ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿಗೆ ತಲೆಬಾಗಿ ನಮಸ್ಕರಿಸಿದ ವ್ಯಕ್ತಿ; ಭಾವುಕ ಚಿತ್ರಕ್ಕೆ ಮೆಚ್ಚುಗೆ ಮಹಾಪೂರ

|
Google Oneindia Kannada News

ಮುಂಬೈ, ಫೆಬ್ರುವರಿ 03: ಮುಂಬೈ ಜೀವನಾಡಿ ಎಂದೇ ಕರೆಸಿಕೊಂಡಿರುವ ಸ್ಥಳೀಯ ರೈಲುಗಳು ಸುಮಾರು ಹತ್ತು ತಿಂಗಳ ನಂತರ ಸಂಚಾರ ಆರಂಭಿಸಿವೆ. ನಗರದ ಈ ಮೂಲೆಯಿಂದ ಆ ಮೂಲೆಗೆ ಲಕ್ಷಾಂತರ ಜನರನ್ನು ದಿನನಿತ್ಯ ಸಾಗಿಸುವ ಈ ರೈಲುಗಳು ಜನರ ಜೀವನದ ಒಂದು ಅವಿಭಾಜ್ಯ ಭಾಗವೇ ಆಗಿ ಹೋಗಿದೆ. ಈ ಒಂದು ಭಾವವನ್ನೇ ಪ್ರತಿಬಿಂಬಿಸಿರುವ ಫೋಟೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಂಬೈನಲ್ಲಿ ಹತ್ತು ತಿಂಗಳ ನಂತರ ಫೆಬ್ರುವರಿ 1ರಿಂದ ರೈಲು ಸಂಚಾರ ಆರಂಭಗೊಂಡಿದ್ದು, ರೈಲು ಸಂಚಾರ ಆರಂಭಗೊಂಡ ಮೊದಲ ದಿನ ರೈಲು ಪ್ರಯಾಣಿಕರೊಬ್ಬರು ರೈಲಿಗೆ ತಲೆ ಬಾಗಿ ನಮಸ್ಕರಿಸಿದ್ದಾರೆ. ಈ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಮುಂದೆ ಓದಿ...

ಕಳೆದ ಮಾರ್ಚ್ ನಲ್ಲಿ ಬಂದ್ ಆಗಿದ್ದ ರೈಲು ಸಂಚಾರ

ಕಳೆದ ಮಾರ್ಚ್ ನಲ್ಲಿ ಬಂದ್ ಆಗಿದ್ದ ರೈಲು ಸಂಚಾರ

ಕೊರೊನಾ ಸೋಂಕು ಪತ್ತೆಯಾದ ನಂತರ ಮುಂಬೈನ ಉಪನಗರ ರೈಲುಗಳ ಸಂಚಾರಕ್ಕೆ ಬ್ರೇಕ್ ಹಾಕಲಾಯಿತು. ಕೊರೊನಾ ಸೋಂಕು ಹರಡುತ್ತಿದ್ದಂತೆ ರೈಲುಗಳ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಯಿತು. ಮಾರ್ಚ್ 22ರಂದು ರೈಲು ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ದಶಕದಲ್ಲಿ ಇದೇ ಮೊದಲ ಬಾರಿಗೆ ರೈಲು ಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು.

ಮುಂಬೈ: ಫೆ.1ರಿಂದ ಸ್ಥಳೀಯ ರೈಲುಗಳ ಸಂಚಾರ ಶುರುಮುಂಬೈ: ಫೆ.1ರಿಂದ ಸ್ಥಳೀಯ ರೈಲುಗಳ ಸಂಚಾರ ಶುರು

1974ರಲ್ಲಿಯೂ ಒಮ್ಮೆ ನಿರ್ಬಂಧ ಹೇರಲಾಗಿತ್ತು

1974ರಲ್ಲಿಯೂ ಒಮ್ಮೆ ನಿರ್ಬಂಧ ಹೇರಲಾಗಿತ್ತು

1974ರಲ್ಲಿ ಒಮ್ಮೆ ರೈಲಿನ ಓಡಾಟದ ಮೇಲೆ ನಿರ್ಬಂಧ ಹೇರಲಾಗಿತ್ತು. ಟ್ರೇಡ್ ಯೂನಿಯನ್ ಪ್ರತಿಭಟನೆ ಕಾರಣವಾಗಿ ಇಪ್ಪತ್ತು ದಿನಗಳ ಅವಧಿ ರೈಲು ಓಡಾಟವನ್ನು ನಿಲ್ಲಿಸಲಾಗಿತ್ತು. ಕಳೆದ ವರ್ಷ ಕೊರೊನಾ ಸೋಂಕಿನ ಕಾರಣದಿಂದಾಗಿ ದೀರ್ಘಾವಧಿಯಲ್ಲಿ ರೈಲು ಸಂಚಾರಕ್ಕೆ ಬ್ರೇಕ್ ಹಾಕಲಾಯಿತು. ನಿತ್ಯ ಲಕ್ಷಾಂತರ ಮಂದಿ ರೈಲು ಸಂಚಾರ ನಡೆಸುವ ಕಾರಣ ಸೋಂಕಿನ ಭೀತಿಯಿಂದ ನಿರ್ಬಂಧ ಹೇರಲಾಗಿತ್ತು.

ವೈರಲ್ ಆಯಿತು ರೈಲಿಗೆ ನಮಸ್ಕರಿಸುವ ಈ ಚಿತ್ರ

ವೈರಲ್ ಆಯಿತು ರೈಲಿಗೆ ನಮಸ್ಕರಿಸುವ ಈ ಚಿತ್ರ

ಸುಮಾರು ಹತ್ತು ತಿಂಗಳ ನಂತರ ಮುಂಬೈನಲ್ಲಿ ರೈಲು ಸೇವೆ ಪುನರಾರಂಭಿಸಲಾಗಿದ್ದು, ರೈಲು ಆರಂಭವಾದ ಮೊದಲ ದಿನ ವ್ಯಕ್ತಿಯೊಬ್ಬರು ರೈಲಿಗೆ ನಮಸ್ಕರಿಸಿ ಪ್ರಯಾಣ ಆರಂಭಿಸಿದ್ದಾರೆ. ಈ ಫೋಟೊ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಹಲವರು ಈ ಫೋಟೊವನ್ನು ಮೆಚ್ಚಿಕೊಂಡಿದ್ದಾರೆ. ಈ ಚಿತ್ರವನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ನಲ್ಲಿ ತೆಗೆದುಕೊಂಡಿರುವುದಾಗಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಬೆಂಗಳೂರು ಅಶೋಕ್ ಕುಮಾರ್ ವರ್ಮಾ ತಿಳಿಸಿದ್ದು, ಫೋಟೊ ಹಂಚಿಕೊಂಡಿದ್ದಾರೆ.

ಬಜೆಟ್ 2021: ರೈಲ್ವೆ ವಲಯದ ಅಭಿವೃದ್ಧಿಗೆ 110,055 ಕೋಟಿ ರೂಬಜೆಟ್ 2021: ರೈಲ್ವೆ ವಲಯದ ಅಭಿವೃದ್ಧಿಗೆ 110,055 ಕೋಟಿ ರೂ

ಮೆಚ್ಚುಗೆ ಸೂಚಿಸಿದ ಆನಂದ್ ಮಹೀಂದ್ರಾ

ಮುಂಬೈ ಮೂಲದ ಉದ್ಯಮಿ ಆನಂದ್ ಮಹೀಂದ್ರ ಕೂಡ ಈ ಫೋಟೊವನ್ನು ಹಂಚಿಕೊಂಡಿದ್ದು, "ಭಾರತದ ಆತ್ಮ... ಇದನ್ನು ಎಂದಿಗೂ ಕಳೆದುಕೊಳ್ಳಲಿರಲೆಂದು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. "ಮುಂಬೈನವರಿಗೆ ಮಾತ್ರ ಈ ಚಿತ್ರದ ಸೌಂದರ್ಯ ಅರ್ಥವಾಗುತ್ತದೆ" ಎಂದು ಲೇಖಕ ದೇವದತ್ತ ಪಟ್ನಾಯಕ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಮುಂಬೈನ ಈ ರೈಲುಗಳು ಸ್ಥಳೀಯರಿಗೆ ದೇವರಂತೆಯೇ ಸರಿ ಎಂದು ಇನ್ನೂ ಕೆಲವರು ಟ್ವೀಟ್ ಮಾಡಿದ್ದಾರೆ.

English summary
Photograph of man bowing down before a train as services resumed after months on February 1 in mumbai goes viral
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X