ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿಸಿ ಒಂದು ಹೊಸ ದೇಶ"

|
Google Oneindia Kannada News

ಮುಂಬೈ, ನವೆಂಬರ್.23: ಭಾರತೀಯ ಜನತಾ ಪಕ್ಷವು ಒಂದು ವೇಳೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತವನ್ನು ಒಗ್ಗೂಡಿಸಿ ಒಂದು ಹೊಸ ದೇಶವನ್ನು ಹುಟ್ಟು ಹಾಕುವುದಾದರೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಅದನ್ನು ಸ್ವಾಗತಿಸಲಿದೆ ಎಂದು ಮಹಾರಾಷ್ಟ್ರದ ಸಂಪುಟ ಸಚಿವ ನವಾಬ್ ಮಲ್ಲಿಕ್ ಹೇಳಿದ್ದಾರೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಹಿಂದೆ ನೀಡಿದ ಹೇಳಿಕೆಗೆ ಸಚಿವ ನವಾಬ್ ಮಲ್ಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಕರಾಚಿಯು ಭಾರತಕ್ಕೆ ಸೇರಿದ್ದು ಎಂದು ದೇವೇಂದ್ರ ಜೀ ಅವರು ಹೇಳಿದ್ದರು. ಇದೀಗ ನಾವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳೆಲ್ಲ ಸೇರಿಕೊಂಡು ಹೊಸ ದೇಶವಾಗಲಿ ಎನ್ನುತ್ತಿದ್ದೇವೆ" ಎಂದು ಹೇಳಿದ್ದಾರೆ.

ಮಹಾರಾಷ್ಟ್ರಕ್ಕೆ ತೆರಳಬೇಕಾದಲ್ಲಿ RT-PCR ತಪಾಸಣೆ ಕಡ್ಡಾಯ!ಮಹಾರಾಷ್ಟ್ರಕ್ಕೆ ತೆರಳಬೇಕಾದಲ್ಲಿ RT-PCR ತಪಾಸಣೆ ಕಡ್ಡಾಯ!

"ಬರ್ಲಿನ್ ಗೋಡೆಯನ್ನು ಒಡೆದು ಹಾಕಿರುವಾಗ ಭಾರತಕ್ಕೆ ಅದೇಕೆ ಸಾಧ್ಯವಾಗುವುದಿಲ್ಲ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳು ಒಂದಾಗಬೇಕಿದೆ. ಈ ಮೂರು ರಾಷ್ಟ್ರಗಳನ್ನು ಒಂದುಗೂಡಿಸಿ, ಒಂದೇ ದೇಶವನ್ನು ಕಟ್ಟುವುದಕ್ಕೆ ಬಿಜೆಪಿಯು ಬಯಸಿದರೆ ನಾವು ಅದನ್ನು ಖಂಡಿತವಾಗಿಯೂ ಸ್ವಾಗತಿಸುತ್ತೇವೆ" ಎಂದು ಎನ್ ಸಿಪಿ ಸಚಿವ ನವಾಬ್ ಮಲ್ಲಿಕ್ ತಿಳಿಸಿದ್ದಾರೆ.

Pakistan, Bangladesh, India, Should Be Merged: Maharashtra Minister To BJP

ಮುಂಬೈ ಮಹಾನಗರ ಪಾಲಿಕೆ ಚುನಾವಣೆ:

ಮಹಾರಾಷ್ಟ್ರದ ಮುಂಬೈ ಮಹಾನಗರ ಪಾಲಿಗೆ ಚುನಾವಣೆಗೆ ಇನ್ನು 15 ತಿಂಗಳುಗಳಷ್ಟೇ ಬಾಕಿ ಉಳಿದಿದೆ. ಶಿವಸೇನೆ, ಕಾಂಗ್ರೆಸ್ ಜೊತೆಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಒಟ್ಟಾಗಿ ಈಗಾಗಲೇ ಮಹಾ ವಿಕಾಸ್ ಅಘಾದಿ ಒಕ್ಕೂಟದ ಸರ್ಕಾರವನ್ನು ರಚಿಸಿವೆ. ಮುಂದಿನ 15 ತಿಂಗಳಿನಲ್ಲಿ ಎದುರಾಗುವ ಬೃಹತ್ ಮುಂಬೈ ಮಹಾನಗರ ಪಾಲಿಕೆ(BMC) ಚುನಾವಣೆಯಲ್ಲಿ ಇದೇ ಒಕ್ಕೂಟದ ಮೂರೂ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಲಿವೆ ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.

English summary
Pakistan, Bangladesh, India, Should Be Merged: Maharashtra Minister Nawab Malik Says To BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X