ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಡಿಗೆ ಹತ್ತು ದಿನದಲ್ಲಿ ಹರಿದುಬಂತು 3.09 ಕೋಟಿ ರೂ. ದೇಣಿಗೆ

|
Google Oneindia Kannada News

ಮುಂಬೈ, ನವೆಂಬರ್ 25: ಕಳೆದ ಹತ್ತು ದಿನದಲ್ಲಿ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ 1 ಲಕ್ಷ ಭಕ್ತಾದಿಗಳು ಆಗಮಿಸಿದ್ದು, 3.09 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ.

ದೇವಾಲಯಗಳು ತೆರೆಯುವುದಕ್ಕೆ ನ.16 ರಂದು ಅನುಮತಿ ನೀಡಿದ್ದ ಸಿಎಂ ಠಾಕ್ರೆ, ಕೊರೊನಾ ರಾಕ್ಷಸ ನಮ್ಮ ನಡುವೆಯೇ ಇದೆ ಎಂಬುದನ್ನು ಮರೆಯಬಾರದು ಎಂದು ಜನತೆಗೆ ಕಿವಿಮಾತು ಹೇಳಿದ್ದರು.

ಒಂದು ಸಾವಿರ ಜನಕ್ಕೆ ಸೀಮಿತವಾಗಿ ಪಂಚಲಿಂಗ ದರ್ಶನಒಂದು ಸಾವಿರ ಜನಕ್ಕೆ ಸೀಮಿತವಾಗಿ ಪಂಚಲಿಂಗ ದರ್ಶನ

3.09 ಕೋಟಿ ರೂಪಾಯಿ ಕಾಣಿಕೆಯ ಜೊತೆಗೆ 2,85,629 ರೂಪಾಯಿ ಬೆಲೆಬಾಳುವ 64 ಗ್ರಾಮ್ ಚಿನ್ನ, 93,000 ರೂಪಾಯಿ ಬೆಲೆ ಬಾಳುವ 2.8 ಕೆ.ಜಿ ಬೆಳ್ಳಿಯನ್ನು ಶಿರಡಿ ಸಾಯಿಬಾಬಾ ದೇವಾಲಯಕ್ಕೆ ನೀಡಲಾಗಿದೆ.

Over 1 Lakh Devotees Donate Rs 3.09 Crore To Shirdi Temple

ನವೆಂಬರ್ 15 ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದ್ದರು. ಹೋಳಿ, ಗಣೇಶ ಚತುರ್ಥಿ, ದೀಪಾವಳಿ, ನವರಾತ್ರಿ ಏನೇ ಇರಲಿ ಕೊರೊನಾವನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದು ಹೇಳಿದ್ದರು.

ಕೇಂದ್ರ ಗೃಹ ಸಚಿವಾಲಯವು ಹೊಸ ಕೊವಿಡ್ 19 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊವಿಡ್ 19 ರೋಗದ ವಿರುದ್ಧ ಕಣ್ಗಾವಲು, ನಿಯಂತ್ರಣ ಮತ್ತು ಎಚ್ಚರಿಕೆಗಾಗಿ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಹೊಸ ಮಾನದಂಡಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿದ್ದು, ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ.

English summary
The Sai Baba Temple in Shirdi which reopened on November 16, 2020, after Uddhav Thackeray-led government's nod, witnessed over 1 lakh devotees till Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X