• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಗಳಲ್ಲಿ : ಮುಂಡೆಗೆ ಮೋದಿ ಸೇರಿದಂತೆ ಗಣ್ಯರ ನಮನ

By Mahesh
|

ಮುಂಬೈ, ಜೂ.3: ರೈತರು, ಬಡವರು, ಶೋಷಿತ ವರ್ಗದ ದನಿಯಾಗಿದ್ದ ಬಿಜೆಪಿ ಮುಖಂಡ ಗೋಪಿನಾಥ್ ಪಾಂಡುರಂಗ ಮುಂಡೆ ಅವರ ದುರಂತ ಸಾವಿಗೆ ದೇಶದೆಲ್ಲೆಡೆಯಿಂದ ಸಂತಾಪ ಸಂದೇಶಗಳು ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು ಮುಂಡೆ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹರೀಶ್ ರಾವತ್ ಅವರು ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿ ಅಗಲಿದ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದರು. ಸುಷ್ಮಾ ಸ್ವರಾಜ್ ಹಾಗೂ ಸ್ಮೃತಿ ಇರಾನಿ ಅವರು ಮುಂಡೆ ಅವರ ಕುಟುಂಬದವರನ್ನು ಸಮಾಧಾನ ಪಡಿಸುವ ದೃಶ್ಯ ಮನಕಲಕುವಂತ್ತಿತ್ತು.

ಮುಂಡೆ ಅವರ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ರಾಜನಾಥ್‌ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.[ಅಕಾಲಿಕ ಸಾವು ಕಂಡ ರಾಜಕಾರಣಿಗಳು]

ಸಂಸದರಾದ ಹರ್ಷವರ್ಧನ್, ಉಮಾಭಾರತಿ, ವೆಂಕಯ್ಯನಾಯ್ಡು, ನಿತಿನ್ ಗಡ್ಕರಿ, ಅನಂತಕುಮಾರ್, ಜಗದೀಶ್ ಶೆಟ್ಟರ್, ಮಾಜಿ ಪ್ರಧಾನಿಗಳಾದ ಡಾ.ಮನಮೋಹನ್‌ಸಿಂಗ್, ಎಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಸೇರಿದಂತೆ ಅನೇಕರು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ. ಗೋಪಿನಾಥ್ ಮುಂಡೆ ಅಂತಿಮ ದರ್ಶನದ ಚಿತ್ರಗಳು, ಟ್ವೀಟ್ ನಲ್ಲಿ ಬಂದಿರುವ ಶ್ರದ್ಧಾಂಜಲಿ ಚಿತ್ರಗಳು ಇಲ್ಲಿವೆ

ಪ್ರಧಾನಿ ಮೋದಿ ಅವರಿಂದ ಅಂತಿಮ ನಮನ

ಪ್ರಧಾನಿ ಮೋದಿ ಅವರಿಂದ ಅಂತಿಮ ನಮನ

ಮಹಾರಾಷ್ಟ್ರದ ವಂಜಾರಿ ಎಂಬ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಗೋಪಿನಾಥ್ ಮುಂಡೆ ಅವರು ಪತ್ನಿ, ಮೂವರು ಸಹೋದರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರನ್ನು ಬಿಟ್ಟು ಅಗಲಿದ್ದಾರೆ.

ಅಡ್ವಾಣಿ ಹಾಗೂ ಮೋದಿ ಅವರಿಂದ ಕಂಬನಿ

ಅಡ್ವಾಣಿ ಹಾಗೂ ಮೋದಿ ಅವರಿಂದ ಕಂಬನಿ

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಹಿರಿಯ ನಾಯಕರಿಂದ ಹಿಡಿದು ಕಾರ್ಯಕರ್ತರ ತನಕ ಎಲ್ಲರ ಮುಖದಲ್ಲಿ ಸೂತಕದ ಛಾಯೆ ಎದ್ದು ಕಾಣುತ್ತಿತ್ತು.

ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರ

ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರ

ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಗೋಪಿನಾಥ್ ಮುಂಡೆ ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಇಂದು ಅವರ ಸ್ವ ಕ್ಷೇತ್ರದಲ್ಲಿ ಸಚಿವರಾದ ಕಾರಣ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ರೋದಿಸುತ್ತಿರುವ ಬೀಡ್ ಕ್ಷೇತ್ರದ ಅಭಿಮಾನಿಗಳು

ಮಹಾರಾಷ್ಟ್ರದ ಮೂವರು ದಿಗ್ಗಜರು

ಮಹಾರಾಷ್ಟ್ರ ಮೂವರು ದಿಗ್ಗಜರನ್ನು ಕಳೆದುಕೊಂಡು ಬಡವಾಗಿದೆ ಎಂಬ ಟಾಪ್ ಟ್ವೀಟ್ ಹಾಗೂ ಚಿತ್ರ

ಮೋಹನ್ ಭಾಗ್ವತ್ ಅವರಿಂದ ಅಂತಿಮ ನಮನ

ಮೋಹನ್ ಭಾಗ್ವತ್ ಅವರಿಂದ ಅಂತಿಮ ನಮನ

ಆರೆಸ್ಸೆಸ್ ಮುಖ್ಯತಸ್ಥ ಮೋಹನ್ ಭಾಗ್ವತ್ ಅವರಿಂದ ಮುಂದೆ ಪಾರ್ಥೀವ ಶರೀರಕ್ಕೆ ಅಂತಿಮ ನಮನ

ಮುಂಡೆ ಪುತ್ರಿ ಸಂತೈಸುತ್ತಿರುವ ಸ್ಮೃತಿ ಇರಾನಿ

ಮುಂಡೆ ಪುತ್ರಿ ಸಂತೈಸುತ್ತಿರುವ ಸ್ಮೃತಿ ಇರಾನಿ

ಮುಂಡೆ ಪುತ್ರಿ ಸಂತೈಸುತ್ತಿರುವ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ

ಅಟಲ್ ಅವರ ಪರವಾಗಿ ವೆಂಕಯ್ಯ ನಾಯ್ಡು

ಅಟಲ್ ಅವರ ಪರವಾಗಿ ವೆಂಕಯ್ಯ ನಾಯ್ಡು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪರವಾಗಿ ಹೂಗುಚ್ಛ ಅರ್ಪಿಸಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು

ಬಿಜೆಪಿ ಹಿರಿಯ ನಾಯಕರಿಂದ ನಮನ

ಬಿಜೆಪಿ ಹಿರಿಯ ನಾಯಕರಿಂದ ನಮನ

ಬಿಜೆಪಿ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮುಖಂಡ ಭೈಯಾಜಿ ಜೋಶಿ ಅವರಿಂದ ಅಂತಿಮ ನಮನ.

ನವದೆಹಲಿಯಲ್ಲಿ ಮುಂಡೆ ಅಂತಿಮ ಯಾತ್ರೆ

ನವದೆಹಲಿಯಲ್ಲಿ ಮುಂಡೆ ಅಂತಿಮ ಯಾತ್ರೆ

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಮುಂಡೆ ಅವರ ಪಾರ್ಥೀವ ಶರೀರ ಕರೆ ತರುವಾಗಿನ ದೃಶ್ಯ. PTI Photo by Atul Yadav

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹರೀಶ್ ರಾವತ್ ಅವರು ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿ ಅಗಲಿದ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದರು. PTI Photo by Atul Yadav

ಅಪಘಾತ ನಡೆದ ರಸ್ತೆ ಹಾಗೂ ಘಟನಾ ಸ್ಥಳ

ಅಪಘಾತ ನಡೆದ ರಸ್ತೆ ಹಾಗೂ ಘಟನಾ ಸ್ಥಳ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಮಹಾರಾಷ್ಟ್ರದ ಪ್ರಭಾವಿ ಬಿಜೆಪಿ ಮುಖಂಡ ಗೋಪಿನಾಥ್ ಮುಂಡೆ ಅವರಿದ್ದ ಕಾರು ದೆಹಲಿಯ ಪೃಥ್ವಿರಾಜ್ ಮತ್ತು ತುಘಲಕ್ ರಸ್ತೆ ನಡುವೆ ಮಂಗಳವಾರ ಮುಂಜಾನೆ ಅಪಘಾತಕ್ಕೀಡಾಗಿತ್ತು. PTI Photo by Vijay Verma

ಮುಂಡೆ ಅವರ ಕಾರಿಗೆ ಗುದ್ದಿದ ಕಾರು

ಮುಂಡೆ ಅವರ ಕಾರಿಗೆ ಗುದ್ದಿದ ಕಾರು

ಗೋಪಿನಾಥ್ ಮುಂಡೆ ಅವರ ಕಾರಿಗೆ ಹಿಂಬದಿಯಿಂದ ಗುದ್ದಿದ ಇಂಡಿಕಾ ಕಾರು ಈಗ ತುಘಲಕ್ ರಸ್ತೆ ಪೊಲೀಸ್ ಠಾಣೆ ಬಳಿ ನಿಲ್ಲಿಸಲಾಗಿದೆ. PTI Photo by Vijay Verma

ಟ್ವಿಟ್ಟರ್ ನಿಂದ ಬಂದ ಅಂತಿಯ ಯಾತ್ರೆ ಚಿತ್ರ

ಟ್ವಿಟ್ಟರ್ ನಿಂದ ಬಂದ ಗೋಪಿನಾಥ್ ಮುಂಡೆ ಅವರ ಅಂತಿಯ ಯಾತ್ರೆ ಚಿತ್ರ

ಸ್ಮೃತಿ ಇರಾನಿ ಹಾಗೂ ಮುಂಡೆ ಪುತ್ರಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮುಂಡೆ ಪುತ್ರಿ, ಶಾಸಕಿ ಪಂಕಜ ಅವರ ಜತೆ

ಬಿಜೆಪಿ ಹಿರಿಯ ನಾಯಕರಿಂದ ನಮನ

ಬಿಜೆಪಿ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು ಅವರಿಂದ ಅಂತಿಮ ನಮನ

ಎಲ್ಕೆ ಅಡ್ವಾಣಿ ಅವರಿಂದ ಅಂತಿಮ ನಮನ

ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರಿಂದ ಅಂತಿಮ ನಮನ

ದಲಿತ ಮುಖಂಡರಿಂದ ದಲಿತ ನಾಯಕನಿಗೆ ನಮನ

ದಲಿತ ಮುಖಂಡರಾದ ಪಿಎ ಸಂಗ್ಮಾ, ರಾಮ್ ವಿಲಾಸ್ ಪಾಸ್ವಾನ್ ಅವರಿಂದ ದಲಿತ ನಾಯಕ ಮುಂಡೆಗೆ ನಮನ

ಮೋದಿ ಅವರಿಂದ ಅಂತಿಮ ನಮನ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಂತಿಮ ನಮನ

ಮುಂಡೆಗೆ ಹಮೀದ್ ಅನ್ಸಾರಿ ನಮನ

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಂದ ಮುಂಡೆಗೆ ಅಂತಿಮ ನಮನ.

ರಾಹುಲ್ ಗಾಂಧಿ ಅವರಿಂದ ಅಂತಿಮ ನಮನ

ರಾಹುಲ್ ಗಾಂಧಿ, ಹರೀಶ್ ರಾವತ್ ಅವರಿಂದ ಅಂತಿಮ ನಮನ. ವೆಂಕಯ್ಯ ನಾಯ್ಡು ಅವರನ್ನು ಕಾಣಬಹುದು

ಸಂಸದೆ ಹರ್ಸಿಮ್ರಿತ್ ಕೌರ್

ಸಂಸದೆ ಹರ್ಸಿಮ್ರಿತ್ ಕೌರ್ ಬಾದಲ್ ಅವರಿಂದ ಅಂತಿಮ ನಮನ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In Pictures : Narendra Modi, others pays homage to Gopinath Munde. Not only Narendra Modi, but top politicians from the opposition too were shocked at the great loss. In fact, Rahul Gandhi and Harish Rawat came calling at the BJP HQs to pay their respects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more