• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ ಠಾಕ್ರೆ ಪುತ್ರ ಅಮಿತ್ ಮದುವೆ ಮನೆಯಲ್ಲಿ ತಾರೆಗಳ ತೋಟ

|

ಮುಂಬೈ, ಜನವರಿ 28: ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಮರಾಠಿ ನಾಯಕ ರಾಜ್ ಠಾಕ್ರೆ ಅವರ ಪುತ್ರ ಅಮಿತ್ ಠಾಕ್ರೆ ಅವರ ಮದುವೆ ಆರತಕ್ಷತೆ ಸಮಾರಂಭವು ಬಾಲಿವುಡ್ ತಾರೆಗಳ ತೋಟವಾಗಿ ಮಾರ್ಪಟ್ಟಿತ್ತು. ಬಾಲ್ಯದ ಗೆಳತಿ ಮಿಥಾಲಿ ಬೊರುಡೆ ಅವರನ್ನು ಮಹಾರಾಷ್ಟ್ರ ಸಂಪ್ರದಾಯದಂತೆ ಅಮಿತ್ ಠಾಕ್ರೆ ವರಿಸಿದರು.

ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಅವರು ಭಾನುವಾರದಂದು ಮುಂಬೈನ ಪಾರೇಲ್ ಪ್ರದೇಶದಲ್ಲಿನ ಫೈವ್ ಸ್ಟಾರ್ ಹೋಟೆಲ್ ವೊಂದರಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದರು. ಬಾಲಿವುಡ್ ಸ್ಟಾರ್ ನಟ, ನಟಿಯರು, ರಾಜಕೀಯ ಮುಖಂಡರು ಪಾಲ್ಗೊಂಡು ನವ ಜೋಡಿಗೆ ಶುಭಹಾರೈಸಿದರು.

ರಾಜ್ ಠಾಕ್ರೆ ಹಾಗೂ ಅವರ ಪತ್ನಿ ಶರ್ಮಿಳಾ, ರಾಜ್ ಅವರ ಕಸಿನ್ ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಅವರ ಪತ್ನಿ ರಶ್ಮಿ, ಅವರ ಪುತ್ರ ಆದಿತ್ಯ ಹಾಗೂ ಮತ್ತೊಬ್ಬ ಕಸಿನ್ ಜೈ ದೇವ್ ಠಾಕ್ರೆ ಅವರು ಅತಿಥಿಗಳನ್ನು ಸ್ವಾಗತಿಸಿದರು.

ರಾಜ್ ಠಾಕ್ರೆ ಕುಟುಂಬದ ಸ್ನೇಹಿತರು

ರಾಜ್ ಠಾಕ್ರೆ ಕುಟುಂಬದ ಸ್ನೇಹಿತರು

ಹೆಸರಾಂತ ವೈದ್ಯ ಡಾ. ಸಂಜಯ್ ಬೊರುಡೆ ಅವರ ಪುತ್ರಿ ಮಿಥಾಲಿ ಹಾಗೂ ರಾಜ್ ಠಾಕ್ರೆ ಅವರ ಪುತ್ರಿ ಊರ್ವಶಿ ಅವರು ಇತ್ತೀಚಿಗೆ ಜಂಟಿಯಾಗಿ ಫ್ಯಾಷನ್ ಬ್ರ್ಯಾಂಡ್ 'ದಿ ರಾಕ್' ಹೊರ ತಂದಿದ್ದರು. ಅಮಿತ್ ಅವರು ಕಾರ್ಟೂನಿಸ್ಟ್ ಆಗಿದ್ದಾರೆ. ಅಮಿತ್ ಹಾಗೂ ಮಿಥಾಲಿ ಅವರ ಬಾಲ್ಯದ ಗೆಳೆತನ, ಪ್ರೇಮವನ್ನು ವಿವಾಹ ಬಂಧನಕ್ಕೊಳಪಡಿಸಲು ಎರಡು ಕಡೆ ಕುಟುಂಬಗಳು ನಿಶ್ಚಯಿಸಿ, ಡಿಸೆಂಬರ್ 11, 2017ರ ಸರಳ ಸಮಾರಂಭದಲ್ಲಿ ವಿವಾಹ ನಿಶ್ಚಿತಾರ್ಥ ನೆರವೇರಿಸಲಾಗಿತ್ತು.

ಬಾಲಿವುಡ್ ತಾರೆಗಳ ದಂಡು

ಬಾಲಿವುಡ್ ತಾರೆಗಳ ದಂಡು

ಬಾಲಿವುಡ್ ನ ತಾರೆಗಳಾದ ಅಮಿತಾಭ್ ಬಚ್ಚನ್, ಜಿತೇಂದ್ರ, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಊರ್ಮಿಳಾ ಮಾತೋಂಡ್ಕರ್ ಸೇರಿದಂತೆ ಹಲವು ನಟ-ನಟಿಯರು ನವಜೋಡಿಗೆ ಶುಭ ಹಾರೈಸಿದರು.

ರಾಜಕಾರಣಿಗಳ ದಂಡೇ ನೆರೆದಿತ್ತು

ರಾಜಕಾರಣಿಗಳ ದಂಡೇ ನೆರೆದಿತ್ತು

ಬೆಳಿಗ್ಗೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸಿವಿ ರಾವ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಂಕಜಾ ಮುಂಡೆ ಮತ್ತಿತರರು ಪಾಲ್ಗೊಂಡಿದ್ದರು. ಪ್ರಮುಖವಾಗಿ ಕೇಂದ್ರದ ಮಾಜಿ ಸಚಿವ ಸುಶೀಲ್ ಕುಮಾರ್ ಶಿಂಧೆ, ಅವರ ಪುತ್ರಿ ಪ್ರಣಿತಿ ಶಿಂಧೆ, ಮಾಜಿ ಉಪ ಮುಖ್ಯಮಂತ್ರಿ ಜಗನ್ ಭುಜಬಲ್ ಮತ್ತಿತರರು ಪಾಲ್ಗೊಂಡಿದ್ದರು.ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಶರದ್ ಪವಾರ್, ಸುಪ್ರಿಯಾ ಸುಳೆ, ಅಜಿತ್ ಪವಾರ್ ಕೂಡ ಉಪಸ್ಥಿತರಿದ್ದರು.

ಸೆಲೆಬ್ರಿಟಿಗಳಿಂದ ಶುಭಹಾರೈಕೆ

ಸೆಲೆಬ್ರಿಟಿಗಳಿಂದ ಶುಭಹಾರೈಕೆ

ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ, ಹಿರಿಯ ಗಾಯಕಿ ಆಶಾ ಬೋಸ್ಲೆ, ನಟ ರಿತೇಶ್ ದೇಶ್ ಮುಖ್ ಮತ್ತು ಅವರ ಸಹೋದರ ಅಮಿತ್ ದೇಶ್ ಮುಖ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

English summary
Raj Thackeray's son Amit Thackeray married his childhood friend and fashion designer Mitali Borude in a traditional Maharashtrian style ceremony in Mumbai on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X