ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಂಟ್ ಜಿಪ್ ತೆರೆಯುವುದು ಪೋಕ್ಸೋ ಅಡಿ 'ಲೈಂಗಿಕ ದೌರ್ಜನ್ಯ'ವಲ್ಲ: ಮತ್ತೊಂದು ವಿವಾದಾತ್ಮಕ ತೀರ್ಪು

|
Google Oneindia Kannada News

ನಾಗಪುರ, ಜನವರಿ 28: ಚರ್ಮದಿಂದ ಚರ್ಮಕ್ಕೆ ಸ್ಪರ್ಶವಿರದಂತೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಎದೆಯನ್ನು ಸ್ಪರ್ಶಿಸುವುದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಅಪರಾಧವಾಗುವುದಿಲ್ಲ ಎಂಬ ವಿವಾದಾತ್ಮಕ ತೀರ್ಪು ನೀಡಿದ್ದ ಮುಂಬೈ ಹೈಕೋರ್ಟ್‌ನ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲಾ ಮತ್ತೊಂದು ಆಘಾತಕಾರಿ ತೀರ್ಪು ನೀಡಿದ್ದಾರೆ.

ಹೆಣ್ಣುಮಗುವಿನ ಕೈ ಹಿಡಿದುಕೊಳ್ಳುವುದು ಮತ್ತು ಪ್ಯಾಂಟ್‌ನ ಜಿಪ್ ತೆಗೆಯುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ 2012ರ ಅಡಿ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದಲ್ಲಿ ಬರುವುದಿಲ್ಲ. ಈ ಕೃತ್ಯವು ಐಪಿಸಿ ಸೆಕ್ಷನ್ 354- ಎ (ಐ) ಅಡಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾತ್ರ ಬರುತ್ತದೆ ಎಂದು ಅವರು ಹೇಳಿದ್ದಾರೆ.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ತಡೆಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ತಡೆ

ಐದು ವರ್ಷದ ಹೆಣ್ಣುಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 50 ವರ್ಷದ ವ್ಯಕ್ತಿಗೆ ವಿಧಿಸಲಾಗಿದ್ದ ಶಿಕ್ಷೆಯ ವಿರುದ್ಧ ಸಲ್ಲಿಸಲಾಗಿದ್ದ ಅಪರಾಧ ಮನವಿಯ ವಿಚಾರಣೆ ನಡೆಸಿದ ನ್ಯಾ. ಪುಷ್ಪಾ ಗಣೇದಿವಾಲಾ ಅವರ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಮುಂದೆ ಓದಿ.

ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯ

ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯ

ವ್ಯಕ್ತಿಯ ವಿರುದ್ಧದ ಪ್ರಕರಣ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ, ಪೋಕ್ಸೋ ಕಾಯ್ದೆಯ ಸೆಕ್ಷನ್ 10ರ ಅಡಿ ಶಿಕ್ಷಾರ್ಹ 'ತೀವ್ರತರದ ಲೈಂಗಿಕ ದೌರ್ಜನ್ಯ' ಎಂದು ಪರಿಗಣಿಸಿತ್ತು. ಆತನಿಗೆ ಐದು ವರ್ಷಗಳ ಕಠಿಣ ಶಿಕ್ಷೆ ಹಾಗೂ 25,000 ರೂ ದಂಡ, ತಪ್ಪಿದ್ದಲ್ಲಿ ಆರು ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಿತ್ತು.

ಐಪಿಸಿ ಸೆಕ್ಷನ್ ಅಡಿ ಶಿಕ್ಷೆ

ಐಪಿಸಿ ಸೆಕ್ಷನ್ ಅಡಿ ಶಿಕ್ಷೆ

ಆದರೆ ಪೋಕ್ಸೋ ಕಾಯ್ದೆಯಡಿಯ ಸೆಕ್ಷನ್ 8, 10, 12ರ ಅಡಿ ಆತನ ಶಿಕ್ಷೆಯ ತೀರ್ಪನ್ನು ಬದಿಗಿರಿಸಿದ ನ್ಯಾಯಮೂರ್ತಿ ಪುಷ್ಪಾ, ಗರಿಷ್ಠ ಮೂರು ವರ್ಷ ಶಿಕ್ಷೆ ನೀಡುವ ಐಪಿಸಿ ಸೆಕ್ಷನ್ 354 (ಎ) (ಐ) ಅಡಿ ಆತನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದರು.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪುಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು

ಇದು ಲೈಂಗಿಕ ಕಿರುಕುಳ ಪ್ರಕರಣ

ಇದು ಲೈಂಗಿಕ ಕಿರುಕುಳ ಪ್ರಕರಣ

ಈ ಪ್ರಕರಣವು ಲೈಂಗಿಕ ಕಿರುಕುಳದ ಅಡಿ ಬರುತ್ತದೆಯೇ ವಿನಾ, ಲೈಂಗಿಕ ದೌರ್ಜನ್ಯದ ಅಪರಾಧ ವ್ಯಾಪ್ತಿಗೆ ಬರುವುದಿಲ್ಲ. ಐಪಿಸಿ ಸೆಕ್ಷನ್ 354 (ಎ) (ಐ) ದೈಹಿಕ ಸಂಪರ್ಕದ ಲೈಂಗಿಕ ಕಿರುಕುಳದ ಅಪರಾಧವನ್ನು ಒಳಗೊಂಡಿದೆ. ಈ ಪ್ರಕರಣ ಇದೇ ರೀತಿಯ ಸ್ವರೂಪ ಹೊಂದಿದೆ ಎಂದು ಹೇಳಿದರು.

ತಾಯಿ ನೀಡಿದ್ದ ದೂರು

ತಾಯಿ ನೀಡಿದ್ದ ದೂರು

ಮಗುವಿನ ತಾಯಿ ನೀಡಿದ್ದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ವ್ಯಕ್ತಿಯ ಪ್ಯಾಂಟಿನ ಜಿಪ್ ತೆರೆದಿತ್ತು. ಆತ ತನ್ನ ಮಗುವಿನ ಕೈಗಳನ್ನು ಹಿಡಿದುಕೊಂಡಿದ್ದನ್ನು ನೋಡಿದ್ದಾಗಿ ತಾಯಿ ಆರೋಪಿಸಿದ್ದಳು. ಆರೋಪಿ ತನ್ನ ಪ್ಯಾಂಟ್‌ನಿಂದ ಗುಪ್ತಾಂಗವನ್ನು ಹೊರತೆಗೆದಿದ್ದಾಗಿ ಮತ್ತು ಮಲಗಲು ಹಾಸಿಗೆಗೆ ಬರುವಂತೆ ಹೇಳಿದ್ದಾಗಿ ಮಗು ತನ್ನ ಬಳಿ ತಿಳಿಸಿದೆ ಎಂದೂ ಆಕೆ ದೂರಿನಲ್ಲಿ ತಿಳಿಸಿದ್ದಳು.

ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್

'ಚರ್ಮದಿಂದ ಚರ್ಮ ಸ್ಪರ್ಶ' ಮಾತ್ರ ಅಪರಾಧ

'ಚರ್ಮದಿಂದ ಚರ್ಮ ಸ್ಪರ್ಶ' ಮಾತ್ರ ಅಪರಾಧ

ಕೆಲವು ದಿನಗಳ ಹಿಂದಷ್ಟೇ ವಿವಾದಾತ್ಮಕ ತೀರ್ಪು ನೀಡಿದ್ದ ಇದೇ ನ್ಯಾಯಮೂರ್ತಿ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಿಂದ ವ್ಯಕ್ತಿಯನ್ನಯ ಖುಲಾಸೆಗೊಳಿಸಿತ್ತು. ಬಟ್ಟೆಯ ಮೇಲಿನಿಂದ ಬಾಲಕಿಯ ಎದೆಯನ್ನು ಸವರಿದ್ದು, ಚರ್ಮದಿಂದ ಚರ್ಮದ ಸಂಪರ್ಕವಲ್ಲದ ಕಾರಣ ಅದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿದ್ದರು. ಈ ಆದೇಶಕ್ಕೆ ಸುಪ್ರೀಂಕೋರ್ಟ್ ಬುಧವಾರ ತಡೆ ನೀಡಿತ್ತು.

English summary
Justice Pushpa Ganediwala, Nagupr Bench of Bombay High Court said holding a girls hands and opening zip of pants is not sexual assault under POCSO Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X