Modi laid the foundation stone for the grand memorial of Chhatrapati Shivaji Maharaj on board a hovercraft in the Arabian Sea off Mumbai coast on Saturday(December 24).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X