• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರಕ್ಕೆ ತೆರಳಬೇಕಾದಲ್ಲಿ RT-PCR ತಪಾಸಣೆ ಕಡ್ಡಾಯ!

|

ಮುಂಬೈ, ನವೆಂಬರ್.23: ಮಹಾರಾಷ್ಟ್ರದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಶಿಸ್ತುಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದಿಂದ ಹೊರ ಹೋಗುವ ಮತ್ತು ರಾಜ್ಯವನ್ನು ಪ್ರವೇಶಿಸುವ ಪ್ರತಿಯೊಬ್ಬರಿಗೂ ನವೆಂಬರ್.25ರಿಂದ ಈ ಮಾರ್ಗಸೂಚಿ ಅನ್ವಯವಾಗಲಿದೆ.

ನವದೆಹಲಿ, ಎನ್ಆರ್ ಸಿ, ರಾಜಸ್ಥಾನ, ಗೋವಾ ಮತ್ತು ಗುಜರಾತ್ ರಾಜ್ಯಗಳಿಗೆ ತೆರಳುವ ಮತ್ತು ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಕೊರೊನಾವೈರಸ್ ತಪಾಸಣೆ ಕಡ್ಡಾಯಗೊಳಿಸಲಾಗಿದೆ.

ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ "Cheap And Best" ಲಸಿಕೆ!

ಕೊವಿಡ್-19 ಸೋಂಕಿನ ಲಕ್ಷಣಗಳು ಇಲ್ಲದ ಪ್ರಯಾಣಿಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಆದರೆ, ಕೊರೊನಾವೈರಸ್ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಗೆ ಪ್ರಯಾಣಿಸುವುದಕ್ಕೆ ಯಾವುದೇ ಅನುಮತಿ ಇರುವುದಿಲ್ಲ ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕೊವಿಡ್-19 ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ:

ನವದೆಹಲಿ, ಎನ್ಆರ್ ಸಿ, ರಾಜಸ್ಥಾನ, ಗೋವಾ ಮತ್ತು ಗುಜರಾತ್ ನಿಂದ ವಾಯುಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಕೊವಿಡ್-19 ಸೋಂಕು ತಗುಲಿಲ್ಲ ಎಂಬ ಬಗ್ಗೆ ವರದಿ ತೋರುವುದನ್ನು ಕಡ್ಡಾಯಗೊಳಿಸಲಾಗಿದೆ. ಮಹಾರಾಷ್ಟ್ರದಲ್ಲಿ ವಿಮಾನವು ಲ್ಯಾಂಡಿಂಗ್ ಆಗುವುದಕ್ಕೂ 72 ಗಂಟೆಗೂ ಮೊದಲು ನಡೆಸಿದ RT-PCR ತಪಾಸಣೆಯ ವರದಿಯನ್ನು ಪ್ರಯಾಣ ಆರಂಭಿಸುವುದಕ್ಕೂ ಮೊದಲು ಸಲ್ಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

English summary
Passengers Travelling To Maharashtra From Delhi, Rajasthan, Goa Gujarat To Must Have RT-PCR Testing Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X