ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀನಾ ಬೋರಾ ಹತ್ಯೆ ಪ್ರಕರಣ: ಪೀಟರ್ ಮುಖರ್ಜಿಗೆ ಜಾಮೀನು

|
Google Oneindia Kannada News

ಮುಂಬೈ, ಫೆಬ್ರವರಿ 06: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪೀಟರ್ ಮುಖರ್ಜಿಗೆ ಗುರುವಾರ(ಫೆ. 06)ದಂದು ಬಾಂಬೆ ಹೈಕೋರ್ಟಿನಿಂದ ಜಾಮೀನು ಮಂಜೂರಾಗಿದೆ. ಪೀಟರ್ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ ಜಾಮೀನು ಸಿಕ್ಕಿದೆ.

ಶೀನಾ ಬೋರಾ ತಂದೆ ಪೀಟರ್ ಮುಖರ್ಜಿ ವಿರುದ್ಧ ಐಪಿಸಿ ಸೆಕ್ಷನ್ 302, 201, 34, 420, 364 ಹಾಗೂ 120 ಬಿ ಅನ್ವಯ ಪ್ರಕರಣ ದಾಖಲಾಗಿದೆ. ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಹಾಗೂ ಅವರ ಕಾರು ಚಾಲಕ ಶ್ಯಾಮ್ ರಾಯ್, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾರನ್ನು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಶೀನಾ ಬೊರಾ ಹತ್ಯೆ: ಸಂಚು ರೂಪಿಸಿದ್ದು ಪೀಟರ್ ಮುಖರ್ಜಿಯೇ!ಶೀನಾ ಬೊರಾ ಹತ್ಯೆ: ಸಂಚು ರೂಪಿಸಿದ್ದು ಪೀಟರ್ ಮುಖರ್ಜಿಯೇ!

ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರೇ ಖುದ್ದು ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಅವರ ವಿಚಾರಣೆ ನಡೆಸಿದ್ದರು.

2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿತ್ತು.

ಬಾಂಬೆ ಹೈಕೋರ್ಟ್ ಆದೇಶ

ಬಾಂಬೆ ಹೈಕೋರ್ಟ್ ಆದೇಶ

ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಪೀಟರ್ ಮುಖರ್ಜಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದ್ದು, 2,00,000 ಲಕ್ಷ ರು ಶ್ಯೂರಿಟಿ ನೀಡಬೇಕು, ಕೋರ್ಟ್ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

ಪೀಟರ್ ಅವರು ತಮ್ಮ ಪುತ್ರಿ ವಿಧಿ(ದತ್ತು ಪುತ್ರಿ), ಪುತ್ರ ರಾಹುಲ್ ಮುಖರ್ಜಿ ಹಾಗೂ ಇನ್ನಿತರ ಸಾಕ್ಷಿಗಳ ಜೊತೆ ಸಂಪರ್ಕ ಸಾಧಿಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಸದ್ಯ ಆರ್ಥರ್ ರಸ್ತೆಯ ಜೈಲಿನಲ್ಲಿರುವ ಪೀಟರ್ ಗೆ ಜಾಮೀನು ಸಿಕ್ಕಿರುವ ಆದೇಶದ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದೆ.

ಶೀನಾ ಸೋದರನಿಂದ ಪ್ರಕರಣಕ್ಕೆ ತಿರುವು

ಶೀನಾ ಸೋದರನಿಂದ ಪ್ರಕರಣಕ್ಕೆ ತಿರುವು

ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್​ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನಬಹುದು. ಶೀನಾಳ ಜೈವಿಕ ಸೋದರ ಮಿಖೈಲ್ ಬೊರಾಗೆ ಎಲ್ಲದರ ಬಗ್ಗೆ ಅರಿವಿದೆ. ಆತನ ವಿಚಾರಣೆಯಿಂದ ಕೊಲೆಯ ಕಾರಣ ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸರು ವರದಿ ನೀಡಿದ್ದರು. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಂದುವರೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿತ್ತು.

ಪಾಕೆಟ್ ಮನಿ ನೀಡಿಲ್ಲವೆಂದು ಅಮ್ಮನನ್ನೇ ಕೊಲೆಮಾಡಿದನಾ ಮಗ?ಪಾಕೆಟ್ ಮನಿ ನೀಡಿಲ್ಲವೆಂದು ಅಮ್ಮನನ್ನೇ ಕೊಲೆಮಾಡಿದನಾ ಮಗ?

ಶೀನಾ ಕೊಲೆಗೆ ಕಾರಣವೇನು?

ಶೀನಾ ಕೊಲೆಗೆ ಕಾರಣವೇನು?

ಕೊಲೆಯ ಕಾರಣದ ಬಗ್ಗೆ ಹುಡುಕಾಟ ನಡೆಸಿದ ಪೊಲೀಸರಿಗೆ ಇದು ಸೇಫ್ ಲಾಕರ್ ನಲ್ಲಿರಿಸಿದ್ದ 150 ಕೋಟಿ ರು ಗಾಗಿ ನಡೆದ ಕೊಲೆ ಎಂದು ಶಂಕೆ ವ್ಯಕ್ತವಾಗಿತ್ತು. ಇಂದ್ರಾಣಿ ಮುಖರ್ಜಿ ಹಾಗೂ ಆಕೆ ಪತಿ ಪೀಟರ್ ಮುಖರ್ಜಿ ಅವರು ಐಎನ್ ಎಕ್ಸ್ ಮೀಡಿಯಾದಲ್ಲಿದ್ದ ತಮ್ಮ ಷೇರುಗಳನ್ನು 2008-2009ರಲ್ಲಿ ಮಾರಾಟ ಮಾಡಿದ್ದರು. ಇದರಿಂದ ಸುಮಾರು 400 ರಿಂದ 500 ಕೋಟಿ ರು ಸಂಗ್ರಹವಾಗಿತ್ತು. ಶೀನಾ ಬ್ಯಾಂಕ್ ಖಾತೆಯ ಸೇಫ್ ಲಾಕರ್ ನಲ್ಲಿ ಸುಮಾರು 150 ಕೋಟಿ ರು ಇರಿಸಲಾಗಿತ್ತು.

ಇಂದ್ರಾಣಿಗೆ ಆಘಾತ ನೀಡಿದ್ದ ಶೀನಾ

ಇಂದ್ರಾಣಿಗೆ ಆಘಾತ ನೀಡಿದ್ದ ಶೀನಾ

ತನ್ನ ಖಾತೆಯಲ್ಲಿ ಭಾರಿ ಮೊತ್ತದ ಹಣ ಇರುವುದು ಶೀನಾಗೆ ತಡವಾಗಿ ತಿಳಿದು ಬಂದಿದೆ. ಮಗಳ ಬಳಿ ಹಣ ಇದ್ದರೆ ಸೇಫ್ ಎಂದು ತಿಳಿದಿದ್ದ ಇಂದ್ರಾಣಿಗೆ ಶೀನಾ ಆಘಾತ ನೀಡಿದ್ದಾರೆ. ತಮ್ಮ ಬಳಿ ಇದ್ದ ಹಣವನ್ನು ರವಾನಿಸಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಇಂದ್ರಾಣಿ ಶೀನಾ ಹತ್ಯೆಗೆ ಮುಂದಾಗಿದ್ದಾರೆ.

ಅನಾಮಿಕ ಕರೆಯಿಂದ ಸಿಕ್ಕ ಸುಳಿವು

ಅನಾಮಿಕ ಕರೆಯಿಂದ ಸಿಕ್ಕ ಸುಳಿವು

ಇಂದ್ರಾಣಿಗೆ ಆಕೆಯ ಕಾರು ಚಾಲಕ ಶ್ಯಾಮ್ ರಾಯ್,ಮಾಜಿ ಪತಿ ಸಂಜೀವ್ ಖನ್ನಾ ನೆರವಾಗಿದ್ದರು. 2012ರಲ್ಲಿ ಮುಂಬೈನಲ್ಲಿ ಕೊಲೆ ಮಾಡಿ ರಾಯ್ ಗಢದ ಕಾಡೊಂದರಲ್ಲಿ ಶವವನ್ನು ಸುಟ್ಟು ಹಾಕಿದ್ದರು. ಕೋಲ್ಕತ್ತಾ ಮೂಲದ ಸಿದ್ದಾರ್ಥ್ ದಾಸ್ ಅವರ ಪುತ್ರಿ ಶೀನಾ ಹತ್ಯೆ ನಂತರ ಅನೇಕ ಕಥೆಗಳು ಹುಟ್ಟಿಸಲಾಗಿತ್ತು. ಮೂರು ವರ್ಷಗಳ ನಂತರ ಪೊಲೀಸರಿಗೆ ಸ್ಕೈಪ್ ಮೂಲಕ ಬಂದ ಅನಾಮಿಕ ಕರೆಯಿಂದ ಇಂದ್ರಾಣಿ ಹಾಗೂ ಆಕೆಯ ಸಹಚರರ ಬಣ್ಣ ಬಯಲಾಗಿತ್ತು.

English summary
Peter Mukerjea, accused in the Sheena Bora murder case, has been granted bail by the Bombay High Court. The judge observed that prima facie there was no evidence against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X