• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆ್ಯಂಬಿ ವ್ಯಾಲಿ ಹರಾಜು: ಕೇವಲ ಇಬ್ಬರಿಂದ ಮಾತ್ರ ಬಿಡ್

|

ಮುಂಬೈ, ಸೆಪ್ಟೆಂಬರ್ 18: ಸುಪ್ರೀಂ ಕೋರ್ಟ್ ನ ಆದೇಶದಂತೆ ಹಾರಾಜಿಗೆ ಸಿದ್ಧವಾಗಿರುವ ಆ್ಯಂಬಿ ವ್ಯಾಲಿಗಾಗಿ ಕೇವಲ ಎರಡು ಸಂಸ್ಥೆಗಳು ಮಾತ್ರ ಬಿಡ್ ಮಾಡಿವೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ಹೇಳಿದೆ.

'ಸಹಾರ' ಕಂಪನಿಯ ಒಡೆತನದ ಈ ವ್ಯಾಲಿಯನ್ನು ಹರಾಜು ಹಾಕುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು. ಅದರಂತೆ, ಮುಂಬೈ ಹೈಕೋರ್ಟ್ ನ ಲಿಕ್ವಿಡೇಟರ್ ವತಿಯಿಂದ ಸುಮಾರು 37 ಸಾವಿರ ಕೋಟಿ ರು. ಮೌಲ್ಯವನ್ನು ಈ ವ್ಯಾಲಿಗೆ ನಿಗದಿಗೊಳಿಸಲಾಗಿದೆ. ಅಕ್ಟೋಬರ್ 10, 11ರಂದು ಈ ವ್ಯಾಲಿಯ ಬಹಿರಂಗ ಹರಾಜು ನಡೆಯಲಿದ್ದು, ಈಗಾಗಲೇ ಇದಕ್ಕೆ ಬಿಡ್ ಆಹ್ವಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಡ್ ಗೆ ಮುಕ್ತ ಆಹ್ವಾನ ನೀಡಲಾಗಿತ್ತು. ಈ ಐಶಾರಾಮಿ ಟೌನ್ ಶಿಪ್ ಕೊಳ್ಳಲು ನಾನಾ ಕಂಪನಿಗಳು ಭಾರೀ ಸ್ಪರ್ಧೆಯೊಡ್ಡಲಿವೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷೆಯ ಸ್ಪರ್ಧೆಯ ಬಿಡ್ ಬಂದಿಲ್ಲ. ಕೇವಲ ಎರಡು ಕಂಪನಿಗಳು ಮಾತ್ರ ಇದಕ್ಕೆ ಬಿಡ್ ಸಲ್ಲಿಸಿವೆ ಎಂದು ಹೇಳಲಾಗಿದೆ.

ಬಿಡ್ ನ ಪ್ರತಿಯೊಂದು ನಡೆಗಳು ಸುಪ್ರೀಂ ಕೋರ್ಟ್ ನ ಹದ್ದಿನ ಕಣ್ಣಿನಡಿಯೇ ನಡೆಯುತ್ತಿರುವುದರಿಂದ ಈ ವ್ಯಾಲಿ ಖರೀದಿ ಹರಾಜಿನಲ್ಲಿ ಭಾಗವಹಿಸಲು ಹಲವಾರು ಕಂಪನಿಗಳು ಹಿಂದೇಟು ಹಾಕಿವೆ ಎಂದು ಹೇಳಲಾಗಿದೆ.

ಈ ಎರಡು ಕಂಪನಿಗಳ ಹೆಸರುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಗೊಳಿಸಿಲ್ಲ. ಆದರೆ, ಈ ಕಂಪನಿಗಳಲ್ಲಿ ಒಂದು ಕಾರ್ಪೊರೇಟ್ ಜಗತ್ತಿನ ಸಂಸ್ಥೆಯಾದರೆ, ಮತ್ತೊಂದು ಬಂಡವಾಳ ಹೂಡಿಕೆ ಕ್ಷೇತ್ರದ ದೈತ್ಯ ಸಂಸ್ಥೆಯೆಂದು ಹೇಳಲಾಗಿದೆ.

ಆಸಕ್ತಿದಾಯಕವಾದ ಮತ್ತೊಂದು ವಿಚಾರವೆಂದರೆ, ಈ ಎರಡೂ ಕಂಪನಿಗಳು ಭಾರತದವಲ್ಲ ಎಂದೂ ಹೇಳಲಾಗಿದೆ. ಇವು ಚೀನಾ ಅಥವಾ ಜಪಾನ್ ಮೂಲದ ಕಂಪನಿಗಳಾಗಿರಬಹುದು ಎಂದು ಹೇಳಲಾಗಿದೆ.

English summary
Only two potential bidders are believed to have shown initial interest for embattled Sahara group's super luxurious Aamby Valley resort town, which has been put up for a Supreme Court ordered auction by the official liquidator at a reserve price of Rs 37,392 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more